• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾನು ಸೇರಿ ಎಲ್ಲರೂ ಹೊಣೆ; ಸಿದ್ದರಾಮಯ್ಯ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾನು ಸೇರಿ ಎಲ್ಲರೂ ಹೊಣೆ; ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್​ನವರು ಕರೆದುಕೊಂಡು ಹೋಗಿದ್ದಾರೆಂಬ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಪ್ರತಾಪ್ ಗೌಡ ಯಾರ ಕ್ಯಾಂಡಿಡೇಟ್? 2013ರಲ್ಲಿ ಕಾಂಗ್ರೆಸ್​ನಲ್ಲಿದ್ದ ಆತನನ್ನು ವಿಜಯೇಂದ್ರ ದುಡ್ಡು ಕೊಟ್ಟು ಆಪರೇಷನ್ ಕಮಲ ಮಾಡಿದ್ದ ಎಂದು ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಹಾಸನ (ನ. 24): ಕಾಂಗ್ರೆಸ್​ನಲ್ಲಿ ಬಣ ರಾಜಕೀಯವಿದೆ ಎಂಬ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಲವರು ನಾಯಕತ್ವದ ಬಗ್ಗೆ ಮಾತನಾಡುತ್ತಾರೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಎಲ್ಲರೂ ಹೊಣೆಯಾಗಿದ್ದಾರೆ. ಶಿರಾ ಮತ್ತು ಆರ್​ಆರ್ ನಗರ ಉಪ ಚುನಾವಣೆಯಲ್ಲಿ ನಾವು ಸೋತೆವು. ಇದಕ್ಕೆ ನಾನು ಸೇರಿ ಎಲ್ಲರೂ ಹೊಣೆಯಾಗಿದ್ದೇವೆ ಎಂದಿದ್ದಾರೆ.


ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಉಪ ಚುನಾವಣೆಗಳನ್ನೂ ಗೆದ್ದಿದ್ದೆವು. ಬಿಜೆಪಿಯವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಗೆದ್ದಿದ್ದಾರೆ. ಯಡಿಯೂರಪ್ಪನ ಮಗ ಕೋಟಿಗಟ್ಟಲೆ ದುಡ್ಡು ಹೊಡೆದಿದ್ದಾನೆ. ಆ ದುಡ್ಡು ಖರ್ಚು ಮಾಡಿ ಉಪ ಚುನಾವಣೆ ಗೆದ್ದಿದ್ದಾನೆ ಎಂದು ಆರೋಪಿಸಿದ್ದಾರೆ.


ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿ ಜೊತೆ ಕುಮಾರಸ್ವಾಮಿ ಮೊದಲಿನಿಂದಲೂ ಚೆನ್ನಾಗಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳೋದು‌ ಅವರಿಗೇನೂ ಹೊಸತಲ್ಲ ಎಂದಿದ್ದಾರೆ.


ಇದನ್ನೂ ಓದಿ: ಕುರುಬರನ್ನು ಎಸ್​ಟಿಗೆ ಸೇರಿಸುವ ಹೋರಾಟ ಬೆಂಬಲಿಸುವುದು ಸಿದ್ದರಾಮಯ್ಯಗೆ ಬಿಟ್ಟ ವಿಚಾರ; ಕೆಎಸ್​ ಈಶ್ವರಪ್ಪ


ಮೈತ್ರಿ ಸರ್ಕಾರದಲ್ಲಿ ನೋವು ಅನುಭವಿಸಿದ್ದೇನೆ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನೋವು ಅನುಭವಿಸೋರು ತಾಜ್ ಹೋಟೆಲ್​ನಲ್ಲಿ ಇರ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.


ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್​ನವರು ಕರೆದುಕೊಂಡು ಹೋಗಿದ್ದಾರೆಂದು ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಪ್ರತಾಪ್ ಗೌಡ ಯಾರ ಕ್ಯಾಂಡಿಡೇಟ್? 2013ರಲ್ಲಿ ಕಾಂಗ್ರೆಸ್​ನಲ್ಲಿದ್ದ ಆತನನ್ನು ವಿಜಯೇಂದ್ರ ದುಡ್ಡು ಕೊಟ್ಟು ಆಪರೇಷನ್ ಕಮಲ ಮಾಡಿದ್ದ. ವಿಜಯೇಂದ್ರ ಬಿಜೆಪಿನಾ ಅಥವಾ ಯಾವ ಪಕ್ಷದವನು? ಎಂದು ಟೀಕಿಸಿದ್ದಾರೆ. ನಮ್ಮ ಶಾಸಕರನ್ನೇ ದುಡ್ಡು ಕೊಟ್ಟು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.


ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿರು ಸಿದ್ದರಾಮಯ್ಯ, ಲೋಕಸಭಾ ಉಪಚುನಾವಣೆಯ ಕುರಿತು ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಸಭೆ ಮಾಡಿದ ಬಳಿಕ ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

Published by:Sushma Chakre
First published: