ಪರಮೇಶ್ವರ್​ ಮನೆ, ಕಾಲೇಜುಗಳ ಮೇಲೆ ಐಟಿ ದಾಳಿ; ಕೇಂದ್ರದ ವಿರುದ್ಧ ಕಿಡಿಕಾರಿದ ಕೈ​ ನಾಯಕರು

ಕೇಂದ್ರದ ವಿರುದ್ಧ ಕಿಡಿಕಾರಿದ ಅವರು, ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗವಾಗಿದೆ-ಸಿದ್ದರಾಮಯ್ಯ

Latha CG | news18-kannada
Updated:October 10, 2019, 11:51 AM IST
ಪರಮೇಶ್ವರ್​ ಮನೆ, ಕಾಲೇಜುಗಳ ಮೇಲೆ ಐಟಿ ದಾಳಿ; ಕೇಂದ್ರದ ವಿರುದ್ಧ ಕಿಡಿಕಾರಿದ ಕೈ​ ನಾಯಕರು
ಸಿದ್ದರಾಮಯ್ಯ-ಪರಮೇಶ್ವರ್-ರಾಮಲಿಂಗಾರೆಡ್ಡಿ
  • Share this:
ಬೆಂಗಳೂರು(ಅ.10): ಮಾಜಿ ಸಚಿವ ಡಿ ಕೆ ಶಿವಕುಮಾರ್ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಮನೆ ಹಾಗೂ ಕಾಲೇಜುಗಳ ಮೇಲೆ ಐಟಿ ದಾಳಿಯಾಗಿದೆ. ಹೀಗಾಗಿ ಕೈ​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಕಾಂಗ್ರೆಸ್​ ನಾಯಕರನ್ನೇ ಟಾರ್ಗೆಟ್​ ಮಾಡಿ ಐಟಿ ಹಾಗೂ ಇಡಿ ದಾಳಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಐಟಿ ದಾಳಿ ಬಗ್ಗೆ ಖಂಡಿಸಿರುವ ಪರಮೇಶ್ವರ್, "ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ ಸಂತೋಷ. ನಮ್ಮಲ್ಲಿನ ತಪ್ಪುಗಳಿದ್ದರೆ ದಾಳಿ ಮಾಡಲಿ. ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಅಂತ ಹೇಳಲಾಗುತ್ತಿದೆ. ಬೇಕಾದಷ್ಟು ಹಣ ಇದೆ. ಅಷ್ಟಿದ್ದರೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ," ಎಂದು ಒತ್ತಾಯಿಸಿದ್ದಾರೆ.

ಪರಮೇಶ್ವರ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲಿನ ಐಟಿ ದಾಳಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕೇಂದ್ರದ ವಿರುದ್ಧ ಕಿಡಿಕಾರಿದ ಅವರು, ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗವಾಗಿದೆ. ಮಾಧ್ಯಮ ನಿರ್ಬಂಧವೂ ಕೂಡ ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಸರ್ಕಾರದ ವಿರುದ್ಧ ಸದನದಲ್ಲಿ ನೆರೆ ಬಗ್ಗೆ  ಹೋರಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ಧಾರೆ.

ಡಿಕೆಶಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್​ಗೆ ಐಟಿ ಶಾಕ್​; ಮನೆ, ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

ಮಾಜಿ ಸಚಿವ ಯು.ಟಿ‌ ಖಾದರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಐಟಿ ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕೇಂದ್ರ‌ ಸರ್ಕಾರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಖಂಡನೀಯ, ಜನ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಐಟಿ ದಾಳಿಯನ್ನು ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ಖಂಡಿಸಿದ್ದಾರೆ. ಐಟಿ ಇಲಾಖೆ ದಾಳಿ ಇದೇ ಮೊದಲೇನಲ್ಲ. ಮೊದಲಿನಿಂದಲೂ ದಾಳಿಯಾಗುತ್ತಲೇ ಇದೆ. ಪ್ರತಿಪಕ್ಷ ನಾಯಕರನ್ನು ಗುರಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ವಿಪಕ್ಷಗಳೇ ಇರಬಾರದೆಂದು ಬಿಜೆಪಿ ಉದ್ದೇಶ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್​.ಕೆ.ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂದಿನಿಂದ ಜಮ್ಮು ಕಾಶ್ಮೀರ ಪ್ರವಾಸಿಗರಿಗೆ ಮುಕ್ತ; 2 ತಿಂಗಳ ಬಳಿಕ ನಿರ್ಬಂಧ ತೆರವುಗೊಳಿಸಿದ ಸರ್ಕಾರ

First published: October 10, 2019, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading