Ugrappa U Turn: ಡಿಕೆಶಿ ಕಮಿಷನ್​ ರಾಜಕಾರಣಿ ಅಲ್ಲ; ಸಡನ್​ ಯೂಟರ್ನ್​ ಹೊಡೆದ ಉಗ್ರಪ್ಪ

D K Shivakumar : ಬೆಳಗ್ಗೆ ಇದೇ ವಿಚಾರವಾಗಿ ಸಲೀಂ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದಾದ ಬಳಿಕ ಉಗ್ರಪ್ಪ ಮತ್ತೆ ಸುದ್ದಿಗೋಷ್ಠಿ ಕರೆದರು. ನಿನ್ನೆ ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಕಾಂಗ್ರೆಸ್​​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಂದಾಗಿದ್ದೆವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನಗೆ ಡಿ.ಕೆ.ಶಿವಕುಮಾರ್​ ಅವರ ಬಗ್ಗೆ ಗೊತ್ತಿದೆ. ನಿನ್ನೆ ಸುದ್ದಿಗೋಷ್ಠಿ ವೇಳೆ ಸಲೀಂ ಅವರು ಡಿಕೆಶಿ ಬಗ್ಗೆ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಡೆದ ಮನೆಯಂತಿರುವ ಕಾಂಗ್ರೆಸ್​(Congress)ನಲ್ಲಿ ಮೊದಲಿನಿಂದಲೂ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಗ್ಗೆಇವರು , ಇವರ ಬಗ್ಗೆ ಅವರು ದಿನಕ್ಕೊಂದು ಹೇಳಿಕೆ ಕೊಡುತ್ತಾ ಮತ್ತೆ ಮರುದಿನ ತ್ಯಾಪೆ ಹಚ್ಚುವ ಕೆಲಸಗಳನ್ನ ಕಾಂಗ್ರೆಸ್​ ನಾಯಕರು ಮಾಡುತ್ತಿದ್ದಾರೆ. ನಿನ್ನೆ ಉಗ್ರಪ್ಪ(Ugrappa) ಹಾಗೂ ಸಲೀಂ ನಡುವೆ ನಡೆದ ಸಂಭಾಷಣೆ ಕಾಂಗ್ರೆಸ್​ ಪಾಳಯದಲ್ಲಿ ಮುಜುಗರ ಉಂಟು ಮಾಡಿತ್ತು. ಆದರೆ ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ಉಗ್ರಪ, ಸಡನ್​ ಆಗಿ ಯೂ ಟರ್ನ್ ಹೊಡೆದಿದ್ದಾರೆ. ಡಿ.ಕೆ.ಶಿವಕುಮಾರ್(D.K.Shivakumar) ಯಾವುದೇ ಭ್ರಷ್ಟಚಾರ ಮಾಡಿಲ್ಲ. ನಿನ್ನೆ ಸಲೀಂ ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ಕಿವಿಯಲ್ಲಿ ಹೇಳಿದ್ದನ್ನ ಕೇಳಿ ಸುಮ್ಮನಾಗಿದ್ದೆ. ಬೇರೆಯವರು ಹೀಗೆ ಡಿಕೆಶಿ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಸಲೀಂ ಅವರು ನನ್ನ ಬಳಿ ಬಂದು ಕಿವಿಯಲ್ಲಿ ಹೇಳಿದರು. ಇದ್ದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಉಗ್ರಪ್ಪ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

  ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಆಗಿದ್ದೇನು?
  ನಿನ್ನೆ ಕಾಂಗ್ರೆಸ್​ ಕಚೇರಿಯಲ್ಲಿ ಹಿರಿಯ ನಾಯಕ ಉಗ್ರಪ್ಪ ಪತ್ರಿಕಾಗೋಷ್ಠಿ ನಡೆಸಿದರು. ಇದೇ ವೇಳೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಉಗ್ರಪ್ಪ ಪಕ್ಕ ಕುಳಿತಿದ್ದ ಕಾಂಗ್ರಸ್ ಮಾಧ್ಯಮ ಸಂಯೋಜಕ ಸಲೀಂ ಅಹಮ್ಮದ್​ ಉಗ್ರಪ್ಪ ಅವರ ಕಿವಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಇದೇ ವೇಳೆ "ಈ ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ್​ ಬೆಂಬಲಿಗರು ನೂರಾರು ಕೋಟಿ ಹಣ ಲೂಟಿ ಮಾಡಿದ್ದು, ಸ್ವತಃ ಡಿಕೆಶಿ ಅವರಿಗೆ 8 ರಿಂದ 12 ಪರ್ಸೆಂಟ್ ಕಮಿಷನ್ ಹೋಗುತ್ತದೆ" ಎಂದಿದ್ದರು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಆಫ್ ಆಗಿರದ ಕಾರಣ ಈ ಖಾಸಗಿ ಸಂಭಾಷಣೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

  ಇಂದಿನ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹೇಳಿದ್ದೇನು?

  ಇದನ್ನೂ ಓದಿ: ಕಾಂಗ್ರೆಸ್ ಆಡಿಯೋ ಹಂಗಾಮ; ಕಮಿಷನ್ ರಾಜಕಾರಣ ಮಾಡ್ತಾರಾ ಡಿಕೆಶಿ? ಕೈ-ಕಮಲ ಟ್ವಿಟರ್​ ವಾರ್!

  ಬೆಳಗ್ಗೆ ಇದೇ ವಿಚಾರವಾಗಿ ಸಲೀಂ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದಾದ ಬಳಿಕ ಉಗ್ರಪ್ಪ ಮತ್ತೆ ಸುದ್ದಿಗೋಷ್ಠಿ ಕರೆದರು. ನಿನ್ನೆ ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಕಾಂಗ್ರೆಸ್​​ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಂದಾಗಿದ್ದೆವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನಗೆ ಡಿ.ಕೆ.ಶಿವಕುಮಾರ್​ ಅವರ ಬಗ್ಗೆ ಗೊತ್ತಿದೆ. ನಿನ್ನೆ ಸುದ್ದಿಗೋಷ್ಠಿ ವೇಳೆ ಸಲೀಂ ಅವರು ಡಿಕೆಶಿ ಬಗ್ಗೆ ಹೇಳಿದ್ದಾರೆ. ಅದು ಸಲೀಂ ಅವರ ಅಭಿಪ್ರಾಯವಾಗಿರಲಿಲ್ಲ. ಜನ ಹೇಗೆ ಮಾತಾನಾಡುತ್ತಿದ್ದಾರೆ ಅಂತ ಸಲೀಂ ಅವರು ಹೇಳಲು ಬಂದರು. ಅದನ್ನ ತಪ್ಪಾಗಿ ತೋರಿಸಲಾಗಿದೆ ಎಂದು ಅವರು ಹೇಳಿದರು.

  ಶಿಷ್ಯ ಎಂದು ಹೇಳುವುದು ತಪ್ಪು?
  ಡಿಕೆಶಿ ಎಂದೂ ಕಮಿಷನ್​ ರಾಜಕಾರಣ ಮಾಡಿಲ್ಲ, 18 ಸಾವಿರ ಕೋಟಿ ಪ್ರಕರಣದಲ್ಲಿ ಸಿಲುಕಿರುವವರು ನನ್ನ ಜಿಲ್ಲೆಯವರು ಎಂದು ಸಲೀಂ ಹೇಳಿದರು. ಡಿಕೆಶಿ ಅಂತ್ಯ ಕ್ರಿಯಾಶೀಲ, ಜನಪರವಾರ ರಾಜಕಾರಣಿ. ರೈತ ಕುಟುಂಬದಿಂದ ಹುಟ್ಟಿ, ರಾಜ್ಯ ರಾಜಕಾರಣದಲ್ಲಿ ತುಂಬಾ ಹೆಸರು ಮಾಡಿದವರು. ಅವರ ಬಗ್ಗೆ ಎಂದು ಮಾತಡಲ್ಲ ಎಂದು ಉಗ್ರಪ್ಪ ಹೇಳಿದ್ದಾರೆ. ಇನ್ನೂ ಬಿಜೆಪಿ ಟ್ವೀಟ್​ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಗ್ರಪ್ಪ, ಡಿಕೆಶಿ ಅವರನ್ನ ಕೊತ್ವಾಲ್​ ಶಿಷ್ಯ ಅನ್ನುವುದು ತಪ್ಪು.

  ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ದಲಿತ ನಾಯಕರ ಹೆಸರನ್ನು ಸಿಎಂ ಎಂದು ಘೋಷಿಸಲಿ: ಸಚಿವ ಬಿ.ಶ್ರೀರಾಮುಲು ಸವಾಲು!

  ಡಿಕೆಶಿ ಉತ್ತಮ ವ್ಯಕ್ತಿತ್ವ ಇರುವ ವ್ಯಕ್ತಿ. ಕೆಲವರಿಗೆ ಕೆಲವರ ಸಂಪರ್ಕ ಇರಬಹುದು. ನನ್ನನ್ನೂ ಕೂಡ ಸಿದ್ದರಾಮಯ್ಯ ಶಿಷ್ಯ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯಗಿಂತ ಮೊದಲೇ ನಾನು ರಾಜಕೀಯಕ್ಕೆ ಬಂದಿದ್ದೆ, ನಾನು ಸಿದ್ದರಾಮಯ್ಯ ಇಬ್ಬರೂ ಸ್ನೇಹಿತರು ಎಂದು ಅವರು ಹೇಳಿದರು.

  ವರದಿ: ವಾಸುದೇವ್. ಎಂ 
  Published by:Sandhya M
  First published: