ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಸಮರ; ಜಿಲ್ಲಾಮಟ್ಟದಲ್ಲಿ ತಿರುಗೇಟು ನೀಡಲು ಸಿದ್ಧತೆ

ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲು ಜಿಲ್ಲಾ ಮಟ್ಟದಲ್ಲಿಯೇ ತಿರುಗೇಟು ನೀಡಲು ಕಾಂಗ್ರೆಸ್ ತಂಡ ರಚನೆ ಮಾಡಿ, ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ಒಬ್ಬೊಬ್ಬ ನಾಯಕರಿಗೆ ವಹಿಸಿದೆ. ಜಾತಿವಾರು ಪ್ರಾಬಲ್ಯ ನೋಡಿಕೊಂಡು ನಾಯಕರಿಗೆ ಈ ಹೊಣೆ ನೀಡಲಾಗಿದೆ. 

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

 • Share this:
  ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಸಮರ ಸಾರಿದ್ದು, ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಲು ಸ್ಪೀಕ್ ಆಫ್ ಕರ್ನಾಟಕ ಎಂಬ ಹೆಸರಿನಲ್ಲಿ ಚಳವಳಿ ಆರಂಭಿಸಲು ಮುಂದಾಗಿದೆ.

  ರಾಜ್ಯದ 29 ಜಿಲ್ಲಾ ಕೇಂದ್ರಗಳಲ್ಲಿ ಕೈ ನಾಯಕರು ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರ ವಿಚಾರಗಳನ್ನು ಜನರಿಗೆ ತಿಳಿಸಲಿದ್ದಾರೆ. ಶಿವಮೊಗ್ಗ ಮತ್ತು ಮಂಡ್ಯದಲ್ಲಿ ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಅವರ ತವರು ಶಿವಮೊಗ್ಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಲಿದ್ದಾರೆ. ರಾಜ್ಯದ ಇತರೆ ಜಿಲ್ಲಾ ಕೇಂದ್ರಗಳಲ್ಲಿ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಬೇರೆ ಬೇರೆ ನಾಯಕರು ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಡಿಕೆಶಿ ಅವರು ಬಿಜೆಪಿ ಕೇಂದ್ರ ಸ್ಥಾನಗಳಾದ ದಕ್ಷಿಣಕನ್ನಡದಲ್ಲಿ ಹಾಗೂ ಪರಮೇಶ್ವರ್ ಕೋಲಾರದಲ್ಲಿ, ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನರ ಮುಂದೆ ತೆರೆದಿಡಲಿದ್ದಾರೆ.

  ಯಾರಿಗೆ ಯಾವ ಜಿಲ್ಲೆ?

  • ಸಿದ್ದರಾಮಯ್ಯ - ಮಂಡ್ಯ, ಶಿವಮೊಗ್ಗ

  • ಡಿಕೆಶಿ - ಕಲಬುರಗಿ, ದಕ್ಷಿಣ ಕನ್ನಡ

  • ಪರಮೇಶ್ವರ್-  ಕೋಲಾರ

  • ಮಲ್ಲಿಕಾರ್ಜುನ ಖರ್ಗೆ - ಮೈಸೂರು, ಮೈಸೂರು ಗ್ರಾಮಾಂತರ

  • ರಾಮಲಿಂಗಾರೆಡ್ಡಿ-  ಬಳ್ಳಾರಿ ನಗರ, ಗ್ರಾಮಾಂತರ

  • ಎಂ.ಬಿ.ಪಾಟೀಲ್ - ಹಾವೇರಿ

  • ಡಿ.ಕೆ.ಸುರೇಶ್- ಹಾಸನ

  • ಆರ್.ವಿ.ದೇಶಪಾಂಡೆ-  ಹುಬ್ಬಳ್ಳಿ, ಧಾರವಾಡ

  • ಕೆ.ಹೆಚ್.ಮುನಿಯಪ್ಪ- ದಾವಣಗೆರೆ

  • ಹೆಚ್.ಕೆ.ಪಾಟೀಲ್- ವಿಜಯಪುರ

  • ಕೆ.ಜೆ.ಜಾರ್ಜ್-  ಚಿಕ್ಕಮಗಳೂರು

  • ಶರಣಪ್ರಕಾಶ್ ಪಾಟೀಲ್- ಬೀದರ್-

  • ವೀರಪ್ಪ ಮೊಯ್ಲಿ- ತುಮಕೂರು

  • ದಿನೇಶ್ ಗುಂಡೂರಾವ್- ಉಡುಪಿ

  • ಕೆ.ಆರ್. ರಮೇಶ್ ಕುಮಾರ್- ಬೆಳಗಾವಿ ನಗರ, ಗ್ರಾಮೀಣ

  • ಟಿ.ಬಿ.ಜಯಚಂದ್ರ - ಚಿಕ್ಕಬಳ್ಳಾಪುರ


  ಇದನ್ನು ಓದಿ: ಏಳನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಪಾಠ ಕೈ ಬಿಡುವ ಬಗ್ಗೆ ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರ ಆಕ್ರೋಶ

  ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲು ಜಿಲ್ಲಾ ಮಟ್ಟದಲ್ಲಿಯೇ ತಿರುಗೇಟು ನೀಡಲು ಕಾಂಗ್ರೆಸ್ ತಂಡ ರಚನೆ ಮಾಡಿ, ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ಒಬ್ಬೊಬ್ಬ ನಾಯಕರಿಗೆ ವಹಿಸಿದೆ. ಜಾತಿವಾರು ಪ್ರಾಬಲ್ಯ ನೋಡಿಕೊಂಡು ನಾಯಕರಿಗೆ ಈ ಹೊಣೆ ನೀಡಲಾಗಿದೆ.
  Published by:HR Ramesh
  First published: