Siddaramaiah: ಸ್ವಾಮೀಜಿಗಳ ವಸ್ತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ; ಸಿದ್ದು ವಿರುದ್ಧ ಸಿಡಿದೆದ್ದ ಮಠಾಧೀಶರು

ಹಿಜಾಬ್​ ವಿವಾದದ ಬಗ್ಗೆ ಮಾತಾಡುವಾಗ ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಎಂದು ಹೇಳಿ ಸಿದ್ದರಾಮಯ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಹಿಜಾಬ್​ ವಿಚಾರ ಮಾತಾಡಲು ಹೋಗಿ ಸ್ವಾಮೀಜಿಗಳಿ ತಲೆ ಮೇಲೆ ಹಾಕಿಕೊಳ್ಳೋ ವಸ್ತ್ರದ ಬಗ್ಗೆ ಮಾತಾಡಿ  ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah ) ಪೇಚಿಗೆ ಸಿಲುಕಿದ್ದಾರೆ.  ಮೈಸೂರಲ್ಲಿ ಮಾತಾಡಿದ ಅವ್ರು ಹಿಜಾಬ್ ವಿವಾದ (Hijab Controversy) ಸೃಷ್ಟಿಗೆ ಬಿಜೆಪಿಯೇ ಕಾರಣ ಎಂದ್ರು. ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ್ಟ ತಲೆ ಮೇಲೆ ಹಾಕಿ ಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ?, ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಎಂದು ಹೇಳಿ ಸಿದ್ದರಾಮಯ್ಯ ಹೊಸ ವಿವಾದ (New Controversy) ಸೃಷ್ಟಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಠಾಧೀಶರು ರೊಚ್ಚಿಗೆದ್ದಿದ್ದಾರೆ. ಬಿಜೆಪಿ ನಾಯಕರು (Bjp Leaders) ಸಹ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಹಿಂದೂ ಸಂಸ್ಕೃತಿ ಹಿಯಾಳಿಸೋ ಚಟ‘

ಹಿಜಾಬ್ ವಿವಾದವನ್ನ ಮಠಗಳಿಗೆ ತಂದಿಟ್ಟಿದ್ದಾರೆ, ಇದು ಅತ್ಯಂತ ಖಂಡನೀಯ ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿಕೆ. ಸಿದ್ದರಾಮಯ್ಯನವರಿಗೆ ಹಿಂದೂ ಸಂಸ್ಕೃತಿಯನ್ನ ಹಿಯಾಳಿಸುವುದೇ ಚಟವಾಗಿದೆ. ಚಟಕ್ಕೆ ಔಷಧಿ ಕೊಡುವುದಕ್ಕೆ ಸಾಧ್ಯವಿಲ್ಲ ಹಿಂದೂ ಧರ್ಮದ ವಿರುದ್ಧ ಟೀಕಿಸಿದರೆ ನಮಗೆ ಅಧಿಕಾರ ಸಿಗಬಹುದೆಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯೆ ಅವರನ್ನ ಇಂದು ಅಧಿಕಾರದಿಂದ ದೂರವಿಟ್ಟಿದೆ,ಇದು ಅವರು ಅರ್ಥ ಮಾಡಿಕೊಳ್ಳಲಿ ಎಂದು ಸ್ವಾಮೀಜಿಗಳು ಕಿಡಿಕಾರಿದ್ರು.

‘ಕೂಡಲೇ ಸ್ವಾಮೀಜಿಗಳ ಕ್ಷಮೇ ಕೇಳಿ’

ಸಿದ್ದರಾಮಯ್ಯ ಅವರೇ ನಿಮ್ಮದೇನು ಪಾಕಿಸ್ತಾನದ ಅಜೆಂಡಾನಾ? ತಿಳಿದುಕೊಂಡು ರಾಜಕೀಯ ನಡೆಸಿದ್ರೆ ನಿಮಗೆ ರಾಜಕೀಯ ಭವಿಷ್ಯವಿದೆ, ಇಲ್ಲಾಂದ್ರೆ ರಾಜ್ಯದಲ್ಲಿ ನೀವು ಎರಡಂಕಿ ಕೂಡ ದಾಟಲ್ಲ ಕೂಡಲೇ ಮಠಾಧೀಶರ ಮತ್ತು ಹಿಂದೂಗಳ ಕ್ಷಮೇ ಕೇಳದಿದ್ದರೆ, ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಎಚ್ಚರಿಕೆ

‘ನಿಮಗೆ ಸ್ವಲ್ಪವೂ ಬುದ್ಧಿ ಜ್ಞಾನ ಇಲ್ಲವೇ’

ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೊಲ್ಲೂರಿನಲ್ಲಿ ಕಿಷ್ಕಿಂದದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ,  ಸಿದ್ದರಾಮಯ್ಯ ಮಾತಾಡೋದೆಲ್ಲಾ ಹಿಂದೂ ಧರ್ಮದ ವಿರುದ್ಧವೇ ಇಂಥ ಹೇಳಿಕೆಗಳನ್ನೆಲ್ಲಾ ಅವರು ಕೊಡಬಾರದು ಎಂದ್ರು. ಸಿದ್ದರಾಮಯ್ಯ ಹೆಸರಿನಲ್ಲಿ ರಾಮನ ಹೆಸರು ಇದೆ. ಹಿಂದೂ ಧರ್ಮ ಹಿಂದೂ ದೇವರ ವಿರುದ್ಧ ಅವರು ಕೆಲಸ ಮಾಡುತ್ತಿರುವುದು ತಪ್ಪು, ಸಿದ್ದರಾಮಯ್ಯನವರ ವರ್ತನೆ ಸರಿಯಲ್ಲ, ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳು ಕಾಲೇಜಿಗೆ ಹೋಗುತ್ತಿದ್ದೇವಾ? ಹಿಜಾಬ್ ವಿಚಾರಕ್ಕೂ ಸನ್ಯಾಸಿಗಳ ವಿಚಾರಕ್ಕೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ?,ನಿಮಗೆ ಸ್ವಲ್ಪವೂ ಬುದ್ಧಿ ಜ್ಞಾನ ಇಲ್ಲವೇ ಅಂತ ಗೋವಿಂದ ಸರಸ್ವತಿ ಸ್ವಾಮೀಜಿಗಳು ಕಿಡಿಕಾರಿದ್ರು.

ಇದನ್ನೂ ಓದಿ: Siddaramaiah: ಮುಂದಿನ ಚುನಾವಣೆಯೇ ನನ್ನ ಕೊನೇ ಸ್ಪರ್ಧೆ, ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಮಾತು

‘ಹಿಂದೆ ರಾಕ್ಷಸರಿಗೆ ಆದ ಗತಿ ನಿಮಗೂ ಆಗುತ್ತೆ’

ಹಿಂದೂ ಸನ್ಯಾಸಿಗಳ ಬಗ್ಗೆ,  ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರವೂ ನಿಮಗಿಲ್ಲ ಹಿಂದೂ ಎಂಬ ಪದ ಉಚ್ಚರಣೆ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ, ಇಂಥ ಜನಗಳು ಬಂದು ನಾಯಕರಾದರೆ ಅಧರ್ಮವಾಗಿ ಹೋಗುತ್ತದೆ. ಇಂತಹ ನಾಯಕರಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕು. ಸಿದ್ದರಾಮಯ್ಯ ಒಬ್ಬರಿಗೆ ಎಚ್ಚರಿಕೆಯಲ್ಲ ಎಲ್ಲಾ ನಾಯಕರಿಗೆ ಇದೆ ಎಚ್ಚರಿಕೆ. ರಾವಣಾಸುರ ನಿಗೆ ಹಿರಣ್ಯಾಕ್ಷನಿಗೆ ಯಾವ ಗತಿಯಾಯಿತೋ ಅವರುಗಳಿಗೂ ಅದೇ ಗತಿಯಾಗುತ್ತದೆ.

ಸಾವಿರ ಕೋಟಿ ಜನ್ಮ ಎತ್ತಿದರೂ ಹಿಂದೂ ಸಂತರ ಬಗ್ಗೆ ಮಾತನಾಡಲು ಹಕ್ಕು ನಿಮಗಿಲ್ಲ, ಸುಮ್ಮನೆ ಮನೆಯಲ್ಲಿ ಇದ್ದುಕೊಂಡು ರಾಮನಾಮ ಜಪ ಮಾಡಿಕೊಳ್ಳಿ, ನಿಮ್ಮ ಜನ್ಮ ಉದ್ದಾರ ಆಗುತ್ತದೆ. ಹಿಂದೆ ರಾಕ್ಷಸರಿಗೆ ಆದ ಗತಿ ನಿಮಗೂ ಆಗುತ್ತದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿಗಳು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು.

ಸಿದ್ದರಾಮಯ್ಯ ವಿರುದ್ಧ ಕಿಡಿ

ಇನ್ನು ಈ ಬಗ್ಗೆ ದಾವಣಗೆರೆಯಲ್ಲಿ ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ  ಶಿವಾಚಾರ್ಯ ಸ್ವಾಮೀಜಿ ಸಹ ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ಬಗ್ಗೆ ಉತ್ತರ ಕೊಡಬೇಕಾಗಿದ್ದು ಸರ್ಕಾರ ಧರ್ಮಗುರುಗಳಲ್ಲಾ ಹಿಜಾಬ್, ಹಿಂದೂ ಮಹಿಳೆ ತಲೆ ಮೇಲೆ ಸೆರಗು ಹೊದ್ದಿಕೊಳ್ಳುತ್ತಾರೆ ಅದು ಅವ್ರ ಸಂಪ್ರದಾಯ, ಸ್ವಾಮೀಜಿಗಳು ಸಹ ತಲೆ ಮೇಲೆ ವಸ್ತ್ರ ಹಾಕುತ್ತಾರೆ ಇದು ಸಂಪ್ರದಾಯ, ಧರ್ಮಗುರುಗಳು ಸರ್ವೇಜನ ಸುಖಿನೋ ಭವಂತಿ ಎನ್ನುತ್ತಾರೆ. ಹಿಜಾಬ್ ವಿಚಾರವನ್ನು ಇಲ್ಲಿ ಯಾಕೆ ತರ್ತೀರಾ ಎಂದು ಸ್ವಾಮೀಜಿ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಎಂಟ್ರಿ ಇಲ್ಲ: ಸರ್ಕಾರದ ಸ್ಪಷ್ಟನೆ; ಬಿಕಾಂ ಎಕ್ಸಾಂಗೆ ಮುಸ್ಕಾನ್ ಗೈರು

‘ಧೈರ್ಯವಿದ್ರೆ ಮಠಕ್ಕೆ ಹೋಗಿ ಕೇಳಿ’

ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್​ ಅಶೋಕ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಅನುಭವಿ ರಾಜಕಾರಣಿ ಇದ್ದಾರೆ. ಯಾವ ಸಮಯದಲ್ಲಿ ಯಾವ ಹೇಳಿಕೆ ನೀಡಬೇಕು ಅನ್ನೊದು ಅವರಿಗೆ ಚನ್ನಾಗಿ ಗೊತ್ತಿದೆ. ಸಿದ್ದರಾಮಯ್ಯಗೆ ಧೈರ್ಯ ಇದ್ದರೆ ಮಠಕ್ಕೆ ಭೇಟಿ ನೀಡಿದ್ದಾಗ ಸ್ವಾಮೀಜಿಗಳನ್ನು ಈ ಬಗ್ಗೆ ಕೇಳಲಿ, ಮಠದಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗ್ತಾರೆ ಹೊರಗಡೆ ಬಂದ ಮೇಲೆ ವೈಲೆಂಟ್ ಆಗ್ತಾರೆ  ಅಂತ ಆರ್​ ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.
Published by:Pavana HS
First published: