ಶ್ರೀರಾಮುಲು ಅಣ್ಣ ಸುಳ್ಳು ಆರೋಪ ಮಾಡಬಾರದು, ಈ ಬಗ್ಗೆ ನಾನು ಸುಮ್ಮನಿರಲ್ಲ ದೂರು ನೀಡುತ್ತೇವೆ; ಡಿಕೆ ಶಿವಕುಮಾರ್​​

ಶ್ರೀರಾಮಲು ಸುಳ್ಳು ಆರೋಪವನ್ನು ಮಾಡುವ ಮೂಲಕ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ಕುಂದಗೋಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುವುದಾಗಿ ಕೈ ನಾಯಕರು ತಿಳಿಸಿದ್ದಾರೆ.

Seema.R | news18
Updated:May 9, 2019, 2:23 PM IST
ಶ್ರೀರಾಮುಲು ಅಣ್ಣ ಸುಳ್ಳು ಆರೋಪ ಮಾಡಬಾರದು, ಈ ಬಗ್ಗೆ ನಾನು ಸುಮ್ಮನಿರಲ್ಲ ದೂರು ನೀಡುತ್ತೇವೆ; ಡಿಕೆ ಶಿವಕುಮಾರ್​​
ಶ್ರೀರಾಮುಲು
  • News18
  • Last Updated: May 9, 2019, 2:23 PM IST
  • Share this:
ಹುಬ್ಬಳ್ಳಿ (ಮೇ.9): ಶಾಸಕ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಿರುಕುಳವೇ ಕಾರಣ ಎಂದು ಬುಧವಾರ ಕುಂದಗೋಳ ವಿಧಾಸಭಾ ಉಪಚುನಾವಣೆ ಪ್ರಚಾರದ ವೇಳೆ ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ದೂರು ದಾಖಲಿಸಲು ಮುಂದಾಗಿರುವುದಾಗಿ ಸಚಿವ ಡಿಕೆ ಶಿವಕುಮಾರ್​ ಸ್ಪಷ್ಟಪಡಿಸಿದರು.

ಶಿವಳ್ಳಿ‌ ಸಾವಿಗೆ ಸರ್ಕಾರ ಕಾರಣ ಎಂಬ ಆರೋಪ ಸುಳ್ಳು. ಶಿವಳ್ಳಿಗೆ ನಾವು ಕಿರುಕುಳ ಕೊಟ್ಟಿದ್ದೇವೆ ಎಂಬ ಆರೋಪದ ಕುರಿತು ಕಾರ್ಯಕರ್ತರು ಘಟನೆಯ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಹಿಂದೆ ಕುಮಾರಸ್ವಾಮಿ ಮೇಲೂ ಆರೋಪ ಮಾಡಿದ್ದರು. ಕುಮಾರಸ್ವಾಮಿ ಸುಮ್ಮನಿರಬಹುದು ನಾನು ಸುಮ್ಮನಿರಲ್ಲ ಎಂದು ಡಿಕೆ ಶಿವಕುಮಾರ್​ ಎಚ್ಚರಿಕೆ ನೀಡಿದ್ದಾರೆ.

ಶ್ರೀರಾಮುಲು ಅಣ್ಣನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಆಧಾರ ರಹಿತ ಆರೋಪ ಮಾಡಬಾರದು. ನನ್ನ ಬಗ್ಗೆ ನೂರು ಮಾತಾಡಲಿ ಅದು ಬೇರೆ ವಿಚಾರ. ಸಾವಿಗೆ ಸರ್ಕಾರ, ಪಕ್ಷ ಕಾರಣ ಎನ್ನುವುದನ್ನು ಅರಗಿಸಿಕೊಳ್ಳಲ್ಲ. ಸಚಿವರಾಗಿದ್ದವರು ಈ ರೀತಿ ಬೇಜಾವಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದರು.

ಶ್ರೀರಾಮುಲು ಆರೋಪದಿಂದ ನಮ್ಮೆಲ್ಲರ ಮೇಲೆ ಅನುಮಾನ ಮೂಡುತ್ತಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗೆ ಉಗ್ರಪ್ಪ ದೂರು ನೀಡಲಿದ್ದಾರೆ. ಶ್ರೀರಾಮುಲು ಹೋದಲ್ಲೆಲ್ಲ ಜನ ಅಡ್ಡಗಟ್ಟಿ ಪ್ರಶ್ನಿಸುತ್ತಿದ್ದಾರೆ. ಅವರ ಹೇಳಿಕೆ ಈ ಕ್ಷೇತ್ರದ ಮತದಾರರ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು.

ನಿನ್ನೆ ಕುಂದಗೋಳದ ಬೆಟದೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಶ್ರೀರಾಮುಲು, ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ. ಅವರು ನೀಡಿದ ಕಿರುಕುಳದಿಂದಲೇ ಸಚಿವ ಶಿವಳ್ಳಿ ಅವರು ಮೃತ ಪಟ್ಟರು. ಶಿವಳ್ಳಿ ಅವರ ಸಾವಿನ ಸೇಡನ್ನು ತೀರಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.

ಮೈತ್ರಿ ಸರ್ಕಾರದ ವಿರುದ್ದ ಈ ರೀತಿ ಆರೋಪ ಮಾಡಿರುವುದನ್ನು ಕಾಂಗ್ರೆಸ್​ ನಾಯಕರು  ಗಂಭೀರವಾಗಿ ಪರಿಗಣಿಸಿದ್ದು, ರಾಮುಲು ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಶ್ರೀರಾಮಲು ಸುಳ್ಳು ಆರೋಪವನ್ನು ಮಾಡುವ ಮೂಲಕ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ಕುಂದಗೋಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುವುದಾಗಿ ಕೈ ನಾಯಕರು ತಿಳಿಸಿದ್ದಾರೆ.

ಇದನ್ನು ಓದಿ: ಮುನಿಸು ಮರೆತ ನಾಯಕರು; ಕುಂದಗೋಳ ಗೆಲುವಿಗೆ ಡಿಕೆ ಶಿವಕುಮಾರ್​​-ಸತೀಶ್​ ಜಾರಕಿಹೊಳಿ ರಣತಂತ್ರಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಸಿಎಸ್​ ಶಿವಳ್ಳಿ ಕಳೆದ ಮಾರ್ಚ್​  22ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೂರು ಬಾರಿ ಶಾಸಕರಾಗಿದ್ದ ಅವರು  ಸಂಪುಟ ವಿಸ್ತರಣೆ ಸಮಯದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಸಿದ್ದರಾಮಯ್ಯ ಆಪ್ತರು ಆಗಿದ್ದ ಶಿವಳ್ಳಿ  ಬಿಪಿ ಶುಗರ್​ನಿಂದ ಬಳಲುತ್ತಿದ್ದು, ಮನೆಯಲ್ಲಿ ಕಡತಗಳ ಪರಿಶೀಲನೆ ಮಾಡುವಾಗ ಹೃದಾಯಾಘಾತಕ್ಕೆ ಒಳಗಾಗಿ ಅಕಾಲಿಕ ಸಾವನ್ನಪ್ಪಿದ್ದರು.

 

 

First published:May 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ