10 ದಿನದಲ್ಲಿ ರೆಡ್ಡಿ ಬಂಧನವಾಗದಿದ್ದರೆ ಸಿದ್ದರಾಮಯ್ಯ ಸಮೇತರಾಗಿ ಪ್ರತಿಭಟನೆ: ಜಮೀರ್ ಎಚ್ಚರಿಕೆ

ಇನ್ನ ಹತ್ತು ದಿನ ಗಡವು ನೀಡುತ್ತಿದ್ದೇನೆ. ಅಷ್ಟರೊಳಗೆ ರೆಡ್ಡಿಯವರನ್ನು ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ನಾನೊಬ್ಬ ಮಾತ್ರವಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರಾದ ದಿನೇಶ್​ ಗುಂಡೂರಾವ್​ ಸೇರಿದಂತೆ ಮತ್ತಿತ್ತರ ನಾಯಕರು ಬಳ್ಳಾರಿಗೆ ಆಗಮಿಸುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು. 

news18-kannada
Updated:January 13, 2020, 2:31 PM IST
10 ದಿನದಲ್ಲಿ ರೆಡ್ಡಿ ಬಂಧನವಾಗದಿದ್ದರೆ ಸಿದ್ದರಾಮಯ್ಯ ಸಮೇತರಾಗಿ ಪ್ರತಿಭಟನೆ: ಜಮೀರ್ ಎಚ್ಚರಿಕೆ
ಜಮೀರ್​ ಅಹಮದ್​
  • Share this:
ಬಳ್ಳಾರಿ (ಜ.13): ಅಲ್ಪ ಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ಅವರನ್ನು ಬಂಧಿಸದಿದ್ದರೆ, ಸೋಮವಾರ ಬಳ್ಳಾರಿಗೆ ಬರುತ್ತೆನೆಂದು ಹೇಳಿದ್ದೆ. ಅದರಂತೆ ನಾನು ಬಳ್ಳಾರಿಗೆ ಬಂದಿದ್ದೇನೆ ಎಂದು ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ನ್ಯೂಸ್​18ಗೆ ತಿಳಿಸಿದ್ದಾರೆ. 

ಪೊಲೀಸ್​ ಅನುಮತಿ ಇಲ್ಲದಿದ್ದರೂ ಕೂಡ  ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ರೆಡ್ಡಿ ಮನೆಗೆ ನುಗ್ಗಲು ಯತ್ನಿಸಿದ ಜಮೀರ್​ ಅವರನ್ನು ಪೊಲೀಸರು ವಶಕ್ಕೆ ಪಡೆದು,   ಇಂದು ಮಧ್ಯಾಹ್ನ ಬಿಡುಗಡೆ ಮಾಡಿದರು.

ಬಿಡುಗಡೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಪ್ರಚೋದನಕಾರಿ ಹೇಳಿಕೆ ನೀಡಿದ ರೆಡ್ಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರೂ ಇನ್ನು ಅವರ ಬಂಧನವಾಗಿಲ್ಲ. ಇನ್ನ ಹತ್ತು ದಿನ ಗಡವು ನೀಡುತ್ತಿದ್ದೇನೆ. ಅಷ್ಟರೊಳಗೆ ರೆಡ್ಡಿಯವರನ್ನು ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ನಾನೊಬ್ಬ ಮಾತ್ರವಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರಾದ ದಿನೇಶ್​ ಗುಂಡೂರಾವ್​ ಸೇರಿದಂತೆ ಮತ್ತಿತ್ತರ ನಾಯಕರು ಬಳ್ಳಾರಿಗೆ ಆಗಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಳ್ಳಾರಿಗೆ ಬರುವ ಬಗ್ಗೆ ಕಳೆದ ನಾಲ್ಕು ದಿನಗಳ ಹಿಂದೆಯೇ ಪೊಲೀಸರ ಅನುಮತಿಯನ್ನು ಕೋರಿದ್ದೆ. ಆದರೆ, ಪೊಲೀಸರು ಕೇವಲ ಸ್ವೀಕೃತಿ ಪತ್ರ ನೀಡಿದ್ದರು. ಇಂದು ಪರವಾನಗಿ ಇಲ್ಲದ ಕಾರಣ ಅವರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ ಎಂದರು.

ಇದನ್ನು ಓದಿ: ನುಡಿದಂತೆ ಬಳ್ಳಾರಿಗೆ ಬಂದಿದ್ದೇನೆ, ಎಲ್ಲಿ ನಿನ್ನ ಖಡ್ಗ: ಸೋಮಶೇಖರ್​ ರೆಡ್ಡಿ ಮನೆ ಮುಂದೆ ಜಮೀರ್ ಅಬ್ಬರ, ಬೆನ್ನಲ್ಲೇ ವಶಕ್ಕೆ

ಬಳ್ಳಾರಿಗೆ ಬರುತ್ತೇನೆ ಎಂಬ ಜಮೀರ್​ ಸವಾಲಿಗೆ ಕಳೆದವಾರ ಉತ್ತರಿಸಿದ್ದ ರೆಡ್ಡಿ, ಬಂದು ಮನೆಯಲ್ಲಿ ತಿಂಡಿ ತಿಂದು ಹೋಗಲಿ ಎಂದು ಆಹ್ವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್​, ಸೋಮಶೇಖರ ರೆಡ್ಡಿ ಮನೆಯಲ್ಲಿ ತಿಂಡಿ ತಿನ್ನೋದು ಒಂದೇ ವಿಷ ಕುಡಿಯೋದು ಒಂದೇ ಎಂದರು. ನನಗೆ ಅವರ ಔತಣ, ಸನ್ಮಾನ ಯಾವುದೂ ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ