• Home
  • »
  • News
  • »
  • state
  • »
  • Congress ನಾಯಕರ ಅಹೋರಾತ್ರಿ ಧರಣಿ; ಇಂದು ಅಧಿವೇಶನದಲ್ಲಿಯೂ ಮುಂದುವರಿಯಲಿದೆ ಪ್ರತಿಭಟನೆ

Congress ನಾಯಕರ ಅಹೋರಾತ್ರಿ ಧರಣಿ; ಇಂದು ಅಧಿವೇಶನದಲ್ಲಿಯೂ ಮುಂದುವರಿಯಲಿದೆ ಪ್ರತಿಭಟನೆ

ಕಾಂಗ್ರೆಸ್ ನಾಯಕರ ಪ್ರತಿಭಟನೆ

ಕಾಂಗ್ರೆಸ್ ನಾಯಕರ ಪ್ರತಿಭಟನೆ

ಇಂದು ಅಧಿವೇಶನ (Assembly Session) ಪುನರಾರಂಭವಾಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ(Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ.

  • Share this:

ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ (Congress Leaders) ಅಹೋರಾತ್ರಿ ಧರಣಿ (Protest) ನಾಲ್ಕನೇ ದಿನ ಮುಗಿಸಿದೆ. ಇತ್ತ ಸರ್ಕಾರ ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಡೋಂಟ್ ಕೇರ್ ಅಂತ ಹೇಳಿದ್ದು, ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಇಂದು ಅಧಿವೇಶನ (Assembly Session) ಪುನರಾರಂಭವಾಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ(Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ. ಈಶ್ವರಪ್ಪ  ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋವರೆಗೂ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.


ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಎಲ್ಲ ಶಾಸಕರು ಹೊರ ಬಂದು ವಾಕಿಂಗ್ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು. ಸದ್ಯ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮನೆಗೆ ತೆರಳಿದ್ದಾರೆ.


ಇಂದು ಕಾಂಗ್ರೆಸ್ ನಿಂದ ಜಿಲ್ಲಾವಾರು ಪ್ರತಿಭಟನೆ


ಇವತ್ತು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ (UT Khader), ಇವತ್ತು ಸಹ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. ಸರ್ಕಾರ ಈಶ್ವರಪ್ಪ ವಿರುದ್ದ ಕ್ರಮ ತೆಗೆದುಕೊಳ್ಳುವ ತನಕ ಪ್ರತಿಭಟನೆ ನಡೆಯುತ್ತೆ. ಇಂದು ಜಿಲ್ಲಾವಾರು ಪ್ರತಿಭಟನೆ ನಡೆಸಲಾಗುವ ಮಾಹಿತಿ ನೀಡಿದರು.


ಇದನ್ನೂ ಓದಿ:  Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ.. ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ BC Nagesh


ರಾಷ್ಟ್ರದ ಧ್ವಜಕ್ಕೆ ನ್ಯಾಯ ಕೊಡಿಸುವ ಕೆಲಸ ಅಗಬೇಕು. ಜೆಡಿಎಸ್ ಒಂದು ಪಕ್ಷವಾಗಿ ಅವರಿಗೆ ಕ್ಲಾರಿಟಿ ಇಲ್ಲಾ. ವಿಧಾನಸಭೆಯ ಸಮಯ ಹಾಳು ಎಂದು ಹೇಳುತ್ತಿದ್ದಾರೆ. ಅವರು ಈಶ್ವರಪ್ಪ ಅವರ ಹೇಳಿಕೆ ಸರಿ ಅಥವ ತಪ್ಪು ಅನ್ನುವ ಒಂದು ನಿರ್ಧಿಷ್ಟ ಅಭಿಪ್ರಾಯಕ್ಕೆ ಬಂದಿಲ್ಲಾ. ಸುಮ್ಮನೆ ಅರೋಪ ಮಾಡ್ತಿದ್ದಾರೆ ಎಂದರು.


ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ


ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ (National Flag) ನನ್ನ ತಾಯಿ ಸಮಾನ. ಇಂತಹದ್ದಕ್ಕೆಲ್ಲಾ ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದು, ವಿಧಾನಸಭೆ (Assembly)ಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಜನ ಸಾಮಾನ್ಯರ ಕಷ್ಟ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು.
ಈ ಸಮಸ್ಯೆ ಇಟ್ಟುಕೊಂಡು, ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರ ಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡಲ್ಲ. ಈ ವಿಚಾರವನ್ನು ನಾನು ಇಲ್ಲಿಯೇ ಕೈ ಬಿಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡರು.


ಅಂಥವರು ಸಚಿವರಾಗಿ ಇರಬೇಕಾ?


ರಾಷ್ಟ್ರಧ್ವಜಕ್ಕೆ ಅವಮಾನ ಆದರೂ ಸುಮ್ಮನೆ ಕುಳಿತುಕೊಳ್ಳಬೇಕಾ? ಇದರ ಬಗ್ಗೆ ಕೇಳಿದ್ರೆ ಜವಾಬ್ದಾರಿ ಇಲ್ಲ ಅಂತಾರೆ. ರಾಷ್ಟ್ರಧ್ವಜಕ್ಕೆ ಅಗೌರವ ಮಾಡೋದು ದೇಶ ಭಕ್ತಿನಾ? ಅಂಥವರು ಸಚಿವರಾಗಿ ಇರಬೇಕಾ?. ಬಿಜೆಪಿ ಯಾವತ್ತೂ ರಾಷ್ಟ್ರಧ್ವಜದಿಂದ ಸ್ಪೂರ್ತಿ ಪಡೆದವರಲ್ಲ. ಅವರಿಗೆ ತ್ರಿವರ್ಣ ಧ್ವಜದ ಮಹತ್ವ ಗೊತ್ತಿಲ್ಲ. ಅವರಿಂದ ನಾವು ದೇಶಭಕ್ತಿ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.


ಇದನ್ನೂ ಓದಿ:  Hijab Row: ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿದ್ದ ಪ್ರಾಂಶುಪಾಲರಿಗೆ ಜೀವ ಬೆದರಿಕೆ 


ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪಕ್ಷದವರು ಅವರಿಂದ ಕಲಿಯಬೇಕಾ? ನಮ್ಮ ಹೋರಾಟ ಮುಂದುವರೆಯಲಿದೆ. ಇದಾದ ಮೇಲೆ ನಾವು ಜನರ ಬಳಿ‌ ಹೋಗ್ತೇವೆ. ಅವರು ಸಂವಿಧಾನಕ್ಕೆ ವಿರುಧ್ಧ ಇರೋರು ಎಂದು ಕಿಡಿಕಾರಿದರು.

Published by:Mahmadrafik K
First published: