ಲಿಂಗಾಯತ ಸಮುದಾಯದ ಮೀಸಲಾತಿಯನ್ನು ಶೇ.16ರಷ್ಟು ಹೆಚ್ಚಿಸಬೇಕು; ಎಸ್.ಆರ್. ಪಾಟೀಲ್ ಒತ್ತಾಯ

ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಪಿಸಿಸಿ ಅದ್ಯಕ್ಷ ಸ್ಥಾನ ಪ್ರಮುಖ ಹುದ್ದೆ. ಹೀಗಾಗಿ ಹೈ ಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ಯಾರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ಸಹ ನಾವು ಅದನ್ನು ಶಿರಸಾವಹಿಸಿ ಪಾಲಿಸುತ್ತೇವೆ. ಪಕ್ಷದ ಏಳಿಗೆಗೆ ಶ್ರಮಿಸುತ್ತೇವೆ ಎಂದು ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್​.ಆರ್​. ಪಾಟೀಲ್ ತಿಳಿಸಿದ್ದಾರೆ.

news18-kannada
Updated:January 11, 2020, 4:04 PM IST
ಲಿಂಗಾಯತ ಸಮುದಾಯದ ಮೀಸಲಾತಿಯನ್ನು ಶೇ.16ರಷ್ಟು ಹೆಚ್ಚಿಸಬೇಕು; ಎಸ್.ಆರ್. ಪಾಟೀಲ್ ಒತ್ತಾಯ
ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್​.ಆರ್​. ಪಾಟೀಲ್.
  • Share this:
ಬಾಗಲಕೋಟೆ (ಜನವರಿ 11); ಲಿಂಗಾಯತ ಸಮುದಾಯದಲ್ಲೂ ಒಪ್ಪೊತ್ತಿನ ಊಟಕ್ಕೂ ಇಲ್ಲದ ಕಡುಬಡವರಿದ್ದಾರೆ. ಹೀಗಾಗಿ ಲಿಂಗಾಯತ ಸಮಾಜಕ್ಕೆ ಮೀಸಲಾತಿಯನ್ನು ಶೆ.16 ರಷ್ಟು ಹೆಚ್ಚಿಸುವುದು ಸೂಕ್ತ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿರುವ ಅವರು, “ಸಮಾಜದಲ್ಲಿ ಲಿಂಗಾಯತ ಸಮುದಾಯದವರೂ ಸಹ ಸಾಕಷ್ಟು ಹಿಂದುಳಿದಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಇಲ್ಲದ ಜನ ಈ ಸಮುದಾಯದಲ್ಲೂ ಇದ್ದಾರೆ. ಹೀಗಾಗಿ ಏಕೆ ಇವರಿಗೆ ಮೀಸಲಾತಿ ಹೆಚ್ಚಿಸಬಾರದು? ಈ ಕುರಿತ ಒತ್ತಾಯಕ್ಕೆ ನಾನು ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇನೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಚರ್ಚೆ ನಡೆಸಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ವಿಚಾರದ ಕುರಿತು ಮಾತನಾಡಿದ ಅವರು, “ಕಾಂಗ್ರೆಸ್​ನಲ್ಲಿ ಗುಂಪು ರಾಜಕಾರಣ ಇಲ್ಲ. ಎಲ್ಲಾ ನಾಯಕರೂ ಒಗ್ಗಟ್ಟಾಗಿದ್ದೇವೆ. ಭಿನ್ನಾಭಿಪ್ರಾಯಕ್ಕೆ ಇಲ್ಲಿ ಜಾಗವಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ತಮ್ಮ ಪ್ರತಿನಿಧಿಯನ್ನು ಕಳಿಸಿದ್ರು. ಅಂದಾಜು 60ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಈ ಅಭಿಪ್ರಾಯಕ್ಕನುಗುಣವಾಗಿ ನಿರ್ಣಯ ಪ್ರಕಟಿಸುವುದು ಬಾಕಿ ಇದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಪಿಸಿಸಿ ಅದ್ಯಕ್ಷ ಸ್ಥಾನ ಪ್ರಮುಖ ಹುದ್ದೆ. ಹೀಗಾಗಿ ಹೈ ಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ಯಾರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೂ ಸಹ ನಾವು ಅದನ್ನು ಶಿರಸಾವಹಿಸಿ ಪಾಲಿಸುತ್ತೇವೆ. ಪಕ್ಷದ ಏಳಿಗೆಗೆ ಶ್ರಮಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಂಗನವಾಡಿಯಲ್ಲಿ ನರ್ಸ್ ನೀಡಿದ ಇಂಜೆಕ್ಷನ್​ಗೆ ಮೂರು ತಿಂಗಳ ಮಗು ಸಾವು; ಬೆಳಗಾವಿಯಲ್ಲೊಂದು ದಾರುಣ ಘಟನೆ
Published by: MAshok Kumar
First published: January 11, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading