ಬೆಂಗಳೂರು (ಜೂ 8): ಚಡ್ಡಿ ಸುಡೋ ಅಭಿಯಾನ ನಡೆಸೋದಾಗಿ ಹೇಳಿ ಸಿದ್ದರಾಮಯ್ಯ (Siddaramaiah) ಪೇಚಿಗೆ ಸಿಲುಕಿದ್ದಾರೆ. ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಆರ್ಎಸ್ಎಸ್ ನಾಯಕರು, ಕಾರ್ಯಕರ್ತರು (Activist) ಹಾಗೂ ಬಿಜೆಪಿಯವರು (BJP) ಚಡ್ಡಿಗಳನ್ನು ಸಂಗ್ರಹಿಸಿ ಸಿದ್ದರಾಮಯ್ಯಗೆ ಮನೆಗೆ ತಲುಪಿಸೋದಾಗಿ ಹೇಳಿದ್ದಾರೆ. ನಿನ್ನೆ ಸಿದ್ದರಾಮಯ್ಯ ಮನೆಗೆ ಮೆರವಣಿಗೆ ಮೂಲಕ ತೆರಳಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಚಡ್ಡಿಗಳನ್ನು ಸಿದ್ದರಾಮಯ್ಯ ಮನೆಗೆ ತಲುಪಿಸಿದ್ದಕ್ಕೆ ಕಾಂಗ್ರೆಸ್ ನಾಯಕರು (BJP Leaders) ಸಿಟ್ಟಿಗೆದ್ದಿದ್ದಾರೆ. ಸುದ್ದಿಗೋಷ್ಠಿಯಲ್ಲಿ (PressMeet) ಮಾತಾಡಿದ ವಿ.ಎಸ್ ಉಗ್ರಪ್ಪ, ಸಿದ್ದರಾಮಯ್ಯ ಮನೆಗೆ ಕಳುಹಿಸಿದ ಚಡ್ಡಿಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕಳುಹಿಸೋದಾಗಿ ಹೇಳಿದ್ರು.
ನಾರಾಯಣ ಸ್ವಾಮಿ ಅವರ ಮೇಲೆ ಚಡ್ಡಿ ಹೊರಿಸಿದ್ದಾರೆ
ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಚಡ್ಡಿ ರವಾನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವ್ರು, ಬಚ್ಚಲಮನೆಯಲ್ಲಿ ಇದ್ದ ಚಡ್ಡಿಯನ್ನು ತಲೆ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ಅವರ ತಲೆಯ ಮೇಲೆ ಚಡ್ಡಿ ಹೊರಿಸಿದ್ದಾರೆ. ಆರ್ಎಸ್ಎಸ್ನಲ್ಲಿ ಶ್ರೇಣಿಕೃತ ವ್ಯವಸ್ಥೆಯಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಚಡ್ಡಿ ಹೊರಲಿಲ್ಲ ಆದರೆ ನಾರಾಯಣ ಸ್ವಾಮಿ ಅವರ ಮೇಲೆ ಚಡ್ಡಿ ಹೊರಿಸಿದ್ದಾರೆ
ನಾವು ಪ್ರಧಾನಿ ಮೋದಿ ಅವರಿಗೆ ಕಳುಹಿಸುತ್ತೇವೆ
ಅವರು ಕಾಂಗ್ರೆಸ್ ನಾಯಕರಿಗೆ ಕಳುಹಿಸಿರುವಂತಹ ಚಡ್ಡಿಗಳನ್ನು ನಾವು ಪ್ರಧಾನಿ ಮೋದಿ ಅವರಿಗೆ ಕಳುಹಿಸುತ್ತೇವೆ. ನಿಮ್ಮ ವಿಚಾರಧಾರೆ ಸರಿಯಿಲ್ಲ ಎಂಬುದನ್ನು ನಾವು ಪ್ರಧಾನಿಗಳಿಗೆ ಕಳುಹಿಸುತ್ತೇವೆ ಎಂದ್ರು. ಪಠ್ಯಕ್ರಮ ಸರಿಯಿಲ್ಲ ಎಂದು ನಾವು ಹೇಳಿದ್ದೇವು, ಅದಕ್ಕೆ ವಿಕೃತವಾಗಿ ಚಡ್ಡಿಗಳನ್ನು ಕಳುಹಿಸಿದ್ದಾರೆ. ಇದು ಬಿಜೆಪಿಯ ವಿಕೃತ ಮನೋಭಾವನೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದಾರೆ ಎಂದು ಉಗ್ರಪ್ಪ ಹೇಳಿದ್ದಾರೆ.
ಇದನ್ನೂ ಓದಿ: Threat: ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ
ನಿಮ್ಮ ಪಕ್ಷದ ನಾಯಕರ ವಿಕೃತಿ ಹೇಗಿದೆ
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅಪಮಾನ ಮಾಡಿದ್ದೀರಿ, ಸಾಂಕೇತಿಕವಾಗಿ ವಿಕೃತವಾದ ನಿಮ್ಮ ಮನಸ್ಥಿತಿಯನ್ನು ಧ್ವಂಸ ಮಾಡಲು ಚಡ್ಡಿ ಸುಟ್ಟಿದ್ದಾರೆ. ನಿಮ್ಮ ವಿಕೃತ ಭಾವನೆಗಳ ಚಡ್ಡಿಗಳನ್ನು ಪ್ರಧಾನಿ ಮೋದಿಗೆ ಕಳಿಸುತ್ತೇವೆ. ನಿಮ್ಮ ಪಕ್ಷದ ನಾಯಕರ ವಿಕೃತಿ ಹೇಗಿದೆ ಎಂಬುದನ್ನು ತಿಳಿಸಲು ಚಡ್ಡಿಗಳನ್ನು ಮೋದಿಗೆ ಕಳಿಸಿಕೊಡುತ್ತೇವೆ. ಹರಕಲು ಚಡ್ಡಿ ಕಳಿಸುತ್ತಾರೆ ಎಂದರೆ ಇವರ ವಿಕೃತ ಮನಸ್ಥಿತಿ ಎಷ್ಟು ಅಂತ ಗೊತ್ತಾಗುತ್ತದೆ ಎಂದು ವಿ.ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಸುದ್ದಿಗೋಷ್ಠಿ
ರಾಜ್ಯಸಭಾ ಚುನಾವಣೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಮಾಜಿ ಸಂಸದ, ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ, ಪ್ರಕಾಶ್ ರಾಠೋಡ್ ಭಾಗಿ ಉಪಸ್ಥಿತರಿದ್ರು. ಇದೇ ವೇಳೆ ಮಾತು ಆರಂಭಿಸಿದ ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ, ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷದ ಸದಸ್ಯರ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಕೇಳಿದ್ದಾರೆ. 32 ವೋಟ್ ಮೊದಲ ಮತ ನಮಗೆ ನೀಡಿ ಕಾಂಗ್ರೆಸ್ ಜೆಡಿಎಸ್ ಒಟ್ಟಿಗೆ ಜಾತ್ಯತೀತೆಯ ಬಗ್ಗೆ ಸಂದೇಶ ಕೊಡೋಣ , 2ನೇ ಪ್ರಾಶಸ್ತ್ಯದ ಮತದ ಬಗ್ಗೆ ನಮಗೆ ಅರಿವಿದೆ.
ಇದನ್ನೂ ಓದಿ: Agriculture: ಜೋಯಿಡಾದ ಸರಕಾರಿ ಶಾಲೆಯಲ್ಲಿ ಕೃಷಿ ಪಾಠ; ಗಿಡ ನೆಡ್ತಾರೆ, ಬೆಳೆಯನ್ನೂ ತೆಗೀತಾರೆ ಈ ಮಕ್ಕಳು!
ಹೊಸ ಚಡ್ಡಿ ಕೊಟ್ಟಿದ್ರೆ ಹಾಕಿಕೊಳ್ಳಬಹುದಿತ್ತು
ಈ ಬ್ರಾಹ್ಮಣರು ಶೇಕಡಾ 95ರಷ್ಟು ಸಂಘಟನೆಯನ್ನು ಕಂಟ್ರೋಲ್ ಮಾಡುತ್ತಾರೆ. ರಚ್ಚು ಭೈಯಾ ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲ ಸಂಘಚಾಲಕರು ನಾಗಪುರದ ಚಿತ್ಪಾವನ ಬ್ರಾಹ್ಮಣರು ಎಂದು
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪಿ ಆರ್ ರಮೇಶ್ ಹೇಳಿಕೆ, ಅವರು ಕೊಟ್ಟಿರುವುದೆಲ್ಲಾ ಹಳೆ ಚಡ್ಡಿ, ಹೊಸ ಚಡ್ಡಿ ಕೊಟ್ಟಿದ್ರೆ ಹಾಕೊಬಹುದಿತ್ತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ