• Home
 • »
 • News
 • »
 • state
 • »
 • ಡೆತ್​ನೋಟ್​ಗಿಂತ ಸಾಕ್ಷಿ ಬೇಕಾ? ಕೂಡಲೇ KS Eshwarappaರನ್ನು ಬಂಧಿಸಿ; ಕಾಂಗ್ರೆಸ್​ ಆಗ್ರಹ

ಡೆತ್​ನೋಟ್​ಗಿಂತ ಸಾಕ್ಷಿ ಬೇಕಾ? ಕೂಡಲೇ KS Eshwarappaರನ್ನು ಬಂಧಿಸಿ; ಕಾಂಗ್ರೆಸ್​ ಆಗ್ರಹ

ಸಿದ್ದರಾಮಯ್ಯ, ಈಶ್ವರಪ್ಪ

ಸಿದ್ದರಾಮಯ್ಯ, ಈಶ್ವರಪ್ಪ

ತಮ್ಮ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಡೆತ್​​ ನೋಟ್ ಬರೆದಿದ್ದಾರೆ. ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು

 • Share this:

  ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಖಾತೆ ಸಚಿವ ಕೆ ಎಸ್​ ಈಶ್ವರಪ್ಪ (KS Eshawarapp) ಕಾರಣ ಎಂದು ಗುತ್ತಿಗೆದಾರ ಸಂತೋಷ್​ ಪಾಟೀಲ್ (Santosh Patil)​​ ಸ್ಪಷ್ಟವಾಗಿ ದಾಖಲೆ ಸಮೇತ ಸಂದೇಶ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ ಸಾವಿಗೆ ಕಾರಣ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆ ಕೂಡಲೇ ಈಶ್ವರಪ್ಪ ಅವರನ್ನು 304ನೇ ಸೆಕ್ಷನ್​ ಅಡಿ ಬಂಧಿಸಬೇಕು ಎಂದು ಕಾಂಗ್ರೆಸ್​ ನಾಯಕರಾದ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್​​ ಒತ್ತಾಯಿಸಿದ್ದಾರೆ.


  ಸಂಪುಟದಿಂದ ವಜಾ ಮಾಡಿ


  ಸಂತೋಷ್​ ಆತ್ಮಹತ್ಯೆ ಪ್ರಕರಣದ ಕುರಿತು ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಸ್ತೆ ಕಾಮಾಗಾರಿ ಹಣ ಬಿಡುಗಡೆಗೆ ಲಂಚ ಕೇಳುತ್ತಿದ್ದಾರೆ ಎಂದು ಸಂತೋಷ್ ಪಾಟೀಲ್ ಆರೋಪಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವ್ರಿಂದ ರಸ್ತೆ ಕೆಲಸ ಮಾಡಿದ್ದ. ಅಲ್ಲದೇ ಅವರ ವಿರುದ್ಧ 40 ಪರ್ಸೆಂಟ್​ ಲಂಚದ ಆರೋಪವನ್ನು ಅವರು ಮಾಡಿದ್ದರು. ಇದೀಗ ಅವರು ತಮ್ಮ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಡೆತ್​​ ನೋಟ್ ಬರೆದಿದ್ದಾರೆ. ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿದರು.


  ಡೆತ್​ನೋಟ್​ಗಿಂತ ಸಾಕ್ಷಿ ಬೇಕಾ
  ಈ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಯಾರ ರಕ್ಷಣೆಗೂ ಹೋಗಬಾರದು. ಇದು ಗಂಭೀರ ಅಪರಾಧ ಪ್ರಕರಣ. ಅವರನ್ನು ಸಂಪುಟದಿಂದ ವಜಾ ಮಾಡದಿದ್ದರೆ, ಸಿಎಂ ಕೂಡ ಇದರಲ್ಲಿ ಪಾಲುದಾರ ಎಂಬುದು ಸಾಬೀತಗುತ್ತದೆ. ಈ ಪ್ರಕರಣದಿಂದ ಸಿಎಂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂಬುದು ಸಾಬೀತಾಗಿದೆ. ನನ್ನ ಸಾವಿಗೆ ಯಾರು ಕಾರಣ ಎಂದ ಹೇಳಿ ಸತ್ತಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಅವರನ್ನು ಬಂಧಿಸಲು ಎಂದು ಪ್ರಶ್ನಿಸಿದರು.


  ರಣದೀಪ್​ ಸುರ್ಜೇವಾಲಾ ಕಿಡಿ


  ಸರ್ಕಾರ ಈಶ್ವರಪ್ಪ ರಾಜೀನಾಮೆ ಪಡೆಯದಿದ್ದರೆ ನಾವು ದೊಡ್ಡ ಹೋರಾಟ ಮಾಡುತ್ತೇವೆ. ಸಿಎಂ ಮನೆಗೆ ನಾವು ಮುತ್ತಿಗೆ ಹಾಕುತ್ತೇವೆ. ಕೂಡಲೇ ಬಿಜೆಪಿ ಹೈಕಮಾಂಡ್ ಗಮನಿಸಬೇಕು. ಬೊಮ್ಮಾಯಿ‌ ಸರ್ಕಾರ ಯಾವ ಮಟ್ಟದ ಭ್ರಷ್ಟಾಚಾರ ಮಾಡುತ್ತಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ನ್ಯಾಯಾಮೂರ್ತಿಗಳು ಇದನ್ನು ಗಮನಿಸಿ ಸ್ವಯಃ ದೂರು ದಾಖಲಿಸಿಕೊಳ್ಳಬೇಕು. ಅಮಿತ್​ ಶಾ ಈಶ್ವರಪ್ಪ ಮೇಲೆ ಕ್ರಮಕ್ಕೆ ಮುಂದಾಗಬೇಕು. ಮೋದಿ ತಾವು ತಿನ್ನಲ್ಲ, ತಿನ್ನುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಮೊದಲು ಅವರು ಈ ಭ್ರಷ್ಟಾಚಾರ ಗಮನಿಸಲು ಎಂದು ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೆವಾಲಾ ತಿಳಿಸಿದರು.


  ಇದನ್ನು ಓದಿ: ಬೇಲೂರಿನ ಚೆನ್ನಕೇಶವ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ: HD Kumaraswamy


  ರಕ್ಷಣೆ ಮಾಡಿದ್ದು ಸಾಕು


  ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಯಾರ ರಕ್ಷಣೆಯನ್ನೂ ಮಾಡಬಾರದು. ಕೇವಲ ಮೌಖಿಕವಾಗಿ ತನಿಖೆ ಮಾಡುತ್ತೇವೆ, ಸತ್ಯಾಂಶ ತಿಳಿಯುತ್ತೇವೆ ಎಂದು ಕಾಲಹರಣ ಮಾಡಬಾರದು. ಕೂಡಲೇ ಎಫ್ಐಆರ್ ದಾಖಲಿಸಿ, ಈಶ್ವರಪ್ಪನನ್ನು ಬಂಧಿಸಬೇಕು. ಈ ಹಿಂದೆ ಸಚಿವರುಗಳ ವಿರುದ್ಧದ ಪ್ರಕರಣದಲ್ಲಿ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಬಿ ರಿಪೋರ್ಟ್ ಹಾಕಿ ರಕ್ಷಣೆ ಮಾಡಿದ್ದು, ಈ ಪ್ರಕರಣದಲ್ಲಿ ಆ ರೀತಿ ಮಾಡಬಾರದು.


  ದನ್ನು ಓದಿ: ನನ್ನ ಸಾವಿಗೆ ಸಚಿವ KS Eshwarappa ಕಾರಣ: ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು


  ಆತ್ಮಹತ್ಯೆಯಲ್ಲ ಕೊಲೆ ಇದು


  ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಅನೇಕ ಸಚಿವರುಗಳ ರಾಜೀನಾಮೆ ಪಡೆಯಲಾಗಿದೆ. ಈಗಲೂ ಆರೋಪ ಹೊತ್ತಿರುವ ಸಚಿವರ ವಿರುದ್ದ ಪ್ರಕರಣ ದಾಖಲಿಸಿ, ಆತನನ್ನು ವಜಾಗೊಳಿಸಬೇಕು, ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ.


  ಇದು ಕೇವಲ ಆತ್ಮಹತ್ಯೆ ಪ್ರಕರಣವಲ್ಲ. ಇದೊಂದು ಕೊಲೆ ಪ್ರಕರಣ. ಈ ಸಾವಿಗೆ ಕಾರಣ ಯಾರು ಎಂದು ಬರೆದಿಟ್ಟು ಸಂತೋಷ್ ಸಾವಿಗೆ ಶರಣಾಗಿದ್ದಾರೆ. ಈ ಸಾವಿಗೆ ಕಾರಣ ಏನು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಹೀಗಾಗಿ ಈಗ ರಾಜ್ಯದಲ್ಲಿ ಕಾನೂನನ್ನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದಷ್ಟೇ ಈಗ ಉಳಿದಿರುವ ವಿಚಾರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

  Published by:Seema R
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು