ವಿಧಾನಸೌಧದ ಮೆಟ್ಟಿಲು ಮೇಲೆಯೇ 'ಸಿಎಎ' ಬಗ್ಗೆ ಚರ್ಚೆಯಾಗಲಿ; ಅಮಿತ್​ ಶಾಗೆ ವಿ.ಎಸ್.ಉಗ್ರಪ್ಪ ಸವಾಲು

ಹೌದು ರಾಮಚಂದ್ರ ಗುಹಾ ಹೇಳಿದ್ದು ಸತ್ಯ. ಮೋದಿ ಹಾಗೆ ರಾಹುಲ್ ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆ ಧರಿಸಲ್ಲ. ಮೋದಿ ಹಾಗೆ ರಾಹುಲ್ ಗಾಂಧಿ ಸುಳ್ಳು ಹೇಳಲ್ಲ. ರಾಹುಲ್ ಗಾಂಧಿ ಒಬ್ಬ ವ್ಯಕ್ತಿಯಲ್ಲ, ಅವರು ಕಾಂಗ್ರೆಸ್ ಶಕ್ತಿ. ರಾಮಚಂದ್ರ ಗುಹಾ ಅವರೇ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ," ಎಂದು ತಿರುಗೇಟು ಕೊಟ್ಟರು.

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

  • Share this:
    ಬೆಂಗಳೂರು(ಜ.19): "ಮಿಸ್ಟರ್ ಅಮಿತ್ ಷಾ ನಿಮಗೆ ತಾಕತ್ತಿದ್ದರೆ ಚರ್ಚೆಗೆ ಬನ್ನಿ, ನೀವಾಗಲಿ, ನಿಮ್ಮ ಪ್ರಧಾನಿ ಆಗಲಿ ಮುಕ್ತ ಚರ್ಚೆಗೆ ಬನ್ನಿ. ಸಿಎಎ ಮತ್ತು ದೇಶದ ಯಾವುದೇ ವಿಚಾರದ ಬಗ್ಗೆ ಯಾವುದೇ ಸಮಯದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧ. ವಿಧಾನಸೌಧದ ಮೆಟ್ಟಿಲು ಮೇಲೆಯೇ ಚರ್ಚೆ ಆಗಲಿ," ಎಂದು ಮಾಜಿ ಸಂಸದ ವಿ.ಎಸ್​. ಉಗ್ರಪ್ಪ ಸವಾಲು ಹಾಕಿದ್ದಾರೆ.

    ಕಾಂಗ್ರೆಸ್ ಮುಕ್ತ ಚರ್ಚೆಗೆ ಬರಲೆಂದು ಅಮಿತ್​​ ಶಾ ಸವಾಲು ಹಾಕಿದ್ದರು. ವಿ.ಎಸ್​.ಉಗ್ರಪ್ಪ ಶಾ ಸವಾಲನ್ನು ಸ್ವೀಕರಿಸಿದ್ದಾರೆ. " ಅಮಿತ್​ ಶಾ ಸವಾಲನ್ನು ನಾವು ಸ್ವೀಕರಿಸುತ್ತೇವೆ.  ಅಮಿತ್ ಶಾ, ಮೋದಿ ಅಥವಾ ಪ್ರಹ್ಲಾದ್ ಜೋಶಿ ಅವರೇ ಚರ್ಚೆ ಬರಲಿ, ನಾವು ಸಿದ್ದ. ನಿಮಗೆ ತಾಕತ್ತು ಇದ್ದರೆ ಚರ್ಚೆಗೆ ಬನ್ನಿ," ಎಂದರು.

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್; ಯತ್ನಾಳ್ ಲೇವಡಿ

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.​ "ಕೇಂದ್ರ ಗೃಹ ಸಚಿವ ಅಮಿತ್​ ಶಾ ಬೆಂಗಳೂರು ಮತ್ತು ಹುಬ್ಬಳ್ಳಿಗೆ  ಬಂದು ಹೋದರು. ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ  ಮಾತಾಡಲಿಲ್ಲ. ಜಿಎಸ್​ಟಿ ಹಣವನ್ನು ನೀಡುವ ವಿಚಾರ ಬಗ್ಗೆ, ಸಂಪುಟ ರಚನೆ ವಿಚಾರ ಬಗ್ಗೆಯೂ ಮಾತನಾಡಲಿಲ್ಲ," ಎಂದು ಕಿಡಿಕಾರಿದರು.

    ರಾಹುಲ್​ ಗಾಂಧಿ ಮೋದಿ ರೀತಿ ಸುಳ್ಳು ಹೇಳಲ್ಲ

    ರಾಹುಲ್ ಗಾಂಧಿ  ಪ್ರಧಾನಿ ಮೋದಿಗೆ ಸಾಟಿಯಲ್ಲ ಎನ್ನುವ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿಕೆಗೆ ಉಗ್ರಪ್ಪ ತಿರುಗೇಟು ನೀಡಿದರು. "ಹೌದು ರಾಮಚಂದ್ರ ಗುಹಾ ಹೇಳಿದ್ದು ಸತ್ಯ. ಮೋದಿ ಹಾಗೆ ರಾಹುಲ್ ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆ ಧರಿಸಲ್ಲ. ಮೋದಿ ಹಾಗೆ ರಾಹುಲ್ ಗಾಂಧಿ ಸುಳ್ಳು ಹೇಳಲ್ಲ. ರಾಹುಲ್ ಗಾಂಧಿ ಒಬ್ಬ ವ್ಯಕ್ತಿಯಲ್ಲ, ಅವರು ಕಾಂಗ್ರೆಸ್ ಶಕ್ತಿ. ರಾಮಚಂದ್ರ ಗುಹಾ ಅವರೇ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ," ಎಂದು ತಿರುಗೇಟು ಕೊಟ್ಟರು.

    ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಕೆ.ಎಸ್. ಈಶ್ವರಪ್ಪ

    ಯಾರು ಏನೇ ಹೇಳಿದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರದ ಜನ ಏನೇ ಮಾತಾಡಿದ್ದರೂ ಅದು ಮುಗಿದು ಹೋದ ಅಧ್ಯಾಯ. ಈ ಬಗ್ಗೆ ಮಾತಾಡುವುದನ್ನು ಮಹಾರಾಷ್ಟ್ರ ಮುಖಂಡರು ನಿಲ್ಲಿಸಲಿ ಎಂದು ವಿ. ಎಸ್. ಉಗ್ರಪ್ಪ ಒತ್ತಾಯಿಸಿದರು.

     
    First published: