Text Book Row: ಪಠ್ಯ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಾಯಕರ ಧರಣಿ: ಚಕ್ರತೀರ್ಥ ಪರಿಷ್ಕರಣೆ ವಜಾಕ್ಕೆ ಆಗ್ರಹ

ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬುದನ್ನು ತೆಗೆಯಲಾಗಿದೆ‌. ಬಸವಣ್ಣ ವೈದಿಕ ಧರ್ಮ ಬಿಟ್ಟು ಬೇರೆ ಧರ್ಮ ಸ್ಥಾಪನೆ ಮಾಡಿದ್ದಾರೆ‌. ಇತಿಹಾಸ ತಿರುಚಿ ಕೇಸರಿಕರಣ ಮಾಡಿದ್ದಾರೆ.

ಕಾಂಗ್ರೆಸ್​ ಪ್ರತಿಭಟನೆ

ಕಾಂಗ್ರೆಸ್​ ಪ್ರತಿಭಟನೆ

  • Share this:
ಬೆಂಗಳೂರು: ರೋಹಿತ್ ಚಕ್ರತೀರ್ಥ (Rohith Chakrathirtha) ಪಠ್ಯಪುಸ್ತಕ ಪರಿಷ್ಕರಣೆ (Textbook Revision Row) ವಿರೋಧಿಸಿ ಕಾಂಗ್ರೆಸ್​​ (Congress) ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿತು. ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ ಹಾಗೂ ಶಾಸಕಾಂಗ ಪಕ್ಷ ಸೇರಿ ಪ್ರತಿಭಟನೆ ಮಾಡುತ್ತಿದ್ದೇವೆ. ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ  ಮಾಡುತ್ತಿದ್ದೇವೆ. ಸರ್ಕಾರ ರೋಹಿತ್ ಚಕ್ರತೀರ್ಥರ ಸಮತಿಯನ್ನ ವಿಸರ್ಜನೆ ಮಾಡಿದೆ‌. ಸಾರ್ವಜನಿಕ, ಮಠಾಧೀಶರಿಂದ, ಸಾಹಿತಿಗಳಿಂದ, ಶಿಕ್ಷಣ ತಜ್ಞರಿಂದ, ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಯಿತು. ಅದಕ್ಕಾಗಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆ ಮಾಡಿದ ಮೇಲೆ ಅವರು ಮಾಡಿದ ಪರಿಷ್ಕರಣೆಯನ್ನು ರದ್ದು ಮಾಡಬೇಕು. ಚಕ್ರತೀರ್ಥ ಮಾಡಿದ ಪರಿಷ್ಕರಣೆ ವಜಾ ಮಾಡಬೇಕು. ಮಕ್ಕಳಿಗೆ  ಆ ಪಾಠ ಭೋದನೆ ಮಾಡಬಾರದು, ಯಾಕೆಂದರೆ ಅದರಲ್ಲಿ ಇತಿಹಾಸ ತಿರುಚಲಾಗಿದೆ. ಅನೇಕ ದಾರ್ಶನಿಕರ ಇತಿಹಾಸ ತಿರುಚಲಾಗಿದೆ‌ ಎಂದು ಆರೋಪಿಸಿದರು.

ಪರಿಷ್ಕರಣೆ ಕೈ ಬಿಡಬೇಕು

ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬುದನ್ನು ತೆಗೆಯಲಾಗಿದೆ‌. ಬಸವಣ್ಣ ವೈದಿಕ ಧರ್ಮ ಬಿಟ್ಟು ಬೇರೆ ಧರ್ಮ ಸ್ಥಾಪನೆ ಮಾಡಿದ್ದಾರೆ‌. ಇತಿಹಾಸ ತಿರುಚಿ ಕೇಸರಿಕರಣ ಮಾಡಿದ್ದಾರೆ. ಬಿಸಿ ನಾಗೇಶ್  ಮೊದಲು ಬದಲಾವಣೆ ಮಾಡಲ್ಲ ಎಂದು ಹೇಳಿದ್ರು. ಸಾಹಿತಿಗಳು, ಸ್ವಾಮೀಜಿಗಳಿಂದ ವಿರೋಧ ವ್ಯಕ್ತವಾದ ಮೇಲೆ ಸ್ವಲ್ಪ ಬದಲಾವಣೆ ಮಾಡ್ತೇವೆ ಎಂದು ಹೇಳಿದ್ರು. ಈಗ ಹೇಳ್ತಾರೆ ಒಂದು ತಿಂಗಳಲ್ಲಿ ಹೊಸ ಪಠ್ಯಕ್ರಮ ಕೊಡ್ತೇವೆ ಎಂದು ಹೇಳಿದ್ದಾರೆ‌. ಇದರ ಅರ್ಥವೇನು ಎಂದ್ರೆ,  ತಿರುಚಿದ್ದು ಒಪ್ಪಿಕೊಂಡ ಹಾಗೆ. ಧಾರವಾಡದಲ್ಲಿ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ‌, ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆರ್.ಎಸ್.ಎಸ್ ಭಾಷಣ, ಪಠ್ಯಕ್ರಮದಲ್ಲಿ ತಂದು ಮಕ್ಕಳ ಜ್ಞಾನ ಹಾಳ ಮಾಡಬಾರದು, ಹಾಗಾಗಿ ಪರಿಷ್ಕರಣೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಕೇಸರಿಕರಣ ವಿರುದ್ಧ ನಾವಿದ್ದೇವೆ

ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಮುಂದುವರೆಸಬೇಕು. ಇಲ್ಲವಾದಲ್ಲಿ ಪಕ್ಷದಲ್ಲಿ ಚರ್ಚೆ ಮಾಡಿ, ಮುಂದಿನ ಹೋರಾಟದ ರೂಪಿಸುತ್ತೇವೆ. ನಾವು RSS, ಕೇಸರಿಕರಣ ವಿರುದ್ಧ ನಾವಿದ್ದೇವೆ. ಅವರು ಅಂಬೇಡ್ಕರ್, ಕನಕದಾಸರಿಗೆ, ಬಸವಣ್ಣ, ಕುವೆಂಪು ಸೇರಿದಂತೆ ದಾಸರು, ವಚನಕಾರಿಗೆ ಅಪಮಾನ ಮಾಡಿದ್ದಾರೆ. ಮಕ್ಕಳ ಮನಸ್ಸಿಗೆ ವಿಷ ಉಣಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Ramanagara: ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ! ಸಿಎಂಗೆ ಪತ್ರ ಬರೆದ ಯೋಗೇಶ್ವರ್

ಜೆಡಿಎಸ್​​​ ಅಭ್ಯರ್ಥಿಗೆ ಬೆಂಬಲಿಸಿ  

ಜೆಡಿಎಸ್​ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್​ ನಾಯಕ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ. ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸಲು ಜೆಡಿಎಸ್​ ಅಭ್ಯರ್ಥಿಗೆ ಕಾಂಗ್ರೆಸ್ ಪೂರ್ಣ ಬೆಂಬಲ ಕೊಡಬೇಕು. ಬಿಜೆಪಿಯನ್ನು ಸೋಲಿಸಲು ತನಗಿಂತ ಹೆಚ್ಚು ಮತ ಹೊಂದಿರೋ ಜೆಡಿಎಸ್ ಬೆಂಬಲಿಸಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಟ್ವೀಟ್ ಮೂಲಕ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಜೆಡಿಎಸ್​​ ಪಕ್ಷವು ಡಿ.ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭೆ ಚುನಾವಣೆಗೆ ತನ್ನ ಮೊದಲ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಉದ್ದಿಮೆದಾರರು, ಸಮಾಜ ಸೇವಕರು ಮತ್ತು ಪ್ರಗತಿಪರ ಚಿಂತಕರು. ರಾಜ್ಯಸಭೆ ಸದಸ್ಯರಾಗಿ ಅನುಭವವುಳ್ಳ ಅವರನ್ನು ಎಲ್ಲ ಪಕ್ಷಗಳು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು. ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಕಾಂಗ್ರೆಸ್‌ ಪಕ್ಷ ಕುಪೇಂದ್ರ ರೆಡ್ಡಿ ಅವರಿಗೆ ಪೂರ್ಣ ಬೆಂಬಲ ಕೊಡಬೇಕು. ಬಿಜೆಪಿಯನ್ನು ಸೋಲಿಸಲು, ತನಗಿಂತ ಹೆಚ್ಚು ಮತ ಹೊಂದಿರುವ ಜೆಡಿಎಸ್‌ ಅನ್ನು ಕಾಂಗ್ರೆಸ್‌ ಬೆಂಬಲಿಸಬೇಕು. ಈ ಚುನಾವಣೆಯ ಪರಿಣಾಮಗಳ ಬಗ್ಗೆ ಇತಿಹಾಸ & ಜನತೆ ಭವಿಷ್ಯದ ದಿನಗಳಲ್ಲಿ ನಿರ್ಧರಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಮಾನ್ಯ ರಣದೀಪ್ ಸಿಂಗ್ ಸುರ್ಜೇವಾಲ ಅವರು ಈ ಅಂಶ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಸಿದ್ದರಾಮಯ್ಯ ಪ್ರತಿಕ್ರಿಯೆ 

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಉದ್ದೇಶ ಏನು ಕೋಮುವಾದಿ ಪಕ್ಷ ಬರಬಾರದು ಎಂದಲ್ಲವಾ? ಅವರಿಗಿಂತ ಮೊದಲೇ ನಾವು ಅಭ್ಯರ್ಥಿ ಹಾಕಿದ್ದೇವೆ. ಹಿಂದೆ ದೇವೇಗೌಡರ ನಿಂತಾಗ ನಾವು ಬೆಂಬಲ ನೀಡಿದ್ದೇವೆ. ನಾವು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ‌. ಪ್ರಗತಿಪರ ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ನಾನು ಅವರಲ್ಲಿ ಮನವಿ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನ ರಿಟೈಡ್ ಮಾಡಿಸಿ, ನಮಗೆ ಬೆಂಬಲ ನೀಡಲಿ. ನಾವು ಅವರಿಗೆ ಟೈಮ್ ನಿಗದಿ ಮಾಡಲ್ಲ. ಜಾತ್ಯಾತೀತ ತತ್ವದ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದರೇ ನಮಗೆ ಬೆಂಬಲ ಕೊಡಬೇಕು ಎಂದರು.
Published by:Kavya V
First published: