ಚಿಕ್ಕಮಗಳೂರು: ಜೆಡಿಎಸ್ನಿಂದ (JDS) ಕಾಂಗ್ರೆಸ್ಗೆ (Congress) ಸೇರ್ಪಡೆಯಾಗಿದ್ದ ಹಿರಿಯ ರಾಜಕಾರಣಿ ವೈಎಸ್‌ವಿ ದತ್ತಾ (YSV Datta) ಅವರಿಗೆ ಕಡೂರು (Kadur) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಮಿಸ್ ಆಗಿದೆ. ಈ ಹಿನ್ನೆಲೆ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇಂದು ಬೆಂಬಲಿಗರ ಸಭೆ ನಡೆಸಿದ್ದ ದತ್ತಾ ಅವರು, ಪಕ್ಷೇತರ ಅಭ್ಯರ್ಥಿಯಾಗಿ (Independent Candidate) ಚುನಾವಣೆ (Election) ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಟವೆಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿರುವ ದತ್ತಾ ಅವರು, ಟವೆಲ್ ಒಡ್ಡುತ್ತೇನೆ ಮತ ಭಿಕ್ಷೆ, ಹಣ ನೀಡಿ ಭಿಕ್ಷೆ ನೀಡಿ ಎಂದು ವೈಎಸ್ ವಿ ದತ್ತಾ ಟವೆಲ್ ಒಡ್ಡಿದ್ದಾರೆ.
ಇಂದು ಸ್ವಾಭಿಮಾನದ ಸಭೆ ನಡೆಸಿ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಿದ ವೈಎಸ್‌ವಿ ದತ್ತಾ ಅವರು, ಕಡೂರಿನಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಅಲ್ಲದೆ, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಸ್ವಾಭಿಮಾನದ ಸಭೆಯಲ್ಲಿ ಭಿಕ್ಷೆ ಬೇಡಿದರು. ಚುನಾವಣಾ ಖರ್ಚಿಗಾಗಿ ಅಭಿಮಾನಿಗಳು ಸಭೆಯಲ್ಲಿ 50 ಸಾವಿರ ರೂಪಾಯಿ, 2 ಲಕ್ಷದ ಚೆಕ್ ಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!
ಅಲ್ಲದೆ, ಮತ್ತಷ್ಟು ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ದತ್ತಾ ಅಭಿಮಾನಿಗಳು ಸ್ವತಂತ್ರವಾಗಿ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಅಭಿಮಾನಿಗಳ ಸೂಚನೆ ಮೇರೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು, ಕಾಂಗ್ರೆಸ್ನಿಂದ ಟಿಕೆಟ್ ನೀಡದ ಕುರಿತಂತೆ ಬೇಸರ ವ್ಯಕ್ತಪಡಿಸಿದ್ದ ದತ್ತಾ ಅವರು, ಪಕ್ಷದ ನಾಯಕರು ಟಿಕೆಟ್ ನೀಡುವುದಕ್ಕೂ ಮುಂಚೆ ಬೇರೆ ಕ್ಷೇತ್ರಗಳಲ್ಲಿ ನಡೆಸಿದ ಪ್ರಕ್ರಿಯೆ ನಮ್ಮಲ್ಲೂ ನಡೆಸಬಹುದಿತ್ತು. ಟಿಕೆಟ್ ಘೋಷಣೆಯಾದ ಬಳಿಕವೂ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ನಾನು ಬಾಡಿಗೆ ಕಾರಿನಲ್ಲಿ ತಿರುಗುತ್ತೇನೆ, ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರವಾಸ ಮಾಡುತ್ತೇನೆ. ನನ್ನನ್ನ ಹೇಗೆ ಬೇಕಾದರೂ ಸಂಪರ್ಕ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ದತ್ತಾ ಶಕ್ತಿ ಭಾರೀ ಗೌಣ, ಏನು ತೊಂದರೆ ಆಗುವುದಿಲ್ಲ ಎಂದು ಭಾವಿಸಿರಬಹುದು. ಆದರೆ ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ