ಕಾಂಗ್ರೆಸ್​ ನಾಯಕರ ಮೇಲಿನ ಐಟಿ ದಾಳಿಯಿಂದ ಬಿಜೆಪಿ ಶಕ್ತವಾಗಲಿದೆ ಎಂಬುದು ಹಗಲು ಕನಸಷ್ಟೇ; ಎಸ್​.ಆರ್.​ ಪಾಟೀಲ್

ಕಾಂಗ್ರೆಸ್​ ಪಕ್ಷದ ನಾಯಕರು ಸಾರ್ವಜನಿಕ ಬದುಕಿನಿಂದ ನಿರ್ಗಮಿಸಬೇಕು ಎಂಬ ದುರುದ್ದೇಶದಿಂದ ಈ ದಾಳಿಗಳನ್ನು ಸಂಘಟಿಸಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್​ ಮೇಲೆ ಇಂತಹ ಐಟಿ ದಾಳಿ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಶಕ್ತವಾಗಿ ಬೆಳೆಯಲಿದೆ ಎಂಬ ಭ್ರಮೆ ಬಿಜೆಪಿ ನಾಯಕರಲ್ಲಿದೆ. ಆದರೆ, ಇದು ಕೇವಲ ಕನಸಷ್ಟೇ ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್​.ಆರ್.​ ಪಾಟೀಲ್ ತಿಳಿಸಿದ್ದಾರೆ.

MAshok Kumar | news18-kannada
Updated:October 13, 2019, 11:28 AM IST
ಕಾಂಗ್ರೆಸ್​ ನಾಯಕರ ಮೇಲಿನ ಐಟಿ ದಾಳಿಯಿಂದ ಬಿಜೆಪಿ ಶಕ್ತವಾಗಲಿದೆ ಎಂಬುದು ಹಗಲು ಕನಸಷ್ಟೇ; ಎಸ್​.ಆರ್.​ ಪಾಟೀಲ್
ಎಸ್​. ಆರ್​. ಪಾಟೀಲ್
  • Share this:
ಬಾಗಲಕೋಟೆ (ಅಕ್ಟೋಬರ್​ 13); ಕಾಂಗ್ರೆಸ್​ ನಾಯಕರು ಇಂತಹ ಐಟಿ ರೇಡ್​ಗಳಿಗೆ ಜಗ್ಗುವಂತವರಲ್ಲ. ಐಟಿ ರೇಡ್​ಗಳ ಮೂಲಕ ಕಾಂಗ್ರೆಸ್​ ನವರ ಆತ್ಮಸ್ಥೈರ್ಯ ಕುಗ್ಗಿಸಿ ಬಿಜೆಪಿ ಸಶಕ್ತವಾಗಿ ಬೆಳೆಯಲಿದೆ ಎಂಬುದು ಹಗಲು ಕನಸಷ್ಟೇ ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್​.ಆರ್.​ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ವಿರುದ್ಧದ ಐಟಿ ದಾಳಿ ಕುರಿತು ಬಾಗಲಕೋಟೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಎಸ್​.ಆರ್​. ಪಾಟೀಲ್, “ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಟಾರ್ಗೆಟ್​ ಮಾಡಿ ಐಟಿ, ಇಡಿ ಮತ್ತು ಸಿಬಿಐ ದಾಳಿ ಮಾಡಿಸಲಾಗುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ.

ಕಾಂಗ್ರೆಸ್​ ಪಕ್ಷದ ನಾಯಕರು ಸಾರ್ವಜನಿಕ ಬದುಕಿನಿಂದ ನಿರ್ಗಮಿಸಬೇಕು ಎಂಬ ದುರುದ್ದೇಶದಿಂದ ಈ ದಾಳಿಗಳನ್ನು ಸಂಘಟಿಸಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್​ ಮೇಲೆ ಇಂತಹ ಐಟಿ ದಾಳಿ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಶಕ್ತವಾಗಿ ಬೆಳೆಯಲಿದೆ ಎಂಬ ಭ್ರಮೆ ಬಿಜೆಪಿ ನಾಯಕರಲ್ಲಿದೆ. ಆದರೆ, ಇದು ಕೇವಲ ಕನಸಷ್ಟೇ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೂರೇ ದಿನಕ್ಕೆ ಅಧಿವೇಶನವನ್ನು ಮೊಟಕುಗೊಳಿಸಿದ ಸರ್ಕಾರದ ನಿಲುವನ್ನು ಟೀಕಿಸಿದ ಅವರು, “ಇದು ಕಣ್ಣು ಕಿವಿ ಇಲ್ಲದ ಚರ್ಮಗೇಡಿ ಸರ್ಕಾರ. ಈ ಸರ್ಕಾರ ನೆರೆ ಪರಿಹಾರವನ್ನು ಸಮರ್ಥವಾಗಿ ಎದುರಿಸಿಲ್ಲ. ವಿಪಕ್ಷಗಳು ನೆರೆ ಸಂತ್ರಸ್ತರ ಪರವಾಗಿ ನಿಂತಿವೆ. ಇದೇ ಕಾರಣಕ್ಕೆ ವಿಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲದೆ ಈ ಸರ್ಕಾರ ಅಧಿವೇಶನವನ್ನು ಕೇವಲ ಮೂರೇ ದಿನಕ್ಕೆ ಮುಗಿಸಿದೆ. ಇನ್ನೂ, ಮಾಧ್ಯಮದವರ ಕಣ್ಣಿಗೆ ಪಟ್ಟಿ ಕಟ್ಟಿ ದೂರವಿಟ್ಟು ಕಲಾಪ ನಡೆಸುವುದು ಸರಿಯಲ್ಲ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ರಮೇಶ್​ ಆತ್ಮಹತ್ಯೆ ಪ್ರಕರಣ; ಇಬ್ಬರು ಎಸಿಪಿಗಳ ಹೆಗಲಿಗೆ ತನಿಖೆಯ ಹೊಣೆ

First published: October 13, 2019, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading