ಕಾಂಗ್ರೆಸ್​​ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ; ಕೈ ತೊರೆದ ಶಾಸಕರ ವಿರುದ್ಧ ಎಸ್​.ಆರ್.ಪಾಟೀಲ್​ ಕಿಡಿ

ಕಾಂಗ್ರೆಸ್ ಮುಖಂಡರ ಮೇಲೆ ಇಡಿ, ಐಟಿ ದಾಳಿ ವಿಚಾರವಾಗಿ, ಐಟಿ, ಇಡಿಯಿಂದ ಕಾಂಗ್ರೆಸ್​​ನವರು ಬಿಜೆಪಿಗೆ ಅಂಜುವ ಪ್ರಶ್ನೆಯೇ ಇಲ್ಲ. ಬಲಿಷ್ಠ ಬ್ರಿಟಿಷರಿಗೆ ಹೆದರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ತೆತ್ತವರು. ಗುಂಡಿಗೆ ಎದೆಯೊಡ್ಡಿದ್ದೇವೆ. ಗಲ್ಲಿಗೇರುವಾಗ ಒಂದೇ ಮಾತರಂ ಅಂದವರು. ಬ್ರಿಟಿಷರಿಗೆ ಅಂಜಿಲ್ಲ, ಇನ್ನು ಬಿಜೆಪಿಯವರಿಗೆ ಹೆದರುತ್ತೇವಾ?, ಎಂದು ಪ್ರಶ್ನಿಸಿದರು.

news18-kannada
Updated:January 19, 2020, 4:14 PM IST
ಕಾಂಗ್ರೆಸ್​​ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ; ಕೈ ತೊರೆದ ಶಾಸಕರ ವಿರುದ್ಧ ಎಸ್​.ಆರ್.ಪಾಟೀಲ್​ ಕಿಡಿ
ಎಸ್​. ಆರ್​. ಪಾಟೀಲ್
  • Share this:
ಬಾಗಲಕೋಟೆ(ಜ.19): ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವ ಶಾಸಕರು ಅಲ್ಲಿ ಬಹಳ ದಿನ ಸಲ್ಲಲ್ಲ. ಕಾಂಗ್ರೆಸ್​ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಎಸ್​.ಆರ್​.ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಯಡಿಯೂರಪ್ಪನರ ಪರಿಸ್ಥಿತಿ ಸರಿಯಿಲ್ಲ. ದೆಹಲಿ ವರಿಷ್ಠರು ಗ್ರೀನ್ ​ಸಿಗ್ನಲ್ ಕೊಡುತ್ತಿಲ್ಲ.  ಮಂತ್ರಿ ಮಂಡಲದಲ್ಲಿ 16 ಸ್ಥಾನ ಖಾಲಿ ಇವೆ. ಬಿಎಸ್ ವೈ ಮೇಲೆ ಎಲ್ಲಿಲ್ಲದ ಒತ್ತಡ ತರುತ್ತಿದ್ದಾರೆ. ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡಲು ಹಿಂದೇಟು ಹಾಕಲ್ಲ ಅಂತ ಹೇಳಿದ್ದಾರೆ," ಎಂದರು.

ಮತ್ತಷ್ಟು ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವ ವಿಚಾರವಾಗಿ, "ಆಪರೇಷನ್ ಕಮಲ ಮಾಡುವಲ್ಲಿ ಬಿಜೆಪಿಗರು ನಿಸ್ಸೀಮರು. ದೇಶದಲ್ಲಿ ರಾಜ್ಯದ ಬಿಜೆಪಿಗರು ಆಪರೇಷನ್ ಕಮಲದಲ್ಲಿ ನಂಬರ್ ಒನ್ ಇದ್ದಾರೆ. ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ನಿಜವಾದ ಬಣ್ಣ ಬಯಲಾಗುತ್ತೆ," ಎಂದು ಕಿಡಿಕಾರಿದರು.

ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದ್ರೆ ನಾನು ತ್ಯಾಗ ಮಾಡಲು ಸಿದ್ದ; ಕುಪೇಂದ್ರ ರೆಡ್ಡಿ

"ನೋವಿನ ಸಂಗತಿ ಎಂದರೆ ಬಿಎಸ್ ವೈ ಬಜೆಟ್ ಅಧಿವೇಶನ ಮುಂದೆ ಹಾಕಿದ್ದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಧಿವೇಶನಕ್ಕೆ ಮಹತ್ವ ಹೋಗಿದೆ. ನಾಲ್ಕು, ಐದು ದಿನ ಅಧಿವೇಶನ ನಡೆಸಿದರೆ ಸಮಸ್ಯೆ ಚರ್ಚೆ ಮಾಡುವುದು ಹೇಗೆ? ವಿಪಕ್ಷ ಎದುರಿಸುವ ನೈತಿಕ ಸ್ಥೈರ್ಯ ಅವರಲ್ಲಿಲ್ಲ," ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರ ಮೇಲೆ ಇಡಿ, ಐಟಿ ದಾಳಿ ವಿಚಾರವಾಗಿ, "ಐಟಿ, ಇಡಿಯಿಂದ ಕಾಂಗ್ರೆಸ್​​ನವರು ಬಿಜೆಪಿಗೆ ಅಂಜುವ ಪ್ರಶ್ನೆಯೇ ಇಲ್ಲ. ಬಲಿಷ್ಠ ಬ್ರಿಟಿಷರಿಗೆ ಹೆದರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ತೆತ್ತವರು. ಗುಂಡಿಗೆ ಎದೆಯೊಡ್ಡಿದ್ದೇವೆ. ಗಲ್ಲಿಗೇರುವಾಗ 'ಒಂದೇ ಮಾತರಂ' ಅಂದವರು. ಬ್ರಿಟಿಷರಿಗೆ ಅಂಜಿಲ್ಲ, ಇನ್ನು ಬಿಜೆಪಿಯವರಿಗೆ ಹೆದರುತ್ತೇವಾ?," ಎಂದು ಪ್ರಶ್ನಿಸಿದರು.

ಸಿಎಎ ವಿರೋಧಿ ಪ್ರತಿಭಟನಾಕಾರರ ಆಹಾರ, ಹೊದಿಕೆ ಹೊತ್ತೊಯ್ದ ಪೊಲೀಸರು; ಕಂಬಳಿ ಕಳ್ಳರ ವಿಡಿಯೋ ವೈರಲ್ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದರೆ ಪ್ರತಿಭಟನೆ ಮಾಡುವ ವಿಚಾರವಾಗಿ, "ಮೋದಿ, ಶಾ ಬಗ್ಗೆ ಭಯವೇನು ಇಲ್ಲ. ಆದರೆ ರಾಜ್ಯ ನೆರೆಗೆ ತತ್ತರಿಸಿದರೂ ಈವರೆಗೂ ಏನಾಗಿದೆ ಅಂತ ಮೋದಿ ಅವರು ಕೇಳಿಲ್ಲ. ದೇಶವೇ ಅವರ ಕೈಯಲ್ಲಿ ಇದೆ. ಕರ್ನಾಟಕ ತೊಂದರೆಯಲ್ಲಿದೆ.  ಸೂಕ್ತ ಅನುದಾನ ಕೊಡುವಷ್ಟು ಕೇಂದ್ರ ಮನಸ್ಸು ಮಾಡದೆ ಇರುವುದು ಖಂಡನೀಯ. ಆ ದೃಷ್ಟಿಯಿಂದ ಇಲ್ಲಿಗೆ ಬರುತ್ತೀರಿ. ರಾಜ್ಯಕ್ಕೆ ಕಲ್ಯಾಣ ಆಗುವ ಕೆಲಸ ಮಾಡಿ ಹೋಗಿ ಅಂತ ನಮ್ಮ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದು ಅವರ ಬಗ್ಗೆ ನಮಗೆ ಇರುವ ಅಂಜಿಕೆ ಅಲ್ಲ. ರಾಜ್ಯದ ಜನರು ಅವರಿಗೆ ಛೀ.,ಥೂ, ಅಂತ ಉಗಿಯುತ್ತಾರೆ ಎಂದು ಲೇವಡಿ ಮಾಡಿದರು.

 
First published: January 19, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading