ಹೈಕಮಾಂಡ್​ ರಾಜಾಹುಲಿಯನ್ನು ಬೋನಿನಿಂದ ಹೊರಬಿಡುತ್ತಿಲ್ಲ; ಬಿಎಸ್​ವೈ ಬಗ್ಗೆ ಎಸ್.ಆರ್.ಪಾಟೀಲ್ ವ್ಯಂಗ್ಯ

2018-19ನೇ ಸಾಲಿನ 39 ಲಕ್ಷ ಹಣ ಇನ್ನು ಬಂದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ಸಾಕಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಹೇಳುವ ಮೂಲಕ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಪರೋಕ್ಷವಾಗಿ ಹೇಳಿದರು. 

news18-kannada
Updated:January 31, 2020, 12:52 PM IST
ಹೈಕಮಾಂಡ್​ ರಾಜಾಹುಲಿಯನ್ನು ಬೋನಿನಿಂದ ಹೊರಬಿಡುತ್ತಿಲ್ಲ; ಬಿಎಸ್​ವೈ ಬಗ್ಗೆ ಎಸ್.ಆರ್.ಪಾಟೀಲ್ ವ್ಯಂಗ್ಯ
ಎಸ್​. ಆರ್​. ಪಾಟೀಲ್
  • Share this:
ಬಾಗಲಕೋಟೆ(ಜ.31): "ಸಚಿವ ಸಂಪುಟ ಪುನಾರಚನೆ ವೇಳೆ ರಾಜಾಹುಲಿ ಸಿಎಂ ಬಿಎಸ್​ವೈ ಅವರನ್ನು ಹೈಕಮಾಂಡ್​ ಕಟ್ಟಿ ಹಾಕುತ್ತಿದೆ. ಹೈಕಮಾಂಡ್​ನವರು ರಾಜಾಹುಲಿಯನ್ನು ಬೋನಿನಿಂದ ಹೊರಬಿಡುತ್ತಿಲ್ಲ," ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಸಿಎಂ ಪರಿಸ್ಥಿತಿಯನ್ನು ಕಂಡು ವ್ಯಂಗ್ಯ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್​ವೈ ಬಗ್ಗೆ ಲೇವಡಿ ಮಾಡಿದರು. "ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಈಗ ಯಾಕೆ ಬಿಎಸ್​ವೈ ಹೆದರುತ್ತಿದ್ದಾರೋ ನನಗೆ ಗೊತ್ತಿಲ್ಲ. ಯಡಿಯೂರಪ್ಪಗೆ  'ರಾಜಾಹುಲಿ' ಎಂದು ಕರೆಯುತ್ತಾರೆ. ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನನಗೂ ಗೌರವವಿದೆ. ಎಸ್​.ನಿಜಲಿಂಗಪ್ಪನವರ ರೀತಿ ನಾಲ್ಕು ಬಾರಿ ಸಿಎಂ ಆಗಿದ್ದಾರೆ," ಎಂದರು.

"ಬಿಎಸ್​ವೈ ಕೆಲಸ ಮಾಡೋದಕ್ಕೆ ಹೈಕಮಾಂಡ್ ಅವಕಾಶ ಕಲ್ಪಿಸುತ್ತಿಲ್ಲ.  ಹಾಗಂತ ನಾನು ಅವರ ಬಗ್ಗೆ ಮರುಕಪಡುವುದಿಲ್ಲ. ರಾಜ್ಯದ ಜನತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯವರು ಬೇಗನೇ ಮಂತ್ರಿಮಂಡಲ ರಚನೆ ಮಾಡಬೇಕು," ಎಂದು ಎಸ್​.ಆರ್​ಪಾಟೀಲ್​ ಆಗ್ರಹಿಸಿದರು.

ಐಬಿಎಂಗೆ ಮುಂದಿನ ಸಿಇಒ ಅರವಿಂದ್ ಕೃಷ್ಣ; ಅಮೆರಿಕನ್ ಸಂಸ್ಥೆಗಳ ಮೇಲೆ ಮುಂದುವರಿದ ಭಾರತೀಯರ ಪಾರಮ್ಯ

'ರಾಜ್ಯದ ಖಜಾನೆ ಖಾಲಿಯಾಗಿದೆ' ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂಬ ಬಿಎಸ್​ವೈ ಮಾತಿಗೆ ಪಾಟೀಲ್​ ಪ್ರತಿಕ್ರಿಯಿಸಿದರು. 'ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ ಎಂದು ನನಗೂ ಅನಿಸಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ಹೇಳಿಕೆಗೆ ಬೆಂಬಲಿಸಿದರು.

ಕೆಳಮನೆ, ಮೇಲ್ಮನೆ ಶಾಸಕರು 300 ಜನರಿದ್ದೇವೆ. ವರ್ಷಕ್ಕೆ 2 ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡಬೇಕು. 2019-20ನೇ ಸಾಲಿನ ಹಣಕಾಸು ವರ್ಷ ಈಗಾಗಲೇ 10 ತಿಂಗಳು ಗತಿಸಿ ಹೋಗಿದೆ. ಹಣಕಾಸು ವರ್ಷ ಮುಗಿಯೋದಕ್ಕೆ ಎರಡು ತಿಂಗಳು ಉಳಿದಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2 ಕೋಟಿಯಲ್ಲಿ 50ಲಕ್ಷ ಮಾತ್ರ ಕೊಟ್ಟಿದ್ದಾರೆ. 1ಕೋಟಿ 50ಲಕ್ಷ ಹಣ 300 ಶಾಸಕರಿಗೂ ಇನ್ನೂ ಕೊಟ್ಟಿಲ್ಲ. 2018-19ನೇ ಸಾಲಿನ 39 ಲಕ್ಷ ಹಣ ಇನ್ನು ಬಂದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ಸಾಕಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಹೇಳುವ ಮೂಲಕ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಪರೋಕ್ಷವಾಗಿ ಹೇಳಿದರು. ಈ ಬಗ್ಗೆ ಅಧಿವೇಶನದಲ್ಲಿ ಸರ್ಕಾರಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ ಎಂದರು.
First published: January 31, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading