ಆಷಾಢದ ಬಳಿಕ ಮೈತ್ರಿ ಸರ್ಕಾರಕ್ಕೆ ಗಂಡಾಂತರ? ಕಾಂಗ್ರೆಸ್ ಮುಖಂಡರಿಂದಲೇ ಅಪಾಯ


Updated:July 29, 2018, 11:03 AM IST
ಆಷಾಢದ ಬಳಿಕ ಮೈತ್ರಿ ಸರ್ಕಾರಕ್ಕೆ ಗಂಡಾಂತರ? ಕಾಂಗ್ರೆಸ್ ಮುಖಂಡರಿಂದಲೇ ಅಪಾಯ
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು(ಜು.29): ಆಷಾಢದ ಬಳಿಕ ಮೈತ್ರಿ ಸರ್ಕಾರಕ್ಕೆ ಗಂಡಾಂತರ ಎದುರಾಗುತ್ತದೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಮುಖಂಡರಿಂದಲೇ ಮೈತ್ರಿ ಸರ್ಕಾರಕ್ಕೆ ಅಪಾಯವಿದ್ದು, ಜಾರಕಿಹೊಳಿ ಬ್ರದರ್ಸ್​ ಸುಂಟರಗಾಳಿ ಎಬ್ಬಿಸುವ ಅನುಮಾನಗಳೆದ್ದಿವೆ.

ಹೌದು ಸತೀಶ ಜಾರಕಿಹೊಳಿ ಮೌನ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸುಂಟರಗಾಳಿ ಎಬ್ಬಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈಗಾಗಲೇ ತನಗೆ ಉತ್ತರ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಮತ್ತು ತನ್ನ ಆಪ್ತರಿಗೂ ಸೂಕ್ತ ಸ್ಥಾನ ನೀಡುವಂತೆ ಸತೀಶ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆಷಾಢದ ಬಳಿಕ ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ಕಷ್ಟವೆಂದೂ ಸತೀಶ್​ ಜಾರಕಿಹೊಳಿ ಹೇಳಿದ್ದಾರೆನ್ನಲಾಗಿದೆ.

ಮತ್ತೊಂದೆಡೆ ರಮೇಶ ಜಾರಕಿಹೊಳಿ ಬಣ ಸಂಪುಟ ವಿಸ್ತರಣೆ ವೇಳೆ ಸಂಪುಟದಿಂದ ಕೈಬಿಡುತ್ತಾರೆ ಎನ್ನುವ ಭಯದಿಂದ ಶಾಸಕರ ದಂಡು ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮೂಲಕ ಸಂಪುಟದಿಂದ ಕೈಬಿಟ್ಟರೆ ತನ್ನ ಜೊತೆ ಹತ್ತಕ್ಕೂ ಹೆಚ್ಚು ಶಾಸಕರಿದ್ದು, ಸರ್ಕಾರದ ಅಸ್ಥಿತ್ವಕ್ಕೆ ಧಕ್ಕೆ ತರುವ ಸಾಮರ್ಥ್ಯ ಇದೆ ಎಂಬ ಸಂದೇಶವನ್ನೂ ರವಾನಿಸುತ್ತಿದ್ದಾರೆನ್ನಲಾಗಿದೆ.‘

ಒಟ್ಟಾರೆಯಾಗಿ ಹೇಳಬೇಕೆಂದರೆ ಜಾರಕಿಹೊಳಿ ಸಹೋದರರ ಈ ನಡೆ ಆಷಾಢದ ಬಳಿಕ ಮೈತ್ರಿ ಸರ್ಕಾರಕ್ಕೆ ಕುತ್ತು ತರಲಿದೆ ಎಂಬ ಸುಳಿವು ನೀಡುತ್ತದೆ ಎಂದು ಹೇಳಬಹುದು.
First published:July 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading