Siddaramaiah: ‘ಅವಿವೇಕಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ನನ್ನು ಮೊದಲು ಸಂಪುಟದಿಂದ ಕಿತ್ತು ಹಾಕಿ’

ಸರ್ಕಾರಿ ಶಾಲಾ ಮಕ್ಕಳಿಂದ ಶೂ-ಸಾಕ್ಸ್‌ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಡುತ್ತಿರುವ ಎಡವಟ್ಟುಗಳು ಒಂದೋ, ಎರಡೋ? ಮೊದಲು ಈ ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಮತ್ತು ಬಿ ಸಿ ನಾಗೇಶ್

ಸಿದ್ದರಾಮಯ್ಯ ಮತ್ತು ಬಿ ಸಿ ನಾಗೇಶ್

  • Share this:
ಬೆಂಗಳೂರು (ಜು.09): ಸರ್ಕಾರಿ ಶಾಲಾ ಮಕ್ಕಳಿಗೆ (Government school children) ಶೂ, ಸಾಕ್ಸ್​ ವಿತರಣೆ ವಿಚಾರ ರಾಜಕೀಯ ಕಚ್ಚಾಟಕ್ಕೂ ಕಾರಣವಾಗಿದೆ. ಈ ಬಾರಿ ಮಕ್ಕಳಿ ಶೂ, ಸಾಕ್ಸ್ (Shoes, Socks)​ ಕೊಡಲ್ಲ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್​ ನಾಯಕರು (Congress Leaders) ಆ್ಯಕ್ಟಿವ್ ಆಗಿ ಸರ್ಕಾರದ ವಿರುದ್ಧ ಮುಗಿಬಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D.K Shivakumar) , ರಾಜ್ಯದ ಜನರ ಬಳಿ ಭಿಕ್ಷೆ ಬೇಡಿಯಾದ್ರೂ ಮಕ್ಕಳಿಗೆ ಶೂ, ಸಾಕ್ಸ್​ ನೀಡೋದಾಗಿ ಹೇಳಿದ್ರು. ಕಾಂಗ್ರೆಸ್ ನಾಯಕರು ವಿರೋಧಿಸುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಮಕ್ಕಳಿಗೆ ಶೂ, ಸಾಕ್ಸ್​ ನೀಡುವುದಾಗಿ ಹೇಳಿದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (B.C Nagesh)​ ವಿರುದ್ಧ ಕಿಡಿಕಾರಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒಬ್ಬ ಶಿಕ್ಷಣ ವಿರೋಧಿ, ಅವಿವೇಕಿ. ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.

ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ

ಸರ್ಕಾರಿ ಶಾಲಾ ಮಕ್ಕಳಿಂದ ಶೂ-ಸಾಕ್ಸ್‌ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಡುತ್ತಿರುವ ಎಡವಟ್ಟುಗಳು ಒಂದೋ, ಎರಡೋ? ಮೊದಲು ಈ ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡದೇ ಇರುವುದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದ ಸೈಕಲ್, ಶೂ, ಸಾಕ್ಸ್‌ ಯೋಜನೆಗಳನ್ನು ಶಿಕ್ಷಣ ಇಲಾಖೆ ಕೈ ಬಿಟ್ಟಿತ್ತು.

ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್‌ ನಾಯಕರು ಟೀಕಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.

ಬೊಮ್ಮಾಯಿ ಅವರನ್ನ ನಿದ್ದೆಯಿಂದ ನಾವು ಏಳಿಸಬೇಕು

ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸುವ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಸಿಎಂ ಬಸವರಾಜ ಬೊಮ್ಮಾಯಿ ಅವರ ನಿದ್ದೆ ಬಿಡಿಸಬೇಕಾದರೆ ನಾವು ಎಚ್ಚರಿಸಬೇಕಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು

ಟ್ವೀಟ್ ಮಾಡುವ ಜತೆಗೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಶೂ, ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ವಿಚಾರ ಪ್ರಸ್ತಾಪಿಸಿ, ನಾವು ಬಡಮಕ್ಕಳಿಗೆ ಅನುಕೂಲವಾಗಲೆಂದು ಸಾಕ್ಸ್ , ಶೂ ಕೊಡುತ್ತಿದ್ದೆವು. ಆದರೆ ಇವರು ನಿಲ್ಲಿಸಲು ಹೊರಟರು. ನಾವು ಒತ್ತಾಯ ಮಾಡಿದ ಮೇಲೆ ಕೊಡುತ್ತೇವೆ ಎಂದರು. ಶಾಲೆಗಳು ಆರಂಭವಾಗಿವೆ. ಶೂ, ಸಮವಸ್ತ್ರ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವಘಡದಲ್ಲಿ ಸಿಲುಕಿದವರನ್ನ ಸುರಕ್ಷಿತವಾಗಿ ಕರೆತರಬೇಕು

ಅಮರನಾಥ ಮೇಘಸ್ಫೋಟ ವಿಚಾರವಾಗಿ ಮಾತನಾಡಿದ ಅವರು, ಅವಘಡದಲ್ಲಿ ಸಿಲುಕಿದವರನ್ನ ಸುರಕ್ಷಿತವಾಗಿ ಕರೆತರಬೇಕು ಎಂದರು. ರಾಜ್ಯದಲ್ಲಿ ಮಳೆಯಿಂದ ಹಾನಿ‌ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಉಸ್ತುವಾರಿಗಳು ಜಿಲ್ಲೆಗೆ ಹೋಗುತ್ತಿಲ್ಲ. ಜನರ ಕಷ್ಟ ಸುಖಗಳನ್ನ ಕೇಳಬೇಕಲ್ಲ. ಇಲ್ಲಿ ಬರಿ ಮೀಟಿಂಗ್ ಮಾಡಿದ್ರೆ ಸಾಕಾ?, ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೇನ್ರಿ?. ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published by:Pavana HS
First published: