• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪುರಸಭಾ ಸದಸ್ಯೆ ಗರ್ಭಪಾತ ಪ್ರಕರಣ: ತೇರದಾಳದಲ್ಲಿ ಕಾಂಗ್ರೆಸ್​ ಘಟಾನುಘಟಿಗಳಿಂದ ಇಂದು ಪ್ರತಿಭಟನೆ

ಪುರಸಭಾ ಸದಸ್ಯೆ ಗರ್ಭಪಾತ ಪ್ರಕರಣ: ತೇರದಾಳದಲ್ಲಿ ಕಾಂಗ್ರೆಸ್​ ಘಟಾನುಘಟಿಗಳಿಂದ ಇಂದು ಪ್ರತಿಭಟನೆ

ಸಿದ್ದರಾಮಯ್ಯ

ಸಿದ್ದರಾಮಯ್ಯ

. ಮಹಾಲಿಂಗಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಅವರ ನೇತೃತ್ವದಲ್ಲಿಂದು ಬೃಹತ್ ಪ್ರತಿಭಟನೆ ಮಾಡಲಾಗುವುದು

  • Share this:

ಬಾಗಲಕೋಟೆ ( ಡಿ. 5); ಪಕ್ಷದ ಪುರಸಭಾ ಸದಸ್ಯೆ ಚಾಂದಿನಿ ನಾಯ್ಕ್​ ಗರ್ಭಪಾತ ಪ್ರಕರಣ ಖಂಡಿಸಿ ಮಹಾಲಿಂಗಪುರ ಪಟ್ಟಣದಲ್ಲಿ ಕಾಂಗ್ರೆಸ್​ ನಾಯಕರು ಇಂದು ಪ್ರತಿಭಟನೆ ನಡೆಸಲಿದ್ದಾರೆ. ಈಗಾಗಲೇ ಪ್ರತಿಭಟನೆ ರೂಪು ರೇಷಗಳ ಕುರಿತು ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮಹಾಲಿಂಗಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಅವರ ನೇತೃತ್ವದಲ್ಲಿಂದು ಬೃಹತ್ ಪ್ರತಿಭಟನೆ ಮಾಡಲಾಗುವುದು. ಪ್ರತಿಭಟನಾ ಸಮಾವೇಶದಲ್ಲಿ ಮಹಿಳಾ ಸಂಘಟನೆ, ಅನೇಕ ಸಂಘ ಸಂಸ್ಥೆಯವರು ಭಾಗಿಯಾಗಲಿದ್ದಾರೆ. ಬಿಜೆಪಿ ಶಾಸಕ ಸಿದ್ದು ಸವದಿ ನಡೆ ಖಂಡಿಸಿ, ರಾಜೀನಾಮೆಗೆ ಒತ್ತಾಯಿಸಿಲಿದ್ದಾರೆ.  ಸದನದ ಒಳಗೂ ಹೊರಗೆ ಹೋರಾಟ ನಡೆಸುತ್ತವೆ. ಇಷ್ಟೆಲ್ಲಾ ಆದರೂ ಸರ್ಕಾರ ಕ್ರಮ ಕೈಗೊಳ್ಳದ ನಡೆ ಖಂಡಿಸಲಿದೆ. 


ಪ್ರತಿಭಟನಾ ಸಮಾವೇಶದಲ್ಲಿ ಡಿಕೆಶಿ, ಸಿದ್ದರಾಮಯ್ಯ ಅವರಿಗೆ  ವಿಧಾನ್ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ,ಸತೀಶ್ ಜಾರಕಿಹೊಳಿ, ಉಮಾಶ್ರೀ , ಸೇರಿದಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್ ಎಸ್ ನಂಜಯ್ಯನಮಠ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಸೇರಿದಂತೆ ರಾಜ್ಯ ಘಟಕದ ಮಹಿಳಾ ಮುಖಂಡರು ಸೇರಿದಂತೆ ನೆರೆ ಜಿಲ್ಲೆಯಿಂದಲೂ ಕಾರ್ಯಕರ್ತರು ಆಗಮಿಸಲಿದ್ದಾರೆ.  ಈ ಪ್ರತಿಭಟನಾ ಸಮಾವೇಶದಲ್ಲಿ 10ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದು, ವಿವಿಧ ಸಂಘಟನೆಗಳು ಬೆಂಬಲಿಸಿವೆ‌. ಮೊದಲು ಮಹಾಲಿಂಗಪುರ ಪಟ್ಟಣದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಿದ್ದು, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕ ಸಿದ್ದು ಸವದಿ, ಹಾಗೂ ರಾಜ್ಯ ಸರ್ಕಾರದ ನಡೆ ಖಂಡಿಸಿ, ಸಿದ್ದು ಸವದಿ ರಾಜಿನಾಮೆಗೆ ಆಗ್ರಹಿಸಲಿದ್ದಾರೆ.


ಚಾಂದಿನಿ ನಾಯ್ಕ ಪತಿ ನಾಗೇಶ್ ಮೂರು ವಿಡಿಯೋ ಹೇಳಿಕೆಯಲ್ಲಿ ಗೊಂದಲ:


ಇನ್ನು ಬಿಜೆಪಿ ನಾಯಕರ ತಳ್ಳಾಟದಿಂದ ಪುರಸಭಾ ಸದಸ್ಯೆ ಚಾಂದಿನಿ ನಾಯ್ಕ್​ ಅವರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಲಾಗಿದೆ.  ಇದೇ ಪ್ರಕರಣ ಸಂಬಂಧ ಕಾಂಗ್ರೆಸ್​ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಂತೆ ಚಾಂದಿನಿ ನಾಯ್ಕ್​ ಪತಿ ಉಲ್ಟಾ ಹೊಡೆದಿದ್ದಾರೆ.  ಗರ್ಭಪಾತವಾಗಿರುವುದು ನಿಜ ಆದರೆ ಚುನಾವಣೆ ವೇಳೆ ನೂಕಾಟ ತಳ್ಳಾಟದಿಂದ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ ಎನ್ನುವ  ನಾಗೇಶ್ ನಾಯ್ಕ ಹೇಳಿಕೆಯ ವಿಡಿಯೋ, ಪತ್ರಿಕಾ ಪ್ರಕಟಣೆ ಮಾಧ್ಯಮಗಳಿಗೆ ಲಭ್ಯವಾಗಿದ್ದವು. ನಾಗೇಶ್ ನಾಯಕ್ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ಮುಂದಾದ ವೇಳೆ ಉಲ್ಟಾ ಹೊಡೆದಿದ್ದಾರೆ ಎನ್ನಲಾಗಿತ್ತು. ಆದರೆ ಮತ್ತೊಂದು ಹೇಳಿಕೆ ವಿಡಿಯೋ  ಡಿಸೆಂಬರ್ 4ರಂದು ನಾಗೇಶ್ ನಾಯ್ಕ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ನಾಗೇಶ್ ನಾಯ್ಕ, ಗರ್ಭಪಾತವಾಗಿರೋದು ನಿಜ.ಆದರೆ ನೂಕಾಟ ತಳ್ಳಾಟದಿಂದ ಆಗಿದೆ ಎಂದು ನಿಖರವಾಗಿ ತಿಳಿದುಬಂದಿಲ್ಲ.ಯಾರ ಮೇಲೂ ಆರೋಪ ಇಲ್ಲ ಎಂದು ಎಂದಿರುವುದು ಸಾಕಷ್ಟು ಗೊಂದಲ ಮೂಡಿಸಿದೆ.

First published: