ಕಾಂಗ್ರೆಸ್​ನವರು ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ, ಕಾಂಗ್ರೆಸ್​ಗೆ ವಿಪಕ್ಷ ಸ್ಥಾನವೇ ಖಾಯಂ; ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ಪಕ್ಷದ ಹಲವಾರು ಜನ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ‌. ಬಾಗಿಲು ತೆರೆಯಬೇಕೋ ಬೇಡವೋ ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಖಾಲಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಳೀನ್ ಕುಮಾರ್ ಕಟೀಲ್.

ನಳೀನ್ ಕುಮಾರ್ ಕಟೀಲ್.

 • News18
 • Last Updated :
 • Share this:
  ಬೆಂಗಳೂರು (ಮಾ. 9): ಕಾಂಗ್ರೆಸ್ ಪಕ್ಷದ ಹಲವಾರು ಜನ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ‌. ಬಾಗಿಲು ತೆರೆಯಬೇಕೋ ಬೇಡವೋ ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಖಾಲಿಯಾಗುತ್ತಿದೆ. ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ನಡುವಿನ ಕೋಳಿ ಜಗಳ, ಒಳಜಗಳದಿಂದ ಕಾಂಗ್ರೆಸ್ ಕಾರ್ಯಕರ್ತರು ಬೇಸತ್ತಿದ್ದಾರೆ. ಹೀಗಾಗಿ, ಅವರು ಯಡಿಯೂರಪ್ಪನವರ ನಾಯಕತ್ವದ ಬಿಜೆಪಿ ಪಕ್ಷಕ್ಕೆ ಬರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ನಾವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶಪಥ ಮಾಡಿದ್ದಾರೆ.

  ನಿನ್ನೆ ಯಡಿಯೂರಪ್ಪ ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದಿದ್ದಾರೆ. ಅವರ ಮಾತಿನಂತೆ ನಮ್ಮ ಇಡೀ ಟೀಮ್ ಕೆಲಸ ಮಾಡಲಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

  ನಮ್ಮದು ಕುಟುಂಬ ರಾಜಕಾರಣವಲ್ಲ, ಕುಟುಂಬ ಪ್ರೀತಿಯ ರಾಜಕಾರಣ. ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳೋದು ನಮ್ಮ ಕರ್ತವ್ಯ. ಈಗ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಸವಕಲ್ಯಾಣದಲ್ಲಿ ಬಂಡೆ ಮತ್ತು ಹುಲಿಯಾ ಅಬ್ಬರವಿಲ್ಲ. ಅಲ್ಲಿ ಕಮಲ ಅರಳುತ್ತಿದೆ. ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ ಬಿಜೆಪಿ ಸೇರಿದ್ದಾರೆ‌. ಬಿಜೆಪಿ ಸೇರಲು ಜನ ಕ್ಯೂ ನಿಂತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲೋದು ನಿಜ. ಈ ಬದಲಾವಣೆಯಿಂದ ಕಾಂಗ್ರೆಸ್ ಭಯಬೀತವಾಗಿದೆ. ಕಾಂಗ್ರೆಸ್ ಪಕ್ಷದ ಹಲವಾರು ಜನ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ‌. ಬಾಗಿಲು ತೆರೆಯಬೇಕೋ ಬೇಡವೋ ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಖಾಲಿಯಾಗುತ್ತಿದೆ. ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ನಡುವಿನ ಕೋಳಿ ಜಗಳ, ಒಳಜಗಳದಿಂದ ಅಲ್ಲಿ ಕಾರ್ಯಕರ್ತರು ಬೇಸತ್ತಿದ್ದಾರೆ. ಹೀಗಾಗಿ, ಅವರು ಯಡಿಯೂರಪ್ಪ ನಾಯಕತ್ವ ಪಕ್ಷಕ್ಕೆ ಹೋಗುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

  ಮಸ್ಕಿ ಚುನಾವಣೆ ಘೋಷಣೆಯಾಗುವುದರ ಒಳಗಾಗಿ ಕಾಂಗ್ರೆಸ್ ಪಕ್ಷವನ್ನು ಖಾಲಿ ಮಾಡಿಸುತ್ತೇವೆ‌. ಕಾಂಗ್ರೆಸ್​ಗೆ ಪ್ರತಿಪಕ್ಷ ಸ್ಥಾನವನ್ನು ಖಾಯಂ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
  Published by:Sushma Chakre
  First published: