ಎಂಟಿಬಿ ನಾಗರಾಜ್​ ಮನವೊಲಿಸುವಲ್ಲಿ ಕೈ ನಾಯಕರು ಯಶಸ್ವಿ?; ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಹೊಸಕೋಟೆ ಶಾಸಕ

ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ. ನಾನು‌ ಸ್ವಲ್ಪ ಕಾಲಾವಕಾಶ ಕೇಳಿದ್ದೇನೆ. ಸುಧಾಕರ್ ಇಲ್ಲಿಲ್ಲ ಅವರನ್ನು ಕರೆದು ಮಾತನಾಡುತ್ತೇನೆ. ಸುಧಾಕರ್ ಜೊತೆ ಮಾತನಾಡಿ ನಾನು ರಾಜೀನಾಮೆ ವಾಪಸ್ ಪಡೆಯೋದರ ಬಗ್ಗೆ ತೀರ್ಮಾನ ಮಾಡ್ತೀನಿ ಎಂದು ಹೇಳಿದರು.

HR Ramesh | news18
Updated:July 13, 2019, 12:21 PM IST
ಎಂಟಿಬಿ ನಾಗರಾಜ್​ ಮನವೊಲಿಸುವಲ್ಲಿ ಕೈ ನಾಯಕರು ಯಶಸ್ವಿ?; ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಹೊಸಕೋಟೆ ಶಾಸಕ
ಎಂಟಿಬಿ ನಾಗರಾಜ್ ಮನೆಯಲ್ಲಿ ಸಂಧಾನ ನಡೆಸುತ್ತಿರುವ ಡಿ.ಕೆ.ಶಿವಕುಮಾರ್
  • News18
  • Last Updated: July 13, 2019, 12:21 PM IST
  • Share this:
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರ ಮನೆಗೆ ನೆನ್ನೆ ರಾತ್ರಿಯಿಂದ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದ್ದಾರೆ. ಹಲವು ಗಂಟೆಗಳಿಂದ ಅವರ ಮನೆಯಲ್ಲೇ ಬೀಡುಬಿಟ್ಟಿದ್ದ ಡಿಕೆ ಶಿವಕುಮಾರ್ ಅವರು ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾದಂತಿದೆ. ಸಂಧಾನದ ನಂತರ ಮಾತನಾಡಿದ ನಾಗರಾಜ್​, ರಾಜೀನಾಮೆ ಹಿಂಪಡೆಯಲು ಸಮಯಾವಕಾಶ ಕೇಳಿರುವುದಾಗಿ ಹೇಳುವ ಮೂಲಕ ಪಕ್ಷದಲ್ಲೇ ಇರುವ ಸೂಚನೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್​ ನಾಯಕರ ಜೊತೆಗೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

ಸಂಧಾನದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ನಾನು ಮತ್ತು ನಾಗರಾಜ್ 30-40  ವರ್ಷಗಳಿಂದ ಜೊತೆಯಲ್ಲಿ ರಾಜಕೀಯ ಮಾಡಿದವರು. ನಾವೆಲ್ಲ ಒಂದು ಕುಟುಂಬವಿದ್ದಂತೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುಂದಕ್ಕೆ ಹೋಗಬೇಕು. ಜೊತೆಯಲ್ಲಿ ಬೆಳೆಯೋಣ, ಜೊತೆಯಲ್ಲಿಯೆ ಇರೋಣ ಜೊತೆಯಲ್ಲಿಯೇ ಸಾಯೋಣ ಎಂದು ಹೇಳಿದರು.

ಇದನ್ನು ಓದಿ: ಸಚಿವ ಎಂಬಿಟಿ ನಾಗರಾಜ್ ಮನವೊಲಿಕೆಗೆ ಯತ್ನ; ಜಿ. ಪರಮೇಶ್ವರ್ ನೇತೃತ್ವದ ಟೀಮ್​ನಿಂದ ಮತ್ತೊಂದು ಸುತ್ತಿನ ಮಾತುಕತೆ

ಎಂಟಿಬಿ ನಾಗರಾಜ್ ಮಾತನಾಡಿ​, ಕಾರಣಾಂತರಗಳಿಂದ ನಾನು ರಾಜೀನಾಮೆ ಕೊಟ್ಟಿದ್ದೆ.  ಆದ ಕಾರಣಕ್ಕೆ ನನ್ನ ಮನವೊಲಿಸಲು ಇಷ್ಟೊಂದು ನಾಯಕರು ಬಂದಿದ್ದರು. ನಾನು,‌ ಸುಧಾಕರ್ ಇಬ್ಬರು ಒಂದೇ ದಿನ ರಾಜೀನಾಮೆ ಕೊಟ್ಟಿದ್ವಿ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸಹ ಕರೆ ಮಾಡಿದ್ರು. ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದ್ದಾರೆ. ನಾನು‌ ಸ್ವಲ್ಪ ಕಾಲಾವಕಾಶ ಕೇಳಿದ್ದೇನೆ. ಸುಧಾಕರ್ ಇಲ್ಲಿಲ್ಲ ಅವರನ್ನು ಕರೆದು ಮಾತನಾಡುತ್ತೇನೆ. ಸುಧಾಕರ್ ಜೊತೆ ಮಾತನಾಡಿ ನಾನು ರಾಜೀನಾಮೆ ವಾಪಸ್ ಪಡೆಯೋದರ ಬಗ್ಗೆ ತೀರ್ಮಾನ ಮಾಡ್ತೀನಿ ಎಂದು ಹೇಳಿದರು.

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ