ಯಡಿಯೂರಪ್ಪ ಮೊದಲು ಯತ್ನಾಳ್​ಗೆ ಬುದ್ಧಿ ಹೇಳಲಿ; ಸಿದ್ದರಾಮಯ್ಯ ಕಿಡಿ

ಎಸ್ಐಟಿ ತಾರತಮ್ಯದ ಬಗ್ಗೆ ಸಿಡಿ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ಐಟಿ ಮೇಲೆ ಸರ್ಕಾರ ಪ್ರಭಾವ ಬೀರಿದ್ರೆ, ನಿಜವಾದ ಸತ್ಯ ಏನೆಂದು ಗೊತ್ತಾಗೋದಿಲ್ಲ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

 • Share this:
  ಬೆಂಗಳೂರು (ಏ. 4): ಅನ್ನಭಾಗ್ಯ ವಿಷಯದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಕಿಡಿ ಕಾರಿರುವ ಸಚಿವರ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಸರ್ಕಾರದ ಹಣ ಯಾರಪ್ಪನ ದುಡ್ಡು ಎಂದು ಪ್ರಶ್ನೆ ಮಾಡಿದ್ದೇನೆ. ಇದೇನು ಬೈದಿರೋದಾ? ನಮ್ಮಪ್ಪನ ಮನೆಯ ದುಡ್ಡೂ ಅಲ್ಲ, ಅವರಪ್ಪನ ಮನೆಯ ದುಡ್ಡೂ ಅಲ್ಲ ಎಂದಿದ್ದೇನೆ. ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬುದ್ದಿ ಹೇಳಲಿ. ಅವನು ಯಡಿಯೂರಪ್ಪನವರಿಗೆ ಬಾಯಿಗೆ ಬಂದಂತೆ ಬೈತಿದ್ದಾನೆ. ಸರ್ಕಾರದ ಹಣ ಜನರ ತೆರಿಗೆ ಹಣ, ಇದು ಯಾರಪ್ಪನ ಮನೆ ಹಣವೂ ಅಲ್ಲ. 7 ಕೆಜಿ ಅಕ್ಕಿ ಕೊಟ್ಟಿದ್ದರೆ ಅದೇನು ಇವರಪ್ಪನ ಮನೆಯದ್ದು ಏನಾದರೂ ಹೋಗುತ್ತಿತ್ತಾ? ಎಂದಿದ್ದೇನೆ. ಸಚಿವರು ಬುದ್ದಿ ಇಲ್ಲದೆ ಮಾತಾಡಿದ್ದಾರೆ. ಅವರಿಗೆ ನಾನು ಏನು ಮಾತಾಡಿದ್ದೇನೆ ಅನ್ನೋದು ಅರಿವಾಗಿರಬೇಕು. ಸರ್ಕಾರದ ಹಣ ಜನರ ಹಣ, ಇದೇನು ಯಡಿಯೂರಪ್ಪ ಮನೆ ಹಣ ಅಲ್ಲ ಎಂದಿದ್ದೇನೆ. ಈ ಮಾತಿನಲ್ಲಿ ತಪ್ಪೇನಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಅಕ್ಕಿ ಕೊಟ್ಟರೂ ನೀವು ಮತ ಹಾಕಿಲ್ಲ ಎಂಬ ಹೇಳಿಕೆ ವಿಚಾರವಾಗಿ ತಮ್ಮ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ನಾನು ಅಕ್ಕಿ ಕೊಟ್ಟವರು ಈಗಲೂ ಫ್ರೀಯಾಗಿ ಅನ್ನ ತಿಂತಿದ್ದಾರೆ. ಅವರೇ ನನ್ನನ್ನು ಮರೆತು ಬಿಟ್ಟರು ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಇದೆ ಎಂದು ತಮ್ಮ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣ: ಮಾಜಿ ಸಚಿವ ಡಿ. ಸುಧಾಕರ್​ಗೆ ಎಸ್ಐಟಿ ನೋಟೀಸ್

  ರಾಜ್ಯದಲ್ಲಿ ಉಪ ಚುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ನಾಳೆಯಿಂದ ಏ. 12ರತನಕ ನಾನು ಪ್ರಚಾರಕ್ಕೆ ಹೋಗ್ತಿದ್ದೇನೆ. ಯುಗಾದಿ ಹಬ್ಬದವರೆಗೂ ನಾನು ಪ್ರಚಾರ ಕೈಗೊಳ್ಳುತ್ತಿದ್ದೇನೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಯುವತಿ ಕೇಸ್ ನಲ್ಲಿ ಕಾಂಗ್ರೆಸ್​ನ ಮಾಜಿ ಶಾಸಕ ಸುಧಾಕರ್ ಹೆಸರು ಪ್ರಸ್ತಾಪವಾಗಿರುವ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ನನಗೆ ಗೊತ್ತಿಲ್ಲದೆ ಇರುವ ವಿಷಯ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

  ಎಸ್ಐಟಿ ತಾರತಮ್ಯದ ಬಗ್ಗೆ ಸಿಡಿ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಕೆಗೆ ನಂಬಿಕೆ ಇಲ್ಲ ಅಂದರೆ ಬೇರೆ ರೀತಿಯಲ್ಲಿ ತನಿಖೆ ಮಾಡಲಿ. ಈಗಾಗಲೇ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೇನೆ. ಎಸ್ಐಟಿ ಮೇಲೆ ಸರ್ಕಾರ ಪ್ರಭಾವ ಬೀರಿದ್ರೆ, ನಿಜವಾದ ಸತ್ಯ ಏನೆಂದು ಗೊತ್ತಾಗೋದಿಲ್ಲ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲಿ ಎಂದು ಹೇಳಿದ್ದೇನೆ. ಈಗಲೂ ಹಾಗೇ ತನಿಖೆ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  ಕೊರೋನಾ ನಿರ್ವಹಣೆ ವಿಷಯದಲ್ಲಿ ಸರ್ಕಾರದಿಂದ ಗೊಂದಲ ನಿರ್ಧಾರ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು, ಇವತ್ತಿನವರೆಗೂ ಸರ್ಕಾರ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಅಭಿಪ್ರಾಯ ಗಳನ್ನು ಕೂಡ ಕೇಳಿಲ್ಲ. ಈಗಾಗಲೇ ನಾನೇ ಪತ್ರ ಬರೆದಿದ್ದೇನೆ. ಆದರೂ ನಮ್ಮ ಅಭಿಪ್ರಾಯ ಕೇಳದೆ, ಗೊಂದಲದ ನಿರ್ಧಾರ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
  Published by:Sushma Chakre
  First published: