Polyester Flags: ಇವರ ಚಿಂತನೆಯೇ ರಾಷ್ಟ್ರದ್ರೋಹದ್ದು, ಧ್ವಜವೇ ಬೇರೆ; ಕೇಂದ್ರದ ವಿರುದ್ಧ ಉಮಾಶ್ರೀ ವಾಗ್ದಾಳಿ

ಬಿಜೆಪಿಯವರ ರಾಷ್ಟ್ರಧ್ವಜವೇ ಬೇರೆ ಇದೆ. ಅವರ ರಾಷ್ಟ್ರ ಪರಿಕಲ್ಪನೆಯೇ ಬೇರೆ ಆಗಿದೆ. ಅದಕ್ಕಾಗಿಯೇ ರಾಷ್ಟ್ರ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲಿಯೂ ತರೋಕೆ ತಿದ್ದುಪಡಿ ತಂದಿದ್ದಾರೆ ಎಂದು ಮಾಜಿ ಸಚಿವೆ ನಟಿ ಉಮಾಶ್ರೀ ಆರೋಪಿಸಿದ್ದಾರೆ.

ಪ್ರತಿಭಟನೆ

ಪ್ರತಿಭಟನೆ

  • Share this:
ಹುಬ್ಬಳ್ಳಿ - ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Amrit Mahotsav) ಹಿನ್ನೆಲೆಯಲ್ಲಿ ಧ್ವಜ ಸಂಹಿತೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜಕ್ಕೆ (Polyester Flags) ಅವಕಾಶ ನೀಡಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ, ರಾಷ್ಟ್ರಧ್ವಜ (National Flag) ರಕ್ಷಣೆಗಾಗಿ ಹುಬ್ಬಳ್ಳಿಯಲ್ಲಿ ಹೋರಾಟ ಆರಂಭಗೊಂಡಿದೆ. ಹುಬ್ಬಳ್ಳಿಯ (Hubballi) ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ವಿರೋಧಿಸಿ ಸತ್ಯಾಗ್ರಹ ನಡೆಸಲಾಯಿತು. ಕರ್ನಾಟಕ ಖಾದಿ ಗ್ರಾಮೋದ್ಯೋಗ (Khadi Gramodyoga) ಸಂಯುಕ್ತ ಸಂಘದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ (Protest) ನಡೆಯಿತು. ಪಾಲಿಸ್ಟರ್ ಬಟ್ಟೆಯಿಂದ ಧ್ವಜ ಸಿದ್ಧಪಡಿಸಲು ಮುಂದಾದ ಕೇಂದ್ರ ಸರ್ಕಾರದ (Central Government) ಕ್ರಮ ಖಂಡಿಸಲಾಯಿತು.

ಮಾನಕ್ ಬ್ಯೂರೊದಿಂದ ಮಾನ್ಯತಾ ಪಡೆದ ಹುಬ್ಬಳ್ಳಿಯ ಬೆಂಗೇರಿಯ ರಾಷ್ಟ್ರಧ್ವಜ ತಯಾರಕ ಘಟಕವಾಗಿದ್ದು, ಇಂತಹ ತಯಾರಕ ಘಟಕವನ್ನ ಮುಚ್ಚಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರಧ್ವಜ ಸಂಹಿತೆಯನ್ನ ತಿದ್ದುಪಡಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಲಾಯಿತು.

ಸಾಂಕೇತಿಕವಾಗಿ, ಶಾಂತವಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಸತ್ಯಾಗ್ರಹದಲ್ಲಿ ಸ್ವತಂತ್ರ ಹೋರಾಟಗಾರ ಗುಂಡುರಾಯ್ ದೇಸಾಯಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವೆ, ನಟಿ ಉಮಾಶ್ರೀ, ಕೆ.ಕೆ.ಜಿ.ಎಸ್.ಎಸ್. ಅಧ್ಯಕ್ಷ ಕೆ.ವಿ.ಪತ್ತಾರ, ಕಾರ್ಯದರ್ಶಿ ಶಿವಾನಂದ ಮಠಪತಿ, ಬಸವಪ್ರಭು ಹೊರಕೇರಿ,  ಸೇರಿದಂತೆ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ:  Yadagiri: ಹಂತಕರನ್ನು ಶೂಟ್ ಔಟ್ ಮಾಡಿ! BJP ಮುಖಂಡ ಪ್ರವೀಣ್ ಹತ್ಯೆಗೆ ಶಾಸಕ ರಾಜುಗೌಡ ಅಕ್ರೋಶ

ರಾಷ್ಟ್ರ ಧ್ವಜ ನಮ್ಮ ಸ್ವಾಭಿಮಾನದ ಸಂಕೇತ

ಕೇಂದ್ರ ಸರ್ಕಾರದ ಧೋರಣೆಗೆ ಉಮಾಶ್ರೀ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಮೇಡ್ ಇನ್ ಇಂಡಿಯಾ ಅಂತಾರೆ. ಆದ್ರೆ ಈಗ ಚೀನಾದಿಂದ ಧ್ವಜ ತರಿಸಲು ಹೊರಟಿದ್ದಾರೆ. ನಮ್ಮಲ್ಲಿಯೇ 4,500 ಖಾದಿ ಗ್ರಾಮೋದ್ಯೋಗ ಸಂಸ್ಥೆಗಳಿವೆ. ಮುಂಚಿತವಾಗಿಯೇ ಹೇಳಿದ್ದರೆ ರಾಷ್ಟ್ರಧ್ವಜ ತಯಾರಿಸುತ್ತಿದ್ದರು.

Congress leaders Umashree support to khadi sangha protesting decision on polyester flags
ಪ್ರತಿಭಟನೆ


ಈಗ ದಿಢೀರಾಗಿ ಹೇಳಿ ಕೋಟ್ಯಾಂತರ ಧ್ವಜ ಕೊಡಿ ಅಂದರೆ ಹೇಗೆ ಸಾಧ್ಯ ಅಂತ ಪ್ರಶ್ನಿಸಿದರು. ರಾಷ್ಟ್ರ ಧ್ವಜ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ. ಈ ಹಿಂದೆಯೂ ರಾಜರ ಆಳ್ವಿಕೆ ಸಂದರ್ಭದಲ್ಲಿ ಧ್ವಜಗಳಿದ್ದವು.

ಸ್ವಾಂತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿ ಹೋರಾಟಕ್ಕೆ ತೀವ್ರತೆ ನೀಡಲು ಈ ಧ್ವಜವೂ ಒಂದು ಕಾರಣ. 75 ವರ್ಷಗಳ ನಂತರ ಈಗ ಏಕಾಏಕಿ ತಿದ್ದುಪಡಿ ತಂದಿದ್ದೇಕೆ ಅಂತ ಉಮಾಶ್ರೀ ಪ್ರಶ್ನಿಸಿದರು. ಕೂಡಲೇ ನೀತಿ ಸಂಹಿತೆ ತಿದ್ದುಪಡಿ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಬಾರದು ಎಂದು ವೇದಿಕೆಯಲ್ಲಿದ್ದ ಮುಖಂಡರು ಆಗ್ರಹಿಸಿದರು.

ಬಿಜೆಪಿ, RSSನವರ ಧ್ವಜವೇ ಬೇರೆ

ಬಿಜೆಪಿಯವರ ರಾಷ್ಟ್ರಧ್ವಜವೇ ಬೇರೆ ಇದೆ. ಅವರ ರಾಷ್ಟ್ರ ಪರಿಕಲ್ಪನೆಯೇ ಬೇರೆ ಆಗಿದೆ. ಅದಕ್ಕಾಗಿಯೇ ರಾಷ್ಟ್ರ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲಿಯೂ ತರೋಕೆ ತಿದ್ದುಪಡಿ ತಂದಿದ್ದಾರೆ ಎಂದು ಮಾಜಿ ಸಚಿವೆ ನಟಿ ಉಮಾಶ್ರೀ ಆರೋಪಿಸಿದ್ದಾರೆ.

ಬೆಂಗೇರಿಯಲ್ಲಿ ರಾಷ್ಟ್ರಧ್ವಜ ಹೋರಾಟದಲ್ಲಿ ಭಾಗಿಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ ಇದೆ. ನಮ್ಮ ರಾಷ್ಟ್ರಧ್ವಜಕ್ಕೆ ಮೌಲ್ಯ, ಘನತೆ ಇದೆ, ಇದು ನಮ್ಮ ಸ್ವಾಭಿಮಾನದ ಸಂಕೇತ. ಇದನ್ನ ಹೊರದೇಶದವರು ಸಿದ್ಧಪಡಿಸಬಾರದು. ಕೇಂದ್ರ ಸರ್ಕಾರಕ್ಕೆ ಇದೇನಾ ದೇಶಾಭಿಮಾನ ಎಂದು ಉಮಾಶ್ರೀ ಪ್ರಶ್ನೆ ಹಾಕಿದರು.

Congress leaders Umashree support to khadi sangha protesting decision on polyester flags
ಪ್ರತಿಭಟನೆ


ಇವರದ್ದು ರಾಷ್ಟ್ರದ್ರೋಹದ ಚಿಂತನೆ

ಇವರ ರಾಷ್ಟ್ರಗೀತೆನೇ ಬೇರೆ, ಧ್ವಜನೇ ಬೇರೆ. ಇವರ ಆರ್‌ಎಸ್‌ಎಸ್‌ ಧ್ವಜವೇ ಬೇರೆ ಇದೆ. ರಾಷ್ಟ್ರಧ್ವಜ ಅವರ ಧ್ವಜ ಅಲ್ಲವೇ ಅಲ್ಲ, ಅವರ ಧ್ವಜವೇ ಬೇರೆ, ಅವರು ಕಾಣುತ್ತಿರುವ ಕನಸೆ ಬೇರೆ, ಅವರ ಕಲ್ಪನೆ ಬೇರೆ ಇದೆ. ನಾವು ಸುಮ್ಮನೆ ‌ಕುಳಿತುಕೊಳ್ಳಲು ಆಗುವುದಿಲ್ಲ. ಬಾಯಲ್ಲಿ ಮೇಕ್ ಇನ್ ಇಂಡಿಯಾ, ಧ್ವಜಗಳನ್ನ ತರಿಸಿಕೊಳ್ಳುವುದು ಚೀನಾದಿಂದ. ಪಾಲಿಸ್ಟರ್ ಬಟ್ಟೆಯ ಧ್ವಜಯನ್ನೆ ಬಳಸಬಹುದು ಎನ್ನುವ ಚಿಂತನೆ ರಾಷ್ಟ್ರದ್ರೋಹವಾಗಿದೆ.

ಇದನ್ನೂ ಓದಿ:  Belagavi: ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆಗೆ ಅದ್ಧೂರಿ ಚಾಲನೆ

ರಾಷ್ಟ್ರಧ್ವಜವನ್ನ ಹೊರದೇಶದಿಂದ ತರಿಸಿಕೊಳ್ಳವುದು ಸರಿಯಲ್ಲ. ದೇಶದಲ್ಲಿರುವ ರಾಷ್ಟ್ರಧ್ವಜ ತಯಾರಕ ಘಟಕದಿಂದ ಧ್ವಜಗಳನ್ನ‌ ತರೆಸಿಕೊಂಡಿದ್ದರೆ ಅದರ ಮೌಲ್ಯ ಹೆಚ್ಚುತ್ತಿತ್ತು. ಈ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು. ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ, ಕೃತಿಯಲ್ಲಿ ಮಾಡಿ ತೋರಿಸಿ ಎಂದು ಉಮಾಶ್ರೀ ಆಗ್ರಹಿಸಿದರು
Published by:Mahmadrafik K
First published: