• Home
  • »
  • News
  • »
  • state
  • »
  • Congress Leaders: ಜನರನ್ನು ಸಾಯಿಸಲು GST ತಂದಿದ್ದಾರೆ; ಶ್ರೀಮಂತರಿಗೆ ಟ್ಯಾಕ್ಸ್ ಕಡಿಮೆ ಮಾಡಿ ಬಡವರಿಂದ ವಸೂಲಿ

Congress Leaders: ಜನರನ್ನು ಸಾಯಿಸಲು GST ತಂದಿದ್ದಾರೆ; ಶ್ರೀಮಂತರಿಗೆ ಟ್ಯಾಕ್ಸ್ ಕಡಿಮೆ ಮಾಡಿ ಬಡವರಿಂದ ವಸೂಲಿ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಕೇಂದ್ರದ ಒತ್ತಾಸೆಯಂತೆಯೇ ದಿನಬಳಕೆ ವಸ್ತುಗಳ ಮೇಲೆ GST ಹೇರಿಕೆಯಾಗಿದೆ. ಇದನ್ನು ಹಣಕಾಸು ಸಚಿವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಈಗ ಸಾರ್ವಜನಿಕ ವಿರೋಧದ ಬಳಿಕ ತಮ್ಮ ತಪ್ಪನ್ನು ಇನ್ನೊಬ್ಬರ ಹೆಗಲಿಗೆ ವರ್ಗಾಯಿಸುವ ಕೆಟ್ಟ ಚಾಳಿಯನ್ನು ಸಚಿವೆ ಸೀತಾರಾಮ್ ಬಿಡಬೇಕು ಎಂದು ದಿನೇಶ್ ಗುಂಡೂರಾವ್​ ಕಿಡಿಕಾರಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜು.20): ವಸ್ತುಗಳ ಮೇಲೆ ಜಿಎಸ್​ಟಿ ಏರಿಕೆ ಖಂಡಿಸಿ ಕಾಂಗ್ರೆಸ್​ ಪ್ರತಿಭಟನೆಗೆ (Congress Protest) ಮುಂದಾಗಿದೆ. ಕೈ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತಾಡಿದ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar), ಜನರನ್ನು ಸಾಯಿಸಲು GST ತಂದಿದ್ದಾರೆ. ಸರ್ಕಾರ ಜನರಿಗೆ ಏನು‌ ಸಹಾಯ ಮಾಡುತ್ತಿದೆ ಅನ್ನೋದು ಮುಖ್ಯ. ಜನರ ಆದಾಯ ಕಳೆದ ಎರಡು ವರ್ಷಗಳಿಂದ ಹೆಚ್ಚಳ ಆಗಿಲ್ಲ. ಎರಡು ವರ್ಷದಿಂದ ಸಂಬಳ ಅಷ್ಟೇ ಇದೆ. ಆದ್ರೆ ಎಲ್ಲ ಅಗತ್ಯ ವಸ್ತುಗಳ (Necessary Items) ಬೆಲೆ ಏರಿಕೆ ಆಗುತ್ತಿದೆ. ಜನರನ್ನು ಬದುಕಿದ್ದಾಗಲೇ ಸಾಯಿಸ್ತಾ ಇದ್ದೀರಾ, ವಿಷ ಕೊಟ್ಟು ಸಾಯಿಸ್ತಾ ಇದ್ದೀರಾ?


ಜನರು ಬದುಕೋದು ಹೇಗೆ?


ಹಾಲು, ಮೊಸರು ಬಸ್ ದರ ಎಲ್ಲ ಹೆಚ್ಚಳ ಆಗಿದೆ. 28 ರೂಪಾಯಿಗೆ ಹಾಲು ರೈತರಿಂದ ಪಡೀತೀರಾ, ರೈತರಿಗೆ ಹಾಲಿಗೆ ದುಡ್ಡು ಹೆಚ್ಚಳ ಮಾಡಿಲ್ಲ. ಆದ್ರೆ ಪಶುಗಳ ಆಹಾರಗಳ ಬೆಲೆ ಹೆಚ್ಚಳ ಮಾಡಿದ್ದೀರಾ? ಹೀಗೆ ಆದ್ರೆ ರೈತರು ಹೇಗೆ ಬದುಕಬೇಕು. ಆಹಾರ ಪದಾರ್ಥಗಳ ಮೇಲೆ ಜಿಎಸ್​ಟಿ ಹಾಕಿದ್ರೆ ಜನರು ಹೇಗೆ ಬದುಕಬೇಕು. ಪ್ರತಿದಿನ ಬೆಲೆ ಏರಿಸಿ ಕಿರುಕುಳ ಕೊಡ್ತಾ ಇದ್ದೀರಾ. ಹೊಟೇಲ್ ರೂಮ್, ಆಸ್ಪತ್ರೆ, ಆಹಾರ ಪದಾರ್ಥ, ಚೆಕ್ ಬುಕ್, ಬೊರವೇಲ್ ಮೋಟರ್, ಇಂಕ್, ಮ್ಯಾಪ್ ಎಲ್ಲದರ ಮೇಲೆ ಜಿಎಸ್​ಟಿ ಹಾಕಿದ್ದೀರಾ. ಬಡವರು ಯಾರು ಬದುಕಬಾರದು ಅಂತ ನಿರ್ಧರಿಸಿದ್ದೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಸಣ್ಣ-ಪುಟ್ಟ ವಸ್ತುಗಳಿಗೂ ಬೀಳುತ್ತೆ ಟ್ಯಾಕ್ಸ್


ಕೆಪಿಸಿಸಿ ಕಚೇರಿಯಲ್ಲಿ ಮಾತಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ಅತಿ ಅವಶ್ಯಕ ಪದಾರ್ಥಗಳನ್ನ GSTಯಿಂದ ಹೊರಗಿಡಬೇಕು. GSTಯಿಂದ ಹೊರಗಿಡಬೇಕು ಎಂದಿದ್ದೇವು. ಆಗ ಅದೇ ರೀತಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಬದಲಾವಣೆ ಮಾಡ್ತಿದ್ದಾರೆ. ಅಗತ್ಯ ವಸ್ತುಗಳ ಮೇಲೂ GST ಹಾಕ್ತಿದ್ದಾರೆ. ಈ ಸಣ್ಣ-ಪುಟ್ಟ ವಸ್ತುಗಳಿಗೂ ಟ್ಯಾಕ್ಸ್ ಹಾಕಿದ್ದು ಸರಿಯಲ್ಲ.


ಇದನ್ನೂ ಓದಿ: CM Ibrahim: ಕುಮಾರಸ್ವಾಮಿ ಆಯಸ್ಸು ಗಟ್ಟಿ; ಡಿಸೆಂಬರ್​ನಲ್ಲಿ ಚುನಾವಣೆ, 2023ಕ್ಕೆ HDK ಮುಖ್ಯಮಂತ್ರಿ; ಸಿಎಂ ಇಬ್ರಾಹಿಂ


ಶ್ರೀಮಂತರಿಗೆ ಟ್ಯಾಕ್ಸ್ ಕಡಿಮೆ ಮಾಡಿ ಬಡವರಿಂದ ವಸೂಲಿ


ದೊಡ್ಡ ಹಂತದಲ್ಲಿ ಸೋರಿಕೆಯಾಗ್ತಿದೆ. ದೊಡ್ಡವರು ತೆರಿಗೆ ಕಟ್ಟುತ್ತಿಲ್ಲ. ಅವರನ್ನ ಬಿಟ್ಟು ಬಡವರ ಮೇಲೆ ತೆರಿಗೆ ಹಾಕ್ತಿದ್ದಾರೆ. ಬಡವರ ಮೇಲೆ GST ಹಾಕ್ತಿದ್ದಾರೆ. ಶ್ರೀಮಂತರು ಕಟ್ಟುತ್ತಿದ್ದ GST ತೆರಿಗೆಯನ್ನು 30% ನಿಂದ 22%ಕ್ಕೆ ಇಳಿಸಿದ್ದಾರೆ. ಅಲ್ಲಿನ ನಷ್ಟವನ್ನ ಬಡವರ ಪದಾರ್ಥದ ಮೇಲೆ ಹಾಕ್ತಿದ್ದಾರೆ. ಇದು ಯಾವ ಸೀಮೆ ನ್ಯಾಯ? ಶ್ರೀಮಂತರ ಮೇಲೆ ಟ್ಯಾಕ್ಸ್ ಕಡಿಮೆ ಮಾಡಿ ಬಡವರಿಂದ ಟ್ಯಾಕ್ಸ್ ವಸೂಲಿ ಮಾಡ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಕೃಷ್ಣಬೈರೇಗೌಡ ಆಕ್ರೋಶ ಹೊರಹಾಕಿದ್ರು.


ಇದನ್ನೂ ಓದಿ: Srinivas Gowda: ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ವಿರುದ್ಧ ಮೂಡಬಿದಿರೆಯಲ್ಲಿ ದೂರು ದಾಖಲು


ಟ್ವೀಟ್​ ಮೂಲಕ ದಿನೇಶ್​ ಗುಂಡೂರಾವ್​ ಕಿಡಿ


ಸಾಲು ಸಾಲು ಟ್ವೀಟ್​ ಮಾಡಿ ಕೇಂದ್ರದ ವಿರುದ್ಧ ಕಾಂಗ್ರೆಸ್​ ನಾಯಕ ದಿನೇಶ್​ ಗುಂಡೂರಾವ್​ ಕಿಡಿಕಾರಿದ್ರು. ಎಲ್ಲಾ ರಾಜ್ಯಗಳ ಸಮ್ಮತಿಯ ಮೇರೆಗೆ ದಿನಬಳಕೆ ವಸ್ತುಗಳ ಮೇಲೆ #GST ವಿಧಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಇದು GST ಹೇರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ತೋರಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೆ. GST ಮಂಡಳಿಯಲ್ಲಿ BJPಯೇತರ ರಾಜ್ಯಗಳು ಎಷ್ಟಿವೆ? BJP ರಾಜ್ಯಗಳು ಎಷ್ಟಿವೆ? ಬಹುಮತ ಯಾರದ್ದು.? 


ಕೇಂದ್ರದ ಒತ್ತಾಸೆಯಂತೆಯೇ ದಿನಬಳಕೆ ವಸ್ತುಗಳ ಮೇಲೆ GST ಹೇರಿಕೆಯಾಗಿದೆ. ಇದನ್ನು ಹಣಕಾಸು ಸಚಿವೆ ನಿರ್ಮಲಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಈಗ ಸಾರ್ವಜನಿಕ ವಿರೋಧದ ಬಳಿಕ ತಮ್ಮ ತಪ್ಪನ್ನು ಇನ್ನೊಬ್ಬರ ಹೆಗಲಿಗೆ ವರ್ಗಾಯಿಸುವ ಕೆಟ್ಟ ಚಾಳಿಯನ್ನು ಸಚಿವೆ ಸೀತಾರಾಮ್ ಬಿಡಬೇಕು ಎಂದು ದಿನೇಶ್ ಗುಂಡೂರಾವ್​ ಕಿಡಿಕಾರಿದ್ದಾರೆ.

Published by:Pavana HS
First published: