ಬಜೆಟ್​ಗೆ ಮುನ್ನವೇ ಸಿದ್ದರಾಮಯ್ಯ ಪತ್ರ ಸಮರ; ಕ್ಷೇತ್ರದ ಅನುದಾನ ಕೋರಿ ಸಿಎಂಗೆ ಪತ್ರ

ಫೆ. 7ರಂದು ವಿವಿಧ ಯೋಜನೆಗಳಿಗೆ ಅನುದಾನ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕ್ಷೇತ್ರದ ವಿವಿಧ ಅಗತ್ಯ ಸೌಕರ್ಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

  • Share this:
ಬಾಗಲಕೋಟೆ (ಫೆ.12): ಮಾರ್ಚ್​ 5ರಂದು ಬಜೆಟ್​ ಮಂಡನೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಸಿದ್ದವಾಗಿದ್ದು, ಇದಕ್ಕೂ ಮುನ್ನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಸಮರ ನಡೆಸಿದ್ದಾರೆ.

ಕೆರೂರು ಏತನೀರಾವರಿ ಯೋಜನೆಗೆ 525 ಕೋಟಿ ರೂ.  ಕೆರೂರು ಪಟ್ಟಣಕ್ಕೆ ಒಳಚರಂಡಿ ನಿರ್ಮಾಣ, ಗುಳೇದಗುಡ್ಡಣದಲ್ಲಿ ಹೈನು ವಿಜ್ಞಾನ ಕಾಲೇಜು, ಬಾದಾಮಿಯ ಕೆರೂರು ಸಿಟಿ ಸರ್ವೇ ಕಚೇರಿ, ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್​ಗೆ 50 ಕೋಟಿ ರೂ. ಬಾದಾಮಿಯಲ್ಲಿ ಬಹುಮಹಡಿ ಕಟ್ಟಡಕ್ಕೆ 25 ಕೋಟಿ ರೂ ಕೋರಿ ಪತ್ರ ಬರೆದಿದ್ದಾರೆ.ಫೆ. 7ರಂದು ವಿವಿಧ ಯೋಜನೆಗಳಿಗೆ ಅನುದಾನ ಕೋರಿ ಅವರು ಪತ್ರ ಬರೆದಿದ್ದು, ಕ್ಷೇತ್ರದ ವಿವಿಧ ಅಗತ್ಯ ಸೌಕರ್ಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಬಜೆಟ್​ ಮಂಡನೆ ಹಿನ್ನೆಲೆ ಈಗಾಗಲೇ ಹಲವು ನಾಯಕರು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ಕುರಿತು ಪತ್ರ  ಬರೆಯುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡ ತಮಗೆ ರಾಜಕೀಯ ಪುನರ್ಜನ್ಮ ಕಲ್ಪಿಸಿದ್ದ ಕ್ಷೇತ್ರದ ಅಭಿವೃದ್ಧಿ ಕಂಕಣಬದ್ದವಾಗಿದ್ದು, ಈ ಹಿನ್ನೆಲೆ ಕ್ಷೇತ್ರದ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಇದನ್ನು ಓದಿ: ದೆಹಲಿ ಫಲಿತಾಂಶ ಏನಾಗುತ್ತೆ ಅಂತ ಮೊದಲೇ ಗೊತ್ತಿತ್ತು - ಜನರೇ ಬಿಜೆಪಿ ಮುಕ್ತ ಭಾರತ ಮಾಡ್ತಿದಾರೆ ; ಸಿದ್ಧರಾಮಯ್ಯ

ಇನ್ನು ಈ ಪತ್ರಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

(ವರದಿ : ರಾಚಪ್ಪ ಬನ್ನಿದಿನ್ನಿ)
First published: