ಮೈಸೂರು ಕೈ​ ಅಭ್ಯರ್ಥಿಯಾಗಿ ಸಿ.ಎಚ್​. ವಿಜಯಶಂಕರ್​ ಆಯ್ಕೆ ಬಹುತೇಕ ಖಚಿತ; ಇಂದು ಸಿದ್ದರಾಮಯ್ಯರಿಂದ ಘೋಷಣೆ ಸಾಧ್ಯತೆ

ಮೈಸೂರು- ಕೊಡಗು ಲೋಕಸಭಾ ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಇಂದು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸ್ಥಳೀಯ ಮುಖಂಡರ ಜೊತೆಗೆ ಸಭೆ ನಡೆಸಲಾಗಿದೆ. ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಘೋಷಣೆಯೊಂದೇ ಬಾಕಿಯಿದೆ.

Sushma Chakre | news18
Updated:March 29, 2019, 3:33 PM IST
ಮೈಸೂರು ಕೈ​ ಅಭ್ಯರ್ಥಿಯಾಗಿ ಸಿ.ಎಚ್​. ವಿಜಯಶಂಕರ್​ ಆಯ್ಕೆ ಬಹುತೇಕ ಖಚಿತ; ಇಂದು ಸಿದ್ದರಾಮಯ್ಯರಿಂದ ಘೋಷಣೆ ಸಾಧ್ಯತೆ
ಸಿಎಚ್​ ವಿಜಯಶಂಕರ್​
Sushma Chakre | news18
Updated: March 29, 2019, 3:33 PM IST
ಮೈಸೂರು (ಮಾ.15): ಸೀಟು ಹಂಚಿಕೆ ವೇಳೆ ಮೈಸೂರನ್ನು ತಮ್ಮ ತೆಕ್ಕೆಯಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್​ ಯಶಸ್ವಿಯಾಗಿದೆ. ಈ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ.ಎಚ್​. ವಿಜಯಶಂಕರ್​ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದ್ದು, ಇಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಇಂದು ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಮೈಸೂರು-ಕೊಡಗು ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಿ.ಎಚ್​. ವಿಜಯಶಂಕರ್​ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಕ್ಷೇತ್ರದ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ. ಸಿದ್ದರಾಮಯ್ಯನವರ ಆಯ್ಕೆಗೆ ಸ್ಥಳೀಯ ನಾಯಕರ ಸಮ್ಮತಿ ದೊರಕಿದ್ದು, ಇಂದು ಅಧಿಕೃತ ಘೋಷಣೆಯಾಗುವುದೊಂದೇ ಬಾಕಿಯಿದೆ.

ಜೆಡಿಎಸ್​ ಪಾಲಿನ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆಯಿಟ್ಟ ಡಿಸಿಎಂ ಪರಮೇಶ್ವರ್​

ಮೈಸೂರಿನಿಂದ 2 ಬಾರಿ ಬಿಜೆಪಿ ಸಂಸದರಾಗಿದ್ದ ಸಿ.ಎಚ್​. ವಿಜಯಶಂಕರ್​ ಅವರಿಗೆ ಕಳೆದ ಚುನಾವಣೆಯಲ್ಲಿ ಮೈಸೂರಿನಿಂದ ಟಿಕೆಟ್​ ಸಿಕ್ಕಿರಲಿಲ್ಲ. ಪ್ರತಾಪ್​ ಸಿಂಹ ಮೈಸೂರು- ಕೊಡಗು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ವಿಜಯಶಂಕರ್​ ಅವರನ್ನು ದೇವೇಗೌಡರ ವಿರುದ್ಧ ಹಾಸನದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಆದರೆ, ದೇವೇಗೌಡರ ವಿರುದ್ಧ ವಿಜಯಶಂಕರ್​ ಸೋಲು ಕಂಡಿದ್ದರು. 2017ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್​ ಸೇರಿದ್ದ ಸಿ.ಎಚ್​. ವಿಜಯಶಂಕರ್​ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ದೇವೇಗೌಡರ ಮೊಮ್ಮಕ್ಕಳ ರಾಜಕೀಯ ಎಂಟ್ರಿ ಹೂವಿನ ಹಾದಿಯೇ, ಆದರೆ ಮುಂದೆ ಕಾದಿದೆ ಕಲ್ಲು-ಮುಳ್ಳುಗಳು!

ಇಂದು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ಹಿನ್ನೆಲೆ ಸಿಎ.ಚ್. ವಿಜಯಶಂಕರ್​ ಕೂಡ ತೆರಳಿದ್ದರು. ಈ ಬಾರಿ ಟಿಕೆಟ್​ ಸಿಗಬಹುದೆಂದು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದ ತಮ್ಮ ಆಪ್ತನ ಕೈ ಬಿಡದ ಸಿದ್ದರಾಮಯ್ಯ ವಿಜಯಶಂಕರ್​ಗೆ ಟಿಕೆಟ್​ ನೀಡಲು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. ಮೈಸೂರಿನಲ್ಲಿ ಉತ್ತಮ ಹೆಸರು ಗಳಿಸಿರುವ ವಿಜಯಶಂಕರ್​ ಕಾಂಗ್ರೆಸ್​ ಅಭ್ಯರ್ಥಿಯಾದರೆ ಎದುರಾಳಿಯಾಗಿ ಬಿಜೆಪಿಯಿಂದ ಪ್ರತಾಪ್​ ಸಿಂಹ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿಯ ಹಾಲಿ ಸಂಸದರೆಲ್ಲರಿಗೂ ಟಿಕೆಟ್​ ನೀಡುವುದಾಗಿ ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ. ಆದರೆ, ಅಧಿಕೃತವಾಗಿ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.
Loading...

- ಪುಟ್ಟಪ್ಪ

 

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626