HOME » NEWS » State » CONGRESS LEADERS PROTEST AGAINST BJP GOVERNMENT AT KOLAR LG

ಕೇಂದ್ರ ಸರ್ಕಾರದ ವಿರುದ್ದ ರೈತರು ದಂಗೆ ಏಳಲಿದ್ದಾರೆ; ಕಾಂಗ್ರೆಸ್ ಕಿಸಾನ್ ಕೇತ್ ರಾಜ್ಯಾಧ್ಯಕ್ಷ್ಯ‌ ಸಚಿನ್ ಮಿಗಾ ಎಚ್ಚರಿಕೆ

ಸರ್ಕಾರದ ಘೋಷಣೆಗಳು ಕೋವಿಡ್ ಸಂದರ್ಭದಲ್ಲಿ ಜನರಿಗೆ ತಲುಪಿಲ್ಲ. ಇದೀಗ ಜಾರಿಗೆ ತಂದಿರುವ ಕಾಯ್ದೆಗಳು ಬಂಡವಾಳ ಶಾಹಿಗಳ ಪರವಾಗಿದ್ದು,  ರೈತರು ಹಾಗೂ ಕಾರ್ಮಿಕರ ವಿರೋಧಿಯಾಗಿವೆ ಎಂದು ಸರ್ಕಾರಗಳ ಧೋರಣೆಯನ್ನು, ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕಟುವಾಗಿ ಟೀಕಿಸಿದರು.

news18-kannada
Updated:August 21, 2020, 7:36 AM IST
ಕೇಂದ್ರ ಸರ್ಕಾರದ ವಿರುದ್ದ ರೈತರು ದಂಗೆ ಏಳಲಿದ್ದಾರೆ; ಕಾಂಗ್ರೆಸ್ ಕಿಸಾನ್ ಕೇತ್ ರಾಜ್ಯಾಧ್ಯಕ್ಷ್ಯ‌ ಸಚಿನ್ ಮಿಗಾ ಎಚ್ಚರಿಕೆ
ಪ್ರತಿಭಟನೆ
  • Share this:
ಕೋಲಾರ(ಆ.21): ಕೇಂದ್ರ ಮತ್ತು ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಎಪಿಎಂಸಿ  ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ಕಾಯ್ದೆ ವಿರೋಧಿಸಿ ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್​ನ ಕಿಸಾನ್ ಕೇತ್ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು. ಕಿಸಾನ್ ಕೇತ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ,  ಕಾಂಗ್ರೆಸ್ ಭವನದಿಂದ ಎತ್ತುಗಳ ಬಂಡಿಯಲ್ಲಿ ಹಾಗೂ ಕಾಲ್ನಡಿಗೆ ಮೂಲಕ ತಾಲೂಕು ಕಚೇರಿ ಎದುರು ಜಮಾಯಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಧಿಕ್ಕಾರಗಳನ್ನ ಕೂಗಿದರು, ಇದೇ ವೇಳೆ ಮಾತನಾಡಿದ ಕಿಸಾತ್ ಕೇತ್ ರಾಜ್ಯಾದ್ಯಕ್ಷ್ಯ ಸಚಿನ್ ಮಿಗಾ, ಕೇಂದ್ರ ಸರ್ಕಾರ ಹಿಂದೆ ಜಾರಿ ಮಾಡಿದ್ದ ಕಾಯ್ದೆಗಳನ್ನು ಜನರು ವಿರೋಧ ಮಾಡಿದ್ದರು.  ಹಾಗಾಗಿ ರಾಜ್ಯ ಸರ್ಕಾರ ಮೂಲಕ ಕಾಯ್ದೆಗಳನ್ನು ಸುಗ್ರೀವಾಜ್ಞೆಯಿಂದ ಜನವಿರೋಧಿ ನೀತಿ ಜಾರಿ ತಂದಿದ್ದಾರೆ. ಕೊರೋನಾ ಹಿನ್ನಲೆ ರೈತರು ಹೊರಗೆ ಬರುತ್ತಿಲ್ಲ, ಕೊರೋನಾ ಮುಗಿದ ನಂತರ ಜನರು ಬೀದಿಗೆ ಬಂದು, ಕೇಂದ್ರ ಸರ್ಕಾರದ ವಿರುದ್ದ ದಂಗೆ ಏಳಲಿದ್ದಾರೆಂದು ಕಿಡಿಕಾರಿದರು.

ವಿನಯ್‌ ಗುರೂಜಿ ಭಕ್ತರು ಎಂಜಲು ತಿನ್ನಿಸಿದರು; ಕೈ ನಾಯಕ ರಘು ಆಚಾರ್‌ ಆರೋಪಕ್ಕೆ ಶರವಣ ಟಾಂಗ್

ಬಿಜೆಪಿ ಸರ್ಕಾರ ಭ್ರಷ್ಟ ಹಾಗೂ ಮಾನಗೆಟ್ಟ ಸರ್ಕಾರ - ಶಾಸಕ ಎಸ್ ಎನ್ ವಾಗ್ದಾಳಿ

ಬಂಗಾರಪೇಟೆ ತಾಲೂಕು ಕಚೇರಿ ಎದುರು ತಾಲೂಕು ಕಾಂಗ್ರೆಸ್ ಘಟಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ್ಯ ಕೆ ಚಂದ್ರಾರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
Youtube Video

ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಬಿಜೆಪಿ ಸರ್ಕಾರ ಭ್ರಷ್ಟ ಹಾಗು ಮಾನಗೆಟ್ಟ ಸರ್ಕಾರವೆಂದರು, ವಿರೋಧ ಪಕ್ಷ ಕೋವಿಡ್ ಅವ್ಯವಹಾರ ಪ್ರಶ್ನೆ ಮಾಡುತ್ತಿದ್ದರೂ ಯಾರು ಸ್ಪಂದನೆ ಮಾಡುತ್ತಿಲ್ಲ, ಸರ್ಕಾರದ ಘೋಷಣೆಗಳು ಕೋವಿಡ್ ಸಂದರ್ಭದಲ್ಲಿ ಜನರಿಗೆ ತಲುಪಿಲ್ಲ. ಇದೀಗ ಜಾರಿಗೆ ತಂದಿರುವ ಕಾಯ್ದೆಗಳು ಬಂಡವಾಳ ಶಾಹಿಗಳ ಪರವಾಗಿದ್ದು,  ರೈತರು ಹಾಗೂ ಕಾರ್ಮಿಕರ ವಿರೋಧಿಯಾಗಿವೆ ಎಂದು ಸರ್ಕಾರಗಳ ಧೋರಣೆಯನ್ನು, ಶಾಸಕ ಎಸ್ ಎನ್ ನಾರಾಯಣಸ್ವಾಮಿ ಕಟುವಾಗಿ ಟೀಕಿಸಿದರು.
Published by: Latha CG
First published: August 21, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories