ಎಂಟಿಬಿ ನಾಗರಾಜ್​ ಮನೆಯಲ್ಲಿ ಕಾಂಗ್ರೆಸ್​ ನಾಯಕರು ಹಣ ತೆಗೆದುಕೊಂಡು ಹೋಗಿದ್ದಾರೆ; ಶಾಸಕ ಯತ್ನಾಳ ಆರೋಪ

ಉಮೇಶ ಕತ್ತಿ ಅವರು ಸಚಿವರಾಗಲಿದ್ದಾರೆ ಎಂದು ಯತ್ನಾಳ ಭವಿಷ್ಯ ನುಡಿದರು. ಕತ್ತಿ ಅವರು  ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ. ನಮ್ಮ ಶಾಸಕರಿಗೆ ಮಾತ್ರ ಅನುದಾನ ನೀಡಲಿ. ನಾಳೆ ಎಂದು ಮತ್ತೆ ಬೇರೆ ಯಾರಾದರೂ ಬಂದರೆ ಅನುದಾನ ನೀಡಬೇಡಿ ಎಂದು ಹೇಳುವ  ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

news18-kannada
Updated:December 2, 2019, 10:36 PM IST
ಎಂಟಿಬಿ ನಾಗರಾಜ್​ ಮನೆಯಲ್ಲಿ ಕಾಂಗ್ರೆಸ್​ ನಾಯಕರು ಹಣ ತೆಗೆದುಕೊಂಡು ಹೋಗಿದ್ದಾರೆ; ಶಾಸಕ ಯತ್ನಾಳ ಆರೋಪ
ಬಸನಗೌಡ ಪಾಟೀಲ್ ಯತ್ನಾಳ
  • Share this:
ಚಿಕ್ಕೋಡಿ(ಡಿ.02): ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಮನೆಯಿಂದ ದಿನೇಶ್​ ಗುಂಡೂರಾವ್​ ಸೇರಿ ಅನೇಕ ಕಾಂಗ್ರೆಸ್​ ನಾಯಕರು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಶಾಸಕ ಯತ್ನಾಳ ಮಾತನಾಡಿದರು. ಒಬ್ಬ ಶಾಸಕ ಒಂದು ಅವಧಿಗೆ 100 ಕೋಟಿ ದುಡ್ಡು ಮಾಡಬಹುದು. ಕೇವಲ 50 ಕೋಟಿ ಪಡೆದು ರಾಜೀನಾಮೆ ನೀಡ್ತಾರಾ? ಕಾಂಗ್ರೆಸ್ ಮತ್ತು ಜೆಡಿಎಸ್​ ಶಾಸಕರು ಕೇವಲ 50 ಕೋಟಿ ಹಣ ಮಾಡಿ ರಾಜೀನಾಮೆ ನೀಡ್ತಾರಾ? ಎಂದು ಯತ್ನಾಳ್​ ಪ್ರಶ್ನಿಸಿದರು.

ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿರುವ  ಎಂಟಿಬಿ ಮನೆಯಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಅನೇಕ ಕೈ ಮುಖಂಡರು ಹಣ ತಂದಿದ್ದಾರೆ ಎಂದು ಹೇಳಿದರು. 

ಅವರೆಲ್ಲಾ ನಿಮ್ಮ ಸೋದರ ಸಂಬಂಧಿಗಳೇ?; ಅಕ್ರಮ ವಲಸಿಗರ ವಿಚಾರವಾಗಿ ರಾಹುಲ್ ಗಾಂಧಿ ಟೀಕಿಸಿದ ಅಮಿತ್ ಶಾ

ಈ ಉಪಚುನಾವಣೆಯಲ್ಲಿ ವೀರಶೈವ ಸಮಾಜದ ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸಬೇಕಿದೆ. ವೀರಶೈವ ಸಮಾಜದವರಿಗೆ 5 ವರ್ಷ ಅಧಿಕಾರ ಮಾಡಲು ಬೇಡಲಿಲ್ಲ. ಈಗಲೂ ಯಡಿಯೂರಪ್ಪ ಕೆಳಗೆ ಇಳಿಸಲು ಒಳ ಸಂಚು ನಡೆದಿದೆ. ಆದರೆ ಯಡಿಯೂರಪ್ಪನವರನ್ನು ಕೆಳಗೆ ಇಳಿಸುವ ಗಂಡಸು ಇಲ್ಲ. ವೀರಶೈವ ಮುಖ್ಯಮಂತ್ರಿ ಇರಲು ಲಿಂಗಾಯತರು ಶ್ರೀಮಂತ ಪಾಟೀಲರನ್ನು ಆಯ್ಕೆ ಮಾಡಬೇಕಿದೆ ಎಂದು ಮತದಾರರಿಗೆ ಕರೆ ನೀಡಿದರು.

ಉಮೇಶ ಕತ್ತಿ ಅವರು ಸಚಿವರಾಗಲಿದ್ದಾರೆ ಎಂದು ಯತ್ನಾಳ ಭವಿಷ್ಯ ನುಡಿದರು. ಕತ್ತಿ ಅವರು  ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ. ನಮ್ಮ ಶಾಸಕರಿಗೆ ಮಾತ್ರ ಅನುದಾನ ನೀಡಲಿ. ನಾಳೆ ಎಂದು ಮತ್ತೆ ಬೇರೆ ಯಾರಾದರೂ ಬಂದರೆ ಅನುದಾನ ನೀಡಬೇಡಿ ಎಂದು ಹೇಳುವ  ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಉತ್ತರ ಕರ್ನಾಟಕದವರು ಮತ ಹಾಕಿಲ್ಲ ಎಂದ ಕುಮಾರಸ್ವಾಮಿ ಈಗ  ಗೋಕಾಕ್​​​ನಲ್ಲಿ ಲಿಂಗಾಯತರ ಮತ ಕೇಳಲು ನಾಚಿಕೆಯಾಗಬೇಕು ಎಂದು ವ್ಯಂಗ್ಯ ಮಾಡಿದರು. ಇದೇ ವೇಳೆ ಎಚ್​ಡಿಕೆ ಕಣ್ಣೀರಿನ ಬಗ್ಗೆ ಯತ್ನಾಳ ಲೇವಡಿ ಮಾಡಿದರು.ಚಾಮರಾಜನಗರ: ಇಡ್ಲಿ ಕೊಡಿಸುವ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ