HOME » NEWS » State » CONGRESS LEADERS ARE INSTIGATING DELHI VIOLENCE ALLEGES DCM LAXMAN SAVADI MAK

ದೆಹಲಿ ಗಲಭೆಯನ್ನು ಕಾಂಗ್ರೆಸ್​ ನಾಯಕರೇ ಮುಂದೆ ನಿಂತು ಮಾಡಿಸುತ್ತಿದ್ದಾರೆ; ಡಿಸಿಎಂ ಲಕ್ಷ್ಮಣ ಸವದಿ ಗಂಭೀರ ಆರೋಪ

ನಮ್ಮ ದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಗಮಿಸಿದ್ದಾರೆ. ಆದರೆ, ಅವರು ಆಗಮಿಸುವ ಸಂದರ್ಭದಲ್ಲೇ ಈ ದೇಶದಲ್ಲಿ ಅಶಾಂತಿ ಇದೆ ನೋಡಿ ಎಂಬ ಸಂದೇಶವನ್ನು ಸಾರುವ ಸಲುವಾಗಿ ಕಾಂಗ್ರೆಸ್​ ಪಕ್ಷದವರು ದೆಹಲಿಯಲ್ಲಿ ಅಶಾಂತಿಯನ್ನು, ಗಲಭೆಯನ್ನು ಸೃಷ್ಟಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ. 

news18-kannada
Updated:February 27, 2020, 4:55 PM IST
ದೆಹಲಿ ಗಲಭೆಯನ್ನು ಕಾಂಗ್ರೆಸ್​ ನಾಯಕರೇ ಮುಂದೆ ನಿಂತು ಮಾಡಿಸುತ್ತಿದ್ದಾರೆ; ಡಿಸಿಎಂ ಲಕ್ಷ್ಮಣ ಸವದಿ ಗಂಭೀರ ಆರೋಪ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಳಗಾವಿ (ಫೆಬ್ರವರಿ 27); ದೆಹಲಿಯಲ್ಲಿ ಹಿಂಸಾಚಾರ ದಿನೇ ದಿನೇ ಹೆಚ್ಚಾಗುತ್ತಿದ್ದು, ವಿರೋಧ ಪಕ್ಷ ಕಾಂಗ್ರೆಸ್​ ನಾಯಕರೇ ಸ್ವತಃ ಮುಂದೆ ನಿಂತು ಈ ಗಲಭೆಯನ್ನು ಮಾಡಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗಂಭೀರ ಆರೋಪ ಮಾಡಿದ್ದಾರೆ. 

ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಅವರು, "ನಮ್ಮ ದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಗಮಿಸಿದ್ದಾರೆ. ಆದರೆ, ಅವರು ಆಗಮಿಸುವ ಸಂದರ್ಭದಲ್ಲೇ ಈ ದೇಶದಲ್ಲಿ ಅಶಾಂತಿ ಇದೆ ನೋಡಿ ಎಂಬ ಸಂದೇಶವನ್ನು ಸಾರುವ ಸಲುವಾಗಿ ಕಾಂಗ್ರೆಸ್​ ಪಕ್ಷದವರು ದೆಹಲಿಯಲ್ಲಿ ಅಶಾಂತಿಯನ್ನು, ಗಲಭೆಯನ್ನು ಸೃಷ್ಟಿಸಿದ್ದಾರೆ" ಎಂದು ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಕಳೆದ ಸೋಮವಾರ ಸಂಜೆ ಆರಂಭವಾದ ಗಲಭೆಗೆ ಈವರೆಗೆ ಸುಮಾರು 34 ಜನ ಜೀವ ಕಳೆದುಕೊಂಡಿದ್ದರೆ, 200ಕ್ಕೂ ಹೆಚ್ಚು ಜನ ಗಂಭೀರ ಗಾಯಕ್ಕೊಳಗಾಗಿದ್ದಾರೆ. ನಾಲ್ಕು ದಿನವಾದರೂ ಗಲಭೆಯನ್ನು ತಡೆಗಟ್ಟಲು ದೆಹಲಿ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ, ಪರಿಣಾಮ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಮತ್ತು ಜನಜೀವನ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ.

ಇದನ್ನೂ ಓದಿ : ದೆಹಲಿ ಹಿಂಸಾಚಾರ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ರಾಜಭವನಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು
Youtube Video
First published: February 27, 2020, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories