ಕಾಂಗ್ರೆಸ್​​ನವರು ಪ್ರತಿ ನಿತ್ಯ ಗಾಂಧೀಜಿಯವರ ವಿಚಾರಗಳನ್ನು ಕೊಲ್ಲುತ್ತಿದ್ದಾರೆ ; ಸಚಿವ ಕೆ.ಎಸ್. ಈಶ್ವರಪ್ಪ

ದೇಶ ವಿಭಜನೆಯಾಗಬಾರದೆಂಬ ಗಾಂಧೀಜಿಯವರ ಕನಸನ್ನುಇಂದು ಪ್ರಧಾನಿ ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ. ಗಾಂಧೀಜಿಯವರ ಕನಸು ಮತ್ತು ವಿಚಾರವನ್ನು ಬಿಜೆಪಿ ಮೇಲೆತ್ತುತ್ತಿದೆ

G Hareeshkumar | news18-kannada
Updated:October 21, 2019, 4:46 PM IST
ಕಾಂಗ್ರೆಸ್​​ನವರು ಪ್ರತಿ ನಿತ್ಯ ಗಾಂಧೀಜಿಯವರ ವಿಚಾರಗಳನ್ನು ಕೊಲ್ಲುತ್ತಿದ್ದಾರೆ ; ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಶಿವಮೊಗ್ಗ(ಅ.21) : ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಗೋ ಹತ್ಯೆ ನಿಷೇಧ ಮಾಡಿದ್ದೇವು. ಅದರೆ ಕಾಂಗ್ರೆಸ್ ನವರು ಅದಕ್ಕೆ ತಡೆ ಹಾಕಿದರು. ಗಾಂಧೀಜಿಯವರ ಕನಸು ಗೋ ಹತ್ಯೆ‌ ನಿಷೇಧ ಆಗಬೇಕು ಅಂತಾ ಇತ್ತು. ಆದರೆ ಕಾಂಗ್ರೆಸ್ ನವರು ಅದಕ್ಕೆ ಬಿಡಲಿಲ್ಲ‌. ಪ್ರತಿ ನಿತ್ಯ ಗಾಂಧೀಜಿ ಯವರ ವಿಚಾರಧಾರೆಗಳನ್ನುಈ ಕಾಂಗ್ರೆಸ್​​​ ನವರು ಕೊಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ಕಿಡಿ ಕಾರಿದರು.

ಅಖಂಡ ಭಾರತ ಒಂದು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಆ ಕನಸು ನನಸು ಮಾಡಲು ಕಾಂಗ್ರೆಸ್ ನವರು ಬಿಟ್ಟಿರಲಿಲ್ಲ. ಆರ್ಟಿಕಲ್ 370 ಕಾಯ್ದೆ ಬಗ್ಗೆ ಕಾಂಗ್ರೆಸ್ ನವರು ಅಪಸ್ವರ ಎತ್ತಿದ್ದಾರೆ. ದೇಶ ವಿಭಜನೆಯಾಗಬಾರದೆಂಬ ಗಾಂಧೀಜಿಯವರ ಕನಸನ್ನುಇಂದು ಪ್ರಧಾನಿ ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ ಎಂದರು.

ಗಾಂಧೀಜಿಯವರ ಕನಸು ಮತ್ತು ವಿಚಾರವನ್ನು ಬಿಜೆಪಿ ಮೇಲೆತ್ತುತ್ತಿದೆ ಎಂದು ನಾಡಿನ ಜನ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ಮಹಾತ್ಮಾ ಗಾಂಧೀಯನ್ನು ಕೊಂದಂತಹ ನಾಥೂರಾಮ್ ಗೋಡ್ಸೆ ಜತೆ ಸಾವರ್ಕರ್ ಇದ್ದರು ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಏನು ಕಲ್ಪನೆ ಇಲ್ಲದಂತ ವ್ಯಕ್ತಿಗಳು ಈ ಹೇಳಿಕೆ ನೀಡುತ್ತಿದ್ದಾರೆ. ಗೋಡ್ಸೆ ಅಂತಾ ವ್ಯಕ್ತಿ ಗಾಂಧೀಜಿ ಕೊಂದರು ಅಂತಾ ಹೇಳುತ್ತಾರೆ ಎಂದರು.

ಸಿದ್ಧರಾಮಯ್ಯ ಅವರಿಗೆ ನಾಲಿಗೆಯಲ್ಲಿ ಹಿಡಿತ ಇಲ್ಲ ;  ಅಶೋಕ್​​

ಇತ್ತ ಮಂಗಳೂರಿನ ಪುತ್ತೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್​​​​ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡುವವರಿಗೆ ತಲೆ ಇಲ್ಲ. ಸಾವರ್ಕರ್ ಗೆ ವಿರೋಧ ಮಾಡಿದವರನ್ನು ಒಂದು ತಿಂಗಳು ಜೈಲಿಗೆ ಹಾಕಬೇಕು. ಅಂಡಮಾನಿನ ಸೆಲ್ಯುಲಾರ್ ಜೈಲಿಗೆ ಹಾಕಬೇಕು. ಆಗ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ನೆಹರೂ ಕುಟುಂಬದವರು ಬಿಟ್ರೆ ಬೇರೆ ಹೆಸರು ಗೊತ್ತಿಲ್ಲ. ಲಾಲ್ ಬಹುದ್ದೂರ್ ಶಾಸ್ತ್ರಿ, ಸರ್ದಾರ್ ಪಟೇಲ್ ಅವರನ್ಜು ಪಕ್ಕಕ್ಕೆ ತಳ್ಳಿದ್ರು ಎಂದರು.

ಇದನ್ನೂ ಓದಿ : ಸಿಪಿ ಯೋಗೇಶ್ವರ್ ದೊಡ್ಡ ಮಟ್ಟಕ್ಕೆ ಹೋಗುತ್ತಾರೆ; ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಡಿಸಿಎಂ ಅಶ್ವಥ ನಾರಾಯಣ

ವಿರೋಧ ಪಕ್ಷದ ನಾಯಕ  ಸಿದ್ಧರಾಮಯ್ಯ ಅವರಿಗೆ ನಾಲಿಗೆಯಲ್ಲಿ ಹಿಡಿತ ಇಲ್ಲ.  ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಈ ಹೇಳಿಕೆ ನೀಡಿದ್ದಾರೆ ಸಿದ್ದರಾಮಯ್ಯರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಕಳಂಕ ಜನ ಸಿದ್ಧರಾಮಯ್ಯಗೆ ಬಹಿಷ್ಕಾರ ಹಾಕಬೇಕು ಎಂದು ಹೇಳಿದರು.
First published: October 21, 2019, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading