Siddharamotsava: ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಕೈ ಶಾಸಕ ಗೈರು! ಪ್ರಸಾದ್‌ ಅಬ್ಬಯ್ಯ ವಿರುದ್ಧ ಜಮೀರ್ ಗುಡುಗು

ಹುಬ್ಬಳ್ಳಿಯಲ್ಲಿ ನಡೆದ ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಶಾಸಕ ಪ್ರಸಾದ ಅಬ್ಬಯ್ಯ ಗೈರು ಹಾಜರಾಗಿದ್ದಕ್ಕೆ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ. ನಾವೆಲ್ಲಾ ಒಂದಾದರೆ ಚುನಾವಣೆಯಲ್ಲಿ ಗೆಲ್ಲೋಕೆ ಆಗುತ್ತಾ ಅಂತ ಸ್ವಪಕ್ಷೀಯ ಶಾಸಕನಿಗೇ ಜಮೀರ್  ಟಾಂಗ್ ಕೊಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ.

ಶಾಸಕ ಜಮೀರ್ ಅಹ್ಮದ್

ಶಾಸಕ ಜಮೀರ್ ಅಹ್ಮದ್

  • Share this:
ಹುಬ್ಬಳ್ಳಿ: ಸಿದ್ಧರಾಮೋತ್ಸವ (Siddaramotsava) ವಿಚಾರ ಆರಂಭಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ (Congress) ಒಂದಲ್ಲ ಒಂದು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ಧರಾಮೋತ್ಸವ ಮತ್ತು ಮುಂದಿನ ಸಿಎಂ (Next CM) ಯಾರೆಂಬ ವಿಚಾರ ಕಾಂಗ್ರೆಸ್ ನಾಯಕರ ಕಿತ್ತಾಟಕ್ಕೆ ಕಾರಣವಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ (Hubballi) ಜಮೀರ್ ಅಹ್ಮದ್ (Zameer Ahmed) ಸ್ವಪಕ್ಷೀಯ ಶಾಸಕನ (MLA) ವಿರುದ್ಧವೇ ಹರಿಹಾಯ್ದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮೋತ್ಸವ ಪೂರ್ವ ಭಾವಿ ಸಭೆಗೆ ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ (Prasad Abbaiah) ಗೈರಾಗಿರೊದಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗರಂ ಆಗಿದ್ದಾರೆ.

ಸಭೆಯಲ್ಲಿಯೇ ಜಮೀರ್ ಅಸಮಾಧಾನ

ಹುಬ್ಬಳ್ಳಿಯ ಕಚ್ಚಿ ಗಾರ್ಡನ್ ನಲ್ಲಿ ನಡೆದ ಸಿದ್ಧರಾಮೋತ್ಸವ ಪೂರ್ವಭಾವಿ‌ ಸಭೆಯ ಭಾಷಣದಲ್ಲಿಯೇ ಜಮೀರ್ ಅಸಮಾಧಾನ ಹೊರಹಾಕಿದ್ದಾರೆ. ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಅಹ್ಮದ್ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರೋದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿದೆ. ಪ್ರಸಾದ ಅಬ್ಬಯ್ಯ ಮಗನಿಗೆ ಜ್ವರ ಬಂದಿದೆ ಅಂತೇಳಿ ಸಭೆ ಬಂದಿಲ್ಲ. ಜ್ವರ ಮಗನಿಗೆ ಬಂದಿದಿಯಾ ಅಥವಾ ಪ್ರಸಾದ್ ಅಬ್ಬಯ್ಯಗೆ ಬಂದಿದೇಯಾ ಅಂತ ಪ್ರಶ್ನಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತ ನಿರ್ಣಾಯಕ. ಇದನ್ನು ಅವರು ಮರೆಯದಿರಲಿ. ಅಬ್ಬಯ್ಯ ಯಾವತ್ತಾದರೂ ನಮ್ಮ ಬಳಿಗೆ ಬರಬೇಕುಅವಾಗ ನಾನು ಮಾತನಾಡುತ್ತೇನೆ ಎಂದಿದ್ದಾರೆ.

ಎಲೆಕ್ಷನ್ ವೇಳೆ ಮತದಾರರಿಗೆ ಜ್ವರ ಬಂದರೆ?

ಅವರ ಮಗನಿಗೆ ಜ್ವರ ಬಂದಿದೆ ಅಂತ ಅವರು ಬಂದಿಲ್ಲ. ಎಲೆಕ್ಷನ್ ವೇಳೆ ಮತದಾರ ರಿಗೂ ಜ್ವರ ಬಂದರೆ ಹೇಗೆ ಅಂತ ಪ್ರಶ್ನಿಸಿದ್ದಾರೆ. ಚುನಾವಣಾ ಜ್ವರ ಬಂದಿದ್ದರೆ ಬರ್ತಾ ಇದ್ದರೂ ಇಲ್ವೋ...?  1 ಲಕ್ಷ ಅಲ್ಪಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ, ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕೆಂದು ಪರೋಕ್ಷವಾಗಿ ಪ್ರಸಾದ ಅಬ್ಬಯ್ಯಗೆ ಟಾಂಗ್ ಕೊಟ್ಟರು. ಟೇಬಲ್ ಗುದ್ದಿ ಪ್ರಸಾದ್ ಅಬ್ಬಯ್ಯ ವಿರುದ್ಧ ಜಮೀರ್ ಕಿಡಿಕಾರಿದರು.

ಇದನ್ನೂ ಓದಿ: CRZ ವಿಸ್ತರಣೆಯಿಂದ ಕರಾವಳಿ ಪ್ರದೇಶದ ಅಭಿವೃದ್ಧಿ; ಸಿಎಂ ಬೊಮ್ಮಾಯಿ ಭರವಸೆ

ನಾನು ಸತ್ತಾಗಲೇ ನನ್ನ ಬಾಯಿ ಮುಚ್ಚೋದು

ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೇನೆ ಎಂದು ಹೇಳೋ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಮಾಜಿ ಸಚಿವ ಜಮೀರ್ ಅಹ್ಮದ್ ಮತ್ತೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮೋತ್ಸವ ಪೂರ್ವ ಬಾವಿ ಸಭೆ ಹಿನ್ನೆಲೆಗೆ ಹುಬ್ಬಳ್ಳಿಗೆ ಬಂದಿದ್ದ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಡಿಕೆಶಿ ನಮ್ಮ ಅಧ್ಯಕ್ಷರು, ಅವರ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಹೇಳಿದ್ರು.

ನನಗೂ ಒಕ್ಕಲಿಗರಲ್ಲಿ ಆತ್ಮೀಯರಿದ್ದಾರೆ

ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನನಗೂ ನಮ್ಮ ಜಾತಿಯವರಿಗಿಂತ ಒಕ್ಕಲಿಗರು ಬಹಳ ಆತ್ಮೀಯರಿದ್ದಾರೆ. ಸ್ವಾಮೀಜಿಯವರು ಅಸಮಧಾನ ಮಾಡಿಕೊಂಡಿದ್ದು ನನಗೆ ಗೊತ್ತಿಲ್ಲ. ಅವರೇನಾದ್ರು ಹೇಳಿದ್ರೆ ನಾನು ಮಾತನಾಡಬಹುದಿತ್ತು. ಸಿಟಿ ರವಿ, ಅಶೋಕ ಮಾತನಾಡಿದ್ದರು ನಾನು ಕೇಳಿದ್ದೆನೆ. ಚಲುರಾಯಸ್ವಾಮಿ ನನಗೂ ಏನನ್ನೂ ಹೇಳಿಲ್ಲ. ಎಐಸಿಸಿಯಿಂದಲೂ ನಂಗೆ ಸೂಚನೆ ಬಂದಿಲ್ಲ ಎಂದರು.

ಡಿಕೆಶಿಗೆ ತಿರುಗೇಟು ನೀಡಿದ ಜಮೀರ್

ಮೃದುವಾಗಿ ಮಾತಾಡುತ್ತಲೇ ಮತ್ತೆ ಡಿಕೆಶಿಗೆ ಟಕ್ಕರ್ ಕೊಟ್ಟ ಜಮೀರ್, ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೇನೆ..!! ನನ್ನ ಬಾಯಿ ಮುಚ್ಚೋಕೆ ಸಾಧ್ಯ ಇಲ್ಲ. ನಾನು ಪಕ್ಷ ಪೂಜೇನೂ ಮಾಡ್ತಿನಿ, ಅದರ ಜೊತೆ ವ್ಯಕ್ತಿ ಪೂಜೇನೂ ಮಾಡ್ತೀನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ, ಜನರ ಅಭಿಪ್ರಾಯ ಹೇಳಿದ್ದೇನೆ ಎಂದರು.

ಇದನ್ನೂ ಓದಿ: Zameer Ahmed Khan ಮುಂದೆ ಸಿಎಂ ಆಗುವ ನಾಯಕ: ಪಂಚಾಕ್ಷರಿ ಸ್ವಾಮೀಜಿ ಆರ್ಶಿವಚನ

ಪದೇ ಪದೇ ಅದೇ ಮುಂದುವರೆಸೋದು ಬೇಡ. ರಾಜಕೀಯದಲ್ಲಿ ಲೆವಲ್ ಗುರುತಿಸೋದು ಜನ, ನಮ್ಮ ಲೆವಲ್ ಜನ ಹೇಳಬೇಕು ಎಂದು ಡಿಕೆಶಿಗೆ ಜಮೀರ್ ಅಹ್ಮದ್ ಮತ್ತೆ ಟಾಂಗ್ ನೀಡಿದರು. ನನಗೆ ಯಾಕೆ ನೋಟಿಸ್ ನೀಡ್ತಾರೆ..? ನಾನೇನು ತಪ್ಪು ಮಾತನಾಡಿದ್ದೇನೆ..? ಎಂದು ಜಮೀರ್ ಪ್ರಶ್ನಿಸಿದರು.
Published by:Annappa Achari
First published: