ರೈಲ್ವೆ ಖಾಸಗೀಕರಣ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕರು

ಜನ ವಿರೋಧಿ ನೀತಿಗಳನ್ನು ಈ ಕೊಡಲೇ ಕೈ ಬಿಡಬೇಕು ಇಲ್ಲವಾದಲ್ಲಿ ಮುoದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಮುಖಂಡರು ಎಚ್ಚರಿಕೆ ನೀಡಿದರು.

news18-kannada
Updated:July 17, 2020, 10:13 PM IST
ರೈಲ್ವೆ ಖಾಸಗೀಕರಣ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕರು
ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು
  • Share this:
ಹುಬ್ಬಳ್ಳಿ(ಜು.17): ಕೇಂದ್ರ ಸರ್ಕಾರದ ರೈಲ್ವೆ ಖಾಸಗೀಕರಣದ ನೀತಿಯನ್ನು ವಿರೋಧಿಸಿ ಐಎನ್‌ಟಿಐಸಿ ಯಿಂದ ಇಂದು ಪ್ರತಿಭಟನೆ ನಡೆಯಿತು. ಹುಬ್ಬಳ್ಳಿ- ಧಾರವಾಡದ ಐಎನ್‌ಟಿಯುಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ‌ಪ್ರ‌ತಿಭಟನೆ ನಡೆಸಿದರು.

ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 1853 ರಲ್ಲಿ ಪ್ರಾರಂಭಗೊoಡು 165 ವರ್ಷಗಳಷ್ಟು ಪುರಾತನವಾದ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ. 151 ರೈಲುಗಳನ್ನು ನಡೆಸಲು ಖಾಸಗಿಯವರಿಗೆ ನೀಡುವುದರ ಮುಖಾಂತರ ರೈಲ್ವೆ ಖಾಸಗೀಕರಣ ಗೊಳಿಸಲು ಚಾಲನೆ ನೀಡಲಾಗಿದೆ. ಈ ಮುಖಾಂತರ ರೈಲ್ವೆ ಇಲಾಖೆಯ ಕಾರ್ಮಿಕರ ಹಾಗೂ ಜನ ಸಾಮಾನ್ಯರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಬಲಿ ಕೊಟ್ಟಿದೆ ಎಂದು ಆರೋಪಿಸಿದರು.

ಧಾರವಾಡ ಜಿಲ್ಲಾ ಐಎನ್‌ಟಿ‌ಯುಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತದೆ ಮತ್ತು ಇತರ ಸಾರ್ವಜನಿಕ ಹಿತಾಸಕ್ತಿವುಳ್ಳ ಸರ್ಕಾರದ ಸಂಸ್ಥೆಗಳಾದ ಬಿ.ಎಸ್.ಎನ್.ಎಲ್ , ಹೆಚ್.ಪಿ.ಸಿ.ಎಲ್, ಎಲ್.ಐ.ಸಿ, ಏರ್ ಇoಡಿಯಾ ಪೋಸ್ಟ್ , ಒ.ಎನ್.ಜಿ ಸಿ, ಇವುಗಳ ಖಾಸಗಿ ಕರಣದ ಹುನ್ನಾರವನ್ನು ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಮುಖಂಡರು ಘೋಷಣೆಗಳನ್ನು ಕೂಗಿದರು.

Karnataka Coronavirus: ಕರ್ನಾಟಕದಲ್ಲಿ ಇಂದು 3,693 ಕೊರೋನಾ ಸೋಂಕು ಪತ್ತೆ, 115 ಸಾವು; ಬೆಂಗಳೂರಿನಲ್ಲಿ 2,208 ಕೇಸ್

ದೇಶದಲ್ಲಿ ಮಹಾಮಾರಿ ಕೋರೊನಾ ನಿಯoತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈಫಲ್ಯ ಮುಚ್ಚಿಕೊಳ್ಳಲು ಗಿಮಿಕ್ ಮಾಡುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಹಿತ ಕಾಯುವುದನ್ನು ಬಿಟ್ಟು ಸಾರ್ವಜನಿಕರ ಆಸ್ತಿಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಪ್ರಯತ್ನಿಸುತ್ತಿರುವದು ನಿಜಕ್ಕೂ ಖೇದಕರ. ಈ ರೀತಿಯ ಜನ ವಿರೋಧಿ ನೀತಿಗಳನ್ನು ಈ ಕೊಡಲೇ ಕೈ ಬಿಡಬೇಕು ಇಲ್ಲವಾದಲ್ಲಿ ಮುoದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಮುಖಂಡರು ಎಚ್ಚರಿಕೆ ನೀಡಿದರು.

ದೇಶವ್ಯಾಪಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ನೀಡಿದ ಕರೆಗೆ ಬೆoಬಲಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ. ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಐಎನ್‌ಟಿಯುಸಿ‌ ಜಿಲ್ಲಾ ಅಧ್ಯಕ್ಷ ಬಂಗಾರೇಶ ಹಿರೇಮಠ ತಿಳಿಸಿದರು. ಕೆಪಿಸಿಸಿ ಪದಾಧಿಕಾರಿಗಳಾದ ರಾಜಶೇಖರ ಮೆಣಸಿನಕಾಯಿ, ಪಾರಸ್ಮಲ್ ಜೈನ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣಾ ಶಿವಳ್ಳಿ ಉಪಸ್ಥಿತರಿದ್ದರು.
Published by: Latha CG
First published: July 17, 2020, 10:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading