• Home
  • »
  • News
  • »
  • state
  • »
  • ‘ರಾಮನಗರದಲ್ಲಿ ಕೆಲಸ ಮಾಡುವಲ್ಲಿ ಡಿಸಿಎಂ ಅಶ್ವಥ್​ ನಾರಾಯಣ್​ ಸಂಪೂರ್ಣ ವಿಫಲ’ - ಕಾಂಗ್ರೆಸ್​ ನಾಯಕರು

‘ರಾಮನಗರದಲ್ಲಿ ಕೆಲಸ ಮಾಡುವಲ್ಲಿ ಡಿಸಿಎಂ ಅಶ್ವಥ್​ ನಾರಾಯಣ್​ ಸಂಪೂರ್ಣ ವಿಫಲ’ - ಕಾಂಗ್ರೆಸ್​ ನಾಯಕರು

ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿ

ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿ

ಸೋಂಕಿತರಿಗೆ ಉತ್ತಮವಾದ ಊಟ ಕೊಡಲು ಆಗಿಲ್ಲ. ಅವರಿಗೆ ಡಿ.ಕೆ ಶಿವಕುಮಾರ್​ ಅವರ ಟ್ರಸ್ಟ್​ನಿಂದಲೇ ಊಟ ನೀಡಲಾಗುತ್ತಿದೆ ಎಂದು ರವಿ ವಾಗ್ದಾಳಿ ನಡೆಸಿದರು.

  • Share this:

ರಾಮನಗರ(ಜು. 30): ರಾಮನಗರ ಜಿಲ್ಲಾ ಕಾಂಗ್ರೆಸ್​ ನಾಯಕರು ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಾಂಗ್ರೆಸ್ ಎಂಎಲ್​​ಸಿ​​ ಎಸ್. ರವಿ ಹಾಗೂ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಡಿಸಿಎಂ ಅಶ್ವಥ್​​ ನಾರಾಯಣ್​​ಗೆ ತಿರುಗೇಟು​ ಕೊಟ್ಟರು.


ಡಿಸಿಎಂ ಅಶ್ವಥ್​​ ನಾರಾಯಣ್​​ ಉಡಾಫೆ, ಉದಾಸೀನ ಇರುವ ರಾಜಕಾರಣಿ. ಇವರಿಗೆ ರಾಮನಗರದ ಬಗ್ಗೆ ಕಾಳಜಿಯೇ ಇಲ್ಲ. ಇಂತವನ್ನು ನನ್ನ ಜೀವನದಲ್ಲೇ ನೋಡಿಲ್ಲ ಎಂದು ಎಂಎಲ್​​ಸಿ ರವಿ ಕಿಡಿಕಾರಿದರು.


ಇನ್ನು, ಅಶ್ವಥ್ ನಾರಾಯಣ್​​ಗೆ ಜಿಲ್ಲೆಯ ಪ್ರವಾಸ ಮಾಡುವ ಮನಸ್ಸು ಇಲ್ಲ. ಅವರು ಜಿಲ್ಲೆಗೆ ಬಂದಿದ್ದು, ಅದೃಷ್ಟ ಎಂದುಕೊಂಡಿದ್ದೆವು. ಆದರೆ, ಈವರೆಗೂ ಅಂತಹ ಯಾವುದೇ ಕೆಲಸ ಕಾರ್ಯ ಮಾಡಿಲ್ಲ. ಹಾಗೆಯೇ ಕೋವಿಡ್ ರೋಗಿಗಳ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದರು ರವಿ.


ಆರ್​.ಆರ್​​ ನಗರದ ಆಸ್ಪತ್ರೆಯಲ್ಲಿರುವ ಸೋಂಕಿತರ ಬಗ್ಗೆ ಕಾಳಜಿ ಇಲ್ಲ. ರಾಮನಗರದ ಕಂದಾಯ ಭವನದಲ್ಲಿನ ಕೋವಿಡ್ ಆಸ್ಪತ್ರೆ ಸರಿಯಿಲ್ಲ. ಜೊತೆಗೆ ಅಲ್ಲಿನ ರೋಗಿಗಳಿಗೆ ಮೂಲಭೂತ ಸೌಕರ್ಯವೇ ಇಲ್ಲ. ಇದು ಒಂದು ರೀತಿ ಅಂಡಮಾನ್ ಕರಿ ನೀರು ಶಿಕ್ಷೆಯನ್ನ ಬಿಜೆಪಿ ಸರ್ಕಾರ ಕೊಡುತ್ತಿದೆ ಎಂದರು.


ಸೋಂಕಿತರಿಗೆ ಉತ್ತಮವಾದ ಊಟ ಕೊಡಲು ಆಗಿಲ್ಲ. ಅವರಿಗೆ ಡಿ.ಕೆ ಶಿವಕುಮಾರ್​ ಅವರ ಟ್ರಸ್ಟ್​ನಿಂದಲೇ ಊಟ ನೀಡಲಾಗುತ್ತಿದೆ ಎಂದು ರವಿ ವಾಗ್ದಾಳಿ ನಡೆಸಿದರು.


ಇದೇ ಸಂದರ್ಭದಲ್ಲಿ ಮಾಗಡಿ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತನಾಡಿ, ಕೊರೋನಾ ವಿಚಾರವಾಗಿ ಡಿಸಿಎಂ ಎಷ್ಟು ಸಭೆ ಮಾಡಿದ್ದಾರೆ ಹೇಳಲಿ. ಜಿಲ್ಲೆಯ ಜನರ ಬಗ್ಗೆ ಯಾವ ಕ್ರಮವಹಿಸಿದ್ದಾರೆ ಎನ್ನುವುದು ತಿಳಿಸಲಿ. ಯಾವಾಗ ಸಭೆ ಮಾಡಲು ವಿರೋಧ ಪಕ್ಷವರನ್ನು ಕರೆದಿದ್ದೀರಿ ಎಂದು ಅಶ್ವಥ್​​ ನಾರಾಯಣ್​ಗೆ ಪ್ರಶ್ನೆ ಮಾಡಿದರು.


ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆಗೈದ ಹೆಂಡತಿ; ಪತ್ನಿ ಸೇರಿ ಏಳು ಮಂದಿ ಬಂಧನ


ಎಲ್ಲರು ಬುದ್ಧಿವಂತರಲ್ಲ. ಕೆಲ ಸಂದರ್ಭದಲ್ಲಿ ಎಲ್ಲರ ಸಲಹೆಗಳು ಮುಖ್ಯವಾಗುತ್ತವೆ. ಒಬ್ಬರೇ ಬುದ್ಧಿವಂತರು ಎಂದಾದರೇ ಅದು ತಪ್ಪು. ಜಿಲ್ಲೆಯಾದ್ಯಂತ ಜನರಿಗೆ ಸ್ಯಾನಿಟೈಜರ್ ಮೊದಲು ನೀಡಿದ್ದು, ಡಿಕೆಎಸ್ ಟ್ರಸ್ಟ್. ನಾವು ಸರ್ಕಾರವನ್ನು ನಂಬಿ ಏನು ಮಾಡಲಾಗದ ಪರಿಸ್ಥಿಗೆ ತಲುಪಿದ್ದೇವೆ ಎಂದರು ಬಾಲಕೃಷ್ಣಾ.

Published by:Ganesh Nachikethu
First published: