ಮೋದಿ ಒಬ್ಬ ಆಧುನಿಕ ಭಸ್ಮಾಸುರ; ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ

ದೇಶದ ಜಿಡಿಪಿ ಪಾತಳಕ್ಕೆ ಕುಸಿದಿದೆ. ಬಜೆಟ್​ ಮಂಡನೆಯಲ್ಲಿ 98 ಲಕ್ಷ ಕೋಟಿ ಜನ ಸಾಮಾನ್ಯರ ಮೇಲೆ ಹೊರೆ ಹೊರೆಸಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮೇಲೆತ್ತುವ ಬದಲು ಭಾವನಾತ್ಮಕ ವಿಷಯಗಳ ಮೂಲ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

  • Share this:
ಹಾಸನ(ಫೆ.8): ಮೋದಿ ಒಬ್ಬ ಆಧುನಿಕ ಭಸ್ಮಾಸುರ ಇದ್ದಂತೆ. ಅವರು ಯಾವುದಕ್ಕೆ ಕೈ ಹಾಕಿದರೂ ಅದು ನಾಶವಾಗುತ್ತದೆ. ಪ್ರಧಾನಿಯಾಗಿ ಇಡೀ ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದರು. ಪೌರತ್ವದ ಮೂಲಕ ದೇಶದಲ್ಲಿ ಕಿಚ್ಚು ಹತ್ತಿಸಿದರು ಎಂದು ಪ್ರಧಾನಿ ವಿರುದ್ಧ ಮಾಜಿ ಸಂಸದ ವಿಎಸ್​ ಉಗ್ರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ದೇಶದ ಜಿಡಿಪಿ ಪಾತಳಕ್ಕೆ ಕುಸಿದಿದೆ. ಬಜೆಟ್​ ಮಂಡನೆಯಲ್ಲಿ 98 ಲಕ್ಷ ಕೋಟಿ ಜನ ಸಾಮಾನ್ಯರ ಮೇಲೆ ಹೊರೆ ಹೊರೆಸಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮೇಲೆತ್ತುವ ಬದಲು ಭಾವನಾತ್ಮಕ ವಿಷಯಗಳ ಮೂಲ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೋದಿ ಎಲ್ಲಾ ರೀತಿಯಲ್ಲೂ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಜನರ ಭಾವನಾತ್ಮಕವಾಗಿ ಸೆಳೆಯಲು ನೋಡುತ್ತಿದ್ದಾರೆ. ಅವರಿಗೆ ತಾಕತ್​ ಇದ್ದರೆ ಬ್ಯಾಲೆಟ್​ ಚುನಾವಣೆ ನಡೆಸಿ, 300 ಸೀಟು ಗೆಲ್ಲಲಿ ಆಗ ನಾನು ಜೀವ ಇರುವವರೆಗೂ ಅವರಿಗೆ ಸೆಲ್ಯೂಟ್​ ಹೊಡೆಯುತ್ತೇನೆ ಎಂದು ಸವಾಲ್​ ಹಾಕಿದರು.

ಇದನ್ನು ಓದಿ: ಖಾತೆ ಬದಲಾವಣೆ ಮುನ್ಸೂಚನೆ; ಯಡಿಯೂರಪ್ಪ ಭೇಟಿ ಮಾಡಿದ ಆರ್​ ಅಶೋಕ್​

ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದಾಗಲೂ ವಾಮಮಾರ್ಗದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ಬರೀ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯ ಪ್ರವಾಹಕ್ಕೆ ತುತ್ತಾಯಿತು. ಆದರೂ, ಕೇಂದ್ರದಿಂದ ಹಣತರುವಲ್ಲಿ ಅವರು ವಿಫಲರಾದರು. ಪ್ರವಾಹ ಪರಿಹಾರವಾಗಿ 1089 ಕೋಟಿ ಕೇಂದ್ರದಿಂದ ಕೊಟ್ಟಿದ್ದಾರೆ. ಅದು ನಮ್ಮ ಹಣ. ಜ್ಯಕ್ಕೆ ಬರಬೇಕಾದ ಹಣ. ಬರೀ ಸಚಿವ ಸಂಪುಟ ವಿಸ್ತರಣೆ, ಸಚಿವರ ಓಲೈಕೆ ಬಿಟ್ಟು, ರಾಜ್ಯದ ಅಭಿವೃದ್ಧಿ ಕೂಡ ಅವರು ಗಮನ ಕೊಡಬೇಕು ಎಂದು ಸಲಹೆ ನೀಡಿದರು.
First published: