ದೇಶದಲ್ಲಿ ನಡೆಯುತ್ತಿರುವ ಬೆಂಕಿ ಹಚ್ಚುವ ಕೆಲಸಗಳಿಗೆ ಕೇಂದ್ರ ಸರ್ಕಾರವೇ ಕಾರಣ; ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆರೋಪ

ಕಾಂಗ್ರೆಸ್​​​ನ ತೇಜೋವಧೆ ಮಾಡುವುದನ್ನು ಮೋದಿ ಬಿಡಬೇಕು. ಅವರ ಪಾಲಿಸಿಯಿಂದ ಅವರ ರಾಜ್ಯವೇ ಹಿಡಿತಕ್ಕೆ ಸಿಗುತ್ತಿಲ್ಲ. ಬಡತನ, ನಿರೋದ್ಯೋಗದಿಂದ ಜನ ಎಚ್ಚೆತ್ತುಕೊಂಡಿದ್ದಾರೆ. ಸಂವಿಧಾನದ ಅರಿವು ನಿಮಗೆ ಏನಾದ್ರೂ ಇದೆಯಾ..? ಜನರ ದಾರಿ ತಪ್ಪಿಸುವ ಕೆಲಸ ಮೋದಿ ಮಾಡಿದ್ದಾರೆ. ಹೀಗಾಗಿ ಪ್ರಧಾನಿಗಳು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ವಿ. ಎಸ್ ಉಗ್ರಪ್ಪ.

ಮಾಜಿ ಸಂಸದ ವಿ. ಎಸ್ ಉಗ್ರಪ್ಪ.

  • Share this:
ಬೆಂಗಳೂರು(ಡಿ.16): ಮೋದಿ, ಅಮಿತ್ ಶಾ, ಸಿಎಂ ಯಡಿಯೂರಪ್ಪ ಅವರು ಭ್ರಮಾಲೋಕದಲ್ಲಿ ಇದ್ದಾರೆ. ಜೊತೆಗೆ ಅವರ ಮಾತುಗಳಲ್ಲಿ ಹತಾಶೆ ಭಾವನೆ ಕಾಣುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತ ಹೇಳಿದ್ದರು. ಇವತ್ತು ಬಿಜೆಪಿ ಮುಕ್ತ ಭಾರತ ಮಾಡುವುದಕ್ಕೆ ಜನ ಹೊರಟಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒರಿಸ್ಸಾ, ದೆಹಲಿ, ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ಕಡೆ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಭಾರತ್ ಬಚಾವೋ ಆಂದೋಲನದಲ್ಲಿ ಜನರ ಪ್ರತಿಕ್ರಿಯೆ ನೋಡಿ ಪ್ರಧಾನಿ ಮನ ಬಂದಂತೆ ಮಾತನಾಡುತ್ತಿದ್ದಾರೆ. ಗಲಭೆ, ಬೆಂಕಿ ಹಚ್ಚುವುದಕ್ಕೆ ಕಾಂಗ್ರೆಸ್ ಕಾರಣ ಅಂತ ಪ್ರಧಾನಿ ಹೇಳುತ್ತಾರೆ. ಬಿಜೆಪಿಯ ಮೈಂಡ್ ಸೆಟ್ ಪ್ರಧಾನಿಗಳ ಹೇಳಿಕೆಯಲ್ಲಿ ಕಾಣುತ್ತಿದೆ. ಮಂಡಲ್ ವರದಿ, ಬಾಬ್ರಿ ಮಸೀದಿ, ಗೋದ್ರಾ ಹತ್ಯಾಕಾಂಡ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಯಾರು? ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕೆ ಆ ರೀತಿ ನಡೆದುಕೊಂಡಿದ್ದು ಯಾರು..? ಎಂದು ಉಗ್ರಪ್ಪ ಪ್ರಶ್ನಿಸಿದರು.

ಪೌರತ್ವ ಕಾಯ್ದೆ ಕಿಚ್ಚು: ಬಂಧನಕ್ಕೀಡಾಗಿದ್ದ 50 ಜಾಮಿಯ ವಿವಿ ವಿದ್ಯಾರ್ಥಿಗಳ ಬಿಡುಗಡೆ; ದೆಹಲಿಯಾದ್ಯಾಂತ ಕಟ್ಟೆಚ್ಚರ

ಕಾಂಗ್ರೆಸ್​​​ನ ತೇಜೋವಧೆ ಮಾಡುವುದನ್ನು ಮೋದಿ ಬಿಡಬೇಕು. ಅವರ ಪಾಲಿಸಿಯಿಂದ ಅವರ ರಾಜ್ಯವೇ ಹಿಡಿತಕ್ಕೆ ಸಿಗುತ್ತಿಲ್ಲ. ಬಡತನ, ನಿರೋದ್ಯೋಗದಿಂದ ಜನ ಎಚ್ಚೆತ್ತುಕೊಂಡಿದ್ದಾರೆ. ಸಂವಿಧಾನದ ಅರಿವು ನಿಮಗೆ ಏನಾದ್ರೂ ಇದೆಯಾ..? ಜನರ ದಾರಿ ತಪ್ಪಿಸುವ ಕೆಲಸ ಮೋದಿ ಮಾಡಿದ್ದಾರೆ. ಹೀಗಾಗಿ ಪ್ರಧಾನಿಗಳು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ನಿಮ್ಮಂಥ ಉಡಾಫೆ ಪಕ್ಷ ನಮ್ಮದಲ್ಲ. ಪ್ರಹ್ಲಾದ್ ಜೋಶಿಯವರು ಸಂವಿಧಾನದ ಅರಿವಿಲ್ಲದೇ ಮಾತನಾಡುತ್ತಾರೆ. ಬುದ್ದಿ ಭ್ರಮಣೆ ರಾಹುಲ್ ಗಾಂಧಿಯವರಿಗೆ ಆಗಿಲ್ಲ. ಬುದ್ದಿಭ್ರಮಣೆ ಆಗಿರೋದು ಪ್ರಹ್ಲಾದ್ ಜೋಶಿಗೆ, ಅವರ ಪ್ರಧಾನಿಗೆ.  ಬೆಂಗಳೂರಿನಲ್ಲ, ದೆಹಲಿಯಲ್ಲಿ ರೇಪ್​​​​ಗಳಾದ ಬಿಜೆಪಿಯವರು ಏನಂಥ ಕರೆದಿದ್ದರು. ಕ್ಯಾಪಿಟಲ್ ಆಫ್ ರೇಪ್ ಸಿಟಿ ಅಂತ ಇದೇ ಮೋದಿ ಕರೆದಿದ್ದರು. ದೇಶಗಳಲ್ಲಿ ಆಗುತ್ತಿರುವ ಹತ್ಯಾಚಾರ ಪ್ರಕರಣ ತಡೆಯಲು ಬಿಜೆಪಿ ವಿಫಲವಾಗಿದೆ. ದೇಶದಲ್ಲಿ ಆಗುತ್ತಿರುವ ಬೆಂಕಿ ಹಚ್ಚುವ ಕೆಲಸಗಳಿಗೆ ಕೇಂದ್ರ ಸರ್ಕಾರವೇ ಕಾರಣ. ಗಲಾಟೆಗಳು ಆಗಲಿ ಅಂತ ನಾವು ಯಾವತ್ತೂ ಬಯಸಲ್ಲ. ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡೋದನ್ನ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ‘ಅಸ್ಮಿತೆ’ಗೆ ಆಘಾತ; ಕಸಾಪ ಹೊಸ ಕಟ್ಟಡಕ್ಕೆ ಭೂಮಿ ಭಾಗ್ಯ ಇಲ್ಲ; ಬಿಬಿಎಂಪಿಯಿಂದ ಅನುಮೋದನೆ ರದ್ದು

ಯಡಿಯೂರಪ್ಪ ಕೂಡ ಪಾಪ ಭ್ರಮಾಲೋಕದಲ್ಲಿ ಇದ್ದಾರೆ. ಅಧಿಕಾರ, ಹಣದಿಂದ ಉಪ ಚುನಾವಣೆ ನಡೆಸಿದರು. ಶೇ. 75 ರಷ್ಟು ಮತದಾರರು ನಂಬಿಕೆ ಕಳೆದುಕೊಳ್ತಿದ್ದಾರೆ.  ಚುನಾವಣಾ ಆಯೋಗ ಕೂಡ ಆ ಕಡೆ ಗಮನ ಕೊಡ್ತಿಲ್ಲ. ಮುಕ್ತ, ನಿರ್ಭೀತ ಚುನಾವಣೆ ಆಗಬೇಕು. 12 ಸೀಟು ಗೆದ್ದ ಮೇಲೆ ಭ್ರಮಾಲೋಕದಲ್ಲಿದ್ದಾರೆ.  ಎಲ್ಲಿದ್ದೀರಾ ಯಡಿಯೂರಪ್ಪನವರೇ..? ರಾಜ್ಯದ ಸಮಸ್ಯೆ ಬಗೆಹರಿಸುವಲ್ಲಿ ಏನಾದ್ರೂ ಬದ್ದತೆ ಇದೆಯಾ ನಿಮಗೆ? ನೆರೆ ಪರಿಹಾರ 1200 ಕೋಟಿ ಬಂದಿದ್ದಷ್ಟೇ. ಏನಾದ್ರೂ ಪರಿಹಾರ, ಸಂತ್ರಸ್ತರಿಗೆ ಸಹಾಯ ಕಾರ್ಯಗಳು ನಡೀತಿದ್ಯಾ..? ಸಂತ್ರಸ್ತರಿಗೆ 10 ಸಾವಿರ ಕೊಡಲು 203 ಕೋಟಿ, ವಸತಿ ಯೋಜನೆಯಡಿ 742 ಕೋಟಿ, ಆರ್ ಡಿಪಿಆರ್ 1200 ಕೋಟಿ, ರೆವೆನ್ಯೂ ಇಲಾಖೆಯಿಂದ 500 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ, 1100 ಕೋಟಿ ಬೆಳೆ ನಾಶಕ್ಕೆ ಪರಿಹಾರ, ಒಟ್ಟಾರೆ 4800 ಕೋಟಿ ಮಾತ್ರ ಅನುದಾನ ಬಿಡುಗಡೆ ಆಗಿದೆ. ನೆರೆಯಿಂದ ಹಾನಿಯಾಗಿರೋದು ಒಂದು ಲಕ್ಷ ಕೋಟಿ. ಇದೇನಾ ನಿಮ್ಮ ಜನಪರ ಕೆಲಸಗಳು..?ಎಂದು ತೀವ್ರ ವಾಗ್ದಾಳಿ ನಡೆಸಿದರು.
Published by:Latha CG
First published: