• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಉಮೇಶ್ ಕತ್ತಿ ಸಚಿವನಾಗಿರೋಕೆ ನಾಲಾಯಕ್, ಸಂಪುಟದಿಂದ ಕಿತ್ತೊಗೆಯಿರಿ; ಸಿದ್ದರಾಮಯ್ಯ ಒತ್ತಾಯ

ಉಮೇಶ್ ಕತ್ತಿ ಸಚಿವನಾಗಿರೋಕೆ ನಾಲಾಯಕ್, ಸಂಪುಟದಿಂದ ಕಿತ್ತೊಗೆಯಿರಿ; ಸಿದ್ದರಾಮಯ್ಯ ಒತ್ತಾಯ

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಉಮೇಶ್ ಕತ್ತಿ ಮಂತ್ರಿಯಾಗಿರೋಕೆ ಲಾಯಕ್ಕಲ್ಲ. ಇಂಥವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ಸಿಎಂ ಯಡಿಯೂರಪ್ಪ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

  • Share this:

ಬೆಂಗಳೂರು (ಏ. 29): ಈ ಉಮೇಶ್ ಕತ್ತಿ ಇದ್ದಾರಲ್ಲ, ಇವರು ಅತ್ಯಂತ ಬೇಜವಾಬ್ದಾರಿಯುತ ಸಚಿವ. ಅವರು ಮಂತ್ರಿಯಾಗಿರೋಕೆ ಲಾಯಕ್ಕಲ್ಲ. ಅವರ ಬದಲಾಗಿ ಮುಖ್ಯಮಂತ್ರಿಗಳು ವಿಷಾದ ಹೇಳುವುದರ ಬದಲು ಇಂಥವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ಸಿಎಂ ಯಡಿಯೂರಪ್ಪ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ನಾನು ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆ. ಆದರೆ, ಇವರು ಅಕ್ಕಿ ಕೇಳು ಅಂದರೆ ಸಾಯಿ ಅಂತಿದ್ದಾರೆ. ಓರ್ವ ಹಿರಿಯ ಸಚಿವರಾಗಿ ಅವರು ಹೀಗೆ ಮಾತನಾಡುವುದು ಸರಿಯಲ್ಲ. ಅವರು ಮಂತ್ರಿಯಾಗಲು ಲಾಯಕ್ಕಿಲ್ಲ. ಇವರನ್ನ ಕೂಡಲೇ ಮಂತ್ರಿ ಸ್ಥಾನದಿಂದ ಕೈ ಬಿಡಬೇಕು ಎಂದು ಸಿಎಂ ಯಡಿಯೂರಪ್ಪ ಅವರನ್ನ ನಾನು ಆಗ್ರಹಿಸುತ್ತೇನೆ. ಇಷ್ಟೊಂದು ಬೇಜವಾಬ್ದಾರಿ ಸರ್ಕಾರವನ್ನ ನಾನು ನೋಡಿಲ್ಲ. ಯಡಿಯೂರಪ್ಪ ಈ ಮಂತ್ರಿಯ ಮೇಲೆ ಕ್ರಮ ಕೈಗೊಳ್ಳಬೇಕು. ಈ ಸಮಯದಲ್ಲಿ ಈ ಸರ್ಕಾರ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡಬೇಕು. ಸರ್ಕಾರ ಇರುವುದು ಜನರ ರಕ್ಷಣೆಗೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಇಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ ಸಿದ್ದರಾಮಯ್ಯ ಎರಡನೆ ಕೊರೋನಾ ಲಸಿಕೆ ಪಡೆದರು. ಮೇ 1ರಿಂದ 18 ವರ್ಷದ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಈಗ ಚಿಕ್ಕವರಿಗೂ ಕೊರೋನಾ ಬರುತ್ತಿದೆ. ಹೀಗಾಗಿ ಗರ್ಭಿಣಿಯರು, ಮಕ್ಕಳು ಬಿಟ್ಟು ಎಲ್ಲರಿಗೂ ಲಸಿಕೆ ನೀಡಬೇಕು. ಕೊರೊನಾ ಲಸಿಕೆಯ ಕೊರತೆಯನ್ನು ಸರಿದೂಗಿಸಿ ದೇಶದ ಜನರಿಗೆ ಕೇಂದ್ರ ಸರ್ಕಾರ ಲಸಿಕೆ ಒದಗಿಸಬೇಕು. ಲಸಿಕೆ ಪಡೆದುಕೊಂಡವರು ಕೊರೋನಾಗೆ ತುತ್ತಾಗುವುದು ತೀರಾ ಕಡಿಮೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು. ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ರಾಜ್ಯದಲ್ಲಿ ಐಸಿಯೂ ಬೆಡ್ ಕೊರತೆ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇವಲ 65 ಐಸಿಯು ಬೆಡ್ ಇದೆ. ಅಲ್ಲಿ ಕನಿಷ್ಠ 200 ಐಸಿಯು ಬೆಡ್ ಇರಬೇಕಾಗಿತ್ತು. ಸಚಿವ ಡಾ. ಕೆ. ಸುಧಾಕರ್ 100 ಬೆಡ್ ಗೆ ಹೆಚ್ಚಿಸುವುದಾಗಿ ಹೇಳಿದ್ದಾರಂತೆ. ಅಲ್ಲಿ ಕೂಡಲೇ ವೈದ್ಯಕೀಯ ಸಿಬ್ಬಂದಿಗಳ ನೇಮಕ ಮಾಡಬೇಕು. ಐಸಿಯು ಬೆಡ್ ಗಳನ್ನು ಹೆಚ್ಚಿಸಬೇಕು. ತುಂಬಾ ವೇಗವಾಗಿ ಮಹಾಮಾರಿ ಹರಡುತ್ತಿದೆ. ಇದನ್ನು ತಪ್ಪಿಸಲು ಮೊದಲು ಸರ್ಕಾರ ಸುಳ್ಳು ಹೇಳುವುದನ್ನ ಬಿಡಬೇಕು. ಜನರನ್ನ ವಿರೋಧ ಪಕ್ಷಗಳನ್ನ ಕೂಡಲೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೆಲವು ಸಲಹೆಗಳನ್ನ ನೀಡಿದ್ದೇನೆ. ಅದನ್ನ ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದಾರೆ, ಅದಕ್ಕೆ ನನಗೆ ಅಭ್ಯಂತರ ಇಲ್ಲ. ಆದರೆ ದಿನಗೂಲಿ ಕೆಲಸಗಾರರಿಗೆ ರಕ್ಷಣೆ ಕೊಡಬೇಕು. ಅವರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು, ಆಹಾರ ಧಾನ್ಯಗಳನ್ನ ನೀಡಬೇಕು. ಇದನ್ನ ಕೂಡಲೇ ಜಾರಿ ಮಾಡಬೇಕು. ಇಲ್ಲಿಂದ ಊರುಗಳಿಗೆ ಹೋಗುವ ವಲಸೆ ಕಾರ್ಮಿಕರಿಗೆ ಅಲ್ಲೇ ಉದ್ಯೋಗ ವ್ಯವಸ್ಥೆ ಮಾಡಬೇಕು. ನಾನು ಟೀಕೆ ಮಾಡುವುದು ಎಚ್ಚರಿಕೆ ಇರಲಿ ಅಂತ. ಕೊರೋನಾ‌ ಕಾಲದಲ್ಲಿ ಸರ್ಕಾರ, ವಿರೋಧ ಪಕ್ಷ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾನು ಟೀಕೆ ಮಾಡಿದರೆ ರಾಜಕೀಯ ಅಂತಾರೆ. ಆದರೆ, ಸತ್ಯ ಹೇಳಬೇಕಲ್ಲ. ಶವ ಸಂಸ್ಕಾರಕ್ಕೆ ಇನ್ನೂ ಸ್ಥಳಗಳನ್ನು ಜಾಸ್ತಿ ಮಾಡಿ‌ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇವರು ಹೇಳುವ ಸಾವಿನ ಸಂಖ್ಯೆಗೂ ಆಗುತ್ತಿರುವ ಸಾವಿನ ಸಂಖ್ಯೆಗೂ ಜಾಸ್ತಿ ವ್ಯತ್ಯಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

First published: