ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ

news18
Updated:September 1, 2018, 1:40 PM IST
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ
ಸಿದ್ದರಾಮಯ್ಯ
news18
Updated: September 1, 2018, 1:40 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.1): ನಾನು ಏನಿದ್ದರೂ ರಾಜ್ಯ ರಾಜಕಾರಣಕ್ಕೆ ಮಾತ್ರ ಸಿಮೀತ. ರಾಷ್ಟ್ರ ರಾಜಕಾರಣಕ್ಕೆ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರೂ ಅವರ ಮೇಲಿನ ಒತ್ತಡ ಮಾತ್ರ ಕಡಿಮೆಯಾಗಿಲ್ಲ.

ಸಿದ್ದರಾಮಯ್ಯ ಅಹಿಂದ ನಾಯಕರಾಗಿದ್ದು ಅವರ ವರ್ಚಸ್ಸು ದೆಹಲಿ ಮಟ್ಟದವರೆಗೆ ಇದೆ. ಅವರು ಲೋಕಸಭಾ ಚುನಾವಣೆಗೆ ನಿಲ್ಲಬೇಕು ಎಂಬ ಮಾತು ಹೈ ಕಮಾಂಡ್​ ಮಟ್ಟದಲ್ಲಿಯೂ ಕೇಳಿ ಬಂದಿತ್ತು. ಆದರೆ, ಇದಕ್ಕೆ ಸಿದ್ದರಾಮಯ್ಯ ಮಾತ್ರ ನಿರಾಕರಿಸುತ್ತಲೆ ಬಂದಿದ್ದಾರೆ.

ಇನ್ನು ಲೋಕಸಭಾ ಚುನಾವಣೆ ತಯಾರಿ ಕುರಿತು ರಾಜ್ಯ ಕಾಂಗ್ರೆಸ್​ ನಾಯಕರು ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಸುತ್ತಿರುವ ಸಭೆಯಲ್ಲಿ ಮತ್ತೊಮ್ಮೆ ಈ ಕುರಿತು ಚರ್ಚೆಯಾಗಿದೆ. ಲೋಕಸಭೆ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆಗೆ ನಾಯಕರು ಆಗ್ರಹಿಸಿದ್ದಾರೆ.

ಕೊಪ್ಪಳ ಪ್ರತಿನಿಧಿಗಳ ಜೊತೆ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು,  ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಿಂದ ಸ್ಪರ್ಧೆಮಾಡುವಂತೆ ಒತ್ತಾಯಿಸಿದ್ದಾರೆ. ನೀವು ಈ ಕ್ಷೇತ್ರದಿಂದ ಕಣಕ್ಕಿಳಿದರೆ ಕಾಂಗ್ರೆಸ್​ಗೆ ಆ ಭಾಗದಲ್ಲಿ ಶಕ್ತಿ ಬರುತ್ತದೆ.

ಸಿದ್ದರಾಮಯ್ಯ ಗೆಲುವಿಗೆ ಒಗ್ಗಟ್ಟಿನಿಂದ ದುಡಿಯಲಿದ್ದು, ಅವರ ಲೋಕಸಭಾ ಚುನಾವಣೆಗೆ ನಿಲ್ಲುವುದರಿಂದ ಅಕ್ಕ ಪಕ್ಷದ ಕ್ಷೇತ್ರದ ಗೆಲುವಿಗೂ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿದೆ. ಸಿದ್ದರಾಮಯ್ಯ ಗೆದ್ದರೆ ಹೈ.ಕ, ಉ.ಕ. ಭಾಗದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೊಪ್ಪಳದ ಭಾಗದ ಮುಖಂಡರು ಲೆಕ್ಕಾಚಾರ ನಡೆಸಿದ್ದಾರೆ.

ಬಾಗಲಕೋಟೆ, ಕೊಪ್ಪಳ ಎರಡು ಕ್ಷೇತ್ರಗಳ ನಾಯಕರು ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ನಿಲ್ಲುವಂತೆ ಒತ್ತಡ ಹೇರುತ್ತಿದ್ದು, ಈ ಬಗ್ಗೆ ಸಿದ್ದರಾಮಯ್ಯ ಏನು ತೀರ್ಮಾಣ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.
First published:September 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ