ಇಂದು ಮತ್ತೆ ಕಾಂಗ್ರೆಸ್​ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ; ಕಡ್ಡಾಯವಾಗಿ ಹಾಜರಾಗಲು ಶಾಸಕರಿಗೆ​ ಸೂಚನೆ

ಇಂದು ಬೆಳಗ್ಗೆ 11 ಗಂಟೆಗೆ ಈಗಲ್ಟನ್​ ರೆಸಾರ್ಟ್​ನಲ್ಲಿಯೇ ಕಾಂಗ್ರೆಸ್​ ಶಾಸಕಾಂಗ ಸಭೆ ನಡೆಯಲಿದೆ. ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಸಿಎಲ್​ಪಿ ಸಭೆ ಕರೆದಿರುವ ಸಿದ್ದರಾಮಯ್ಯನವರ ನಡೆಯ ಬಗ್ಗೆ ಕುತೂಹಲ ಮೂಡಿದೆ.

Sushma Chakre | news18
Updated:January 21, 2019, 7:55 AM IST
ಇಂದು ಮತ್ತೆ ಕಾಂಗ್ರೆಸ್​ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ; ಕಡ್ಡಾಯವಾಗಿ ಹಾಜರಾಗಲು ಶಾಸಕರಿಗೆ​ ಸೂಚನೆ
ಸಿದ್ದರಾಮಯ್ಯ
  • News18
  • Last Updated: January 21, 2019, 7:55 AM IST
  • Share this:
ಕೃಷ್ಣ ಜಿ.ವಿ.

ಬೆಂಗಳೂರು (ಜ. 21): ಶನಿವಾರ ಈಗಲ್ಟನ್ ರೆಸಾರ್ಟ್​ನಲ್ಲಿಯೇ ಕಾಂಗ್ರೆಸ್​  ಶಾಸಕಾಂಗ ಪಕ್ಷದ ಸಭೆ ನಡೆಸಿದ್ದ ಕೈ ನಾಯಕರು ಇಂದು ಮತ್ತೊಮ್ಮೆ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಎಲ್ಲ ಕಾಂಗ್ರೆಸ್​ ಶಾಸಕರೂ ಕಡ್ಡಾಯವಾಗಿ ಹಾಜರಿರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್​ ಸೂಚನೆ ನೀಡಿದ್ದಾರೆ.

ನಿನ್ನೆ ಈಗಲ್ಟನ್​ ರೆಸಾರ್ಟ್​ನಲ್ಲಿ ಶಾಸಕರಾದ ಕಂಪ್ಲಿ ಗಣೇಶ್​ ಮತ್ತು ಆನಂದ ಸಿಂಗ್​ ನಡುವೆ ಹೊಡೆದಾಟ ನಡೆದಿದ್ದು, ಕಂಪ್ಲಿ ಗಣೇಶ್​ ನಡೆಸಿದ ದಾಳಿಯಿಂದ ತೀವ್ರ ಗಾಯಗೊಂಡಿರುವ ಆನಂದ ಸಿಂಗ್​ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಪರೇಷನ್​ ಕಮಲದ ಜೊತೆಗೆ ಈ ಗಲಾಟೆಯೂ ಕಾಂಗ್ರೆಸ್​ ನಾಯಕರಿಗೆ ತಲೆನೋವು  ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ (ಸಿಎಲ್​ಪಿ) ಕರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಆನಂದ್ ಸಿಂಗ್​ಗೆ ಬಾಟ್ಲಿ ಏಟು ಬೀಳಲು ಕಾರಣವೇನು? 6 ತಿಂಗಳಿಂದಲೂ ಕುದಿಯುತ್ತಿದ್ದ ಕೋಪ ರೆಸಾರ್ಟ್​ನಲ್ಲಿ ಹೊರಬಿತ್ತಾ?

ಕಳೆದ ಶುಕ್ರವಾರವೂ ವಿಧಾನಸೌಧದಲ್ಲಿ ಸಿಎಲ್​ಪಿ ಸಭೆ ನಡೆಸಿದ್ದ ಕಾಂಗ್ರೆಸ್​ ನಾಯಕರು ವಿಪ್​ ಜಾರಿಗೊಳಿಸಿದ್ದರು. ಆಪರೇಷನ್​ ಕಮಲದ ದಾಳಕ್ಕೆ ಸಿಲುಕಿರುವ ತಮ್ಮ ಪಕ್ಷದ ಶಾಸಕರನ್ನು ಹೇಗಾದರೂ ಮನವೊಲಿಕೆ ಮಾಡಬೇಕೆಂಬ ಉದ್ದೇಶದಿಂದ ವಿಪ್​ ಜಾರಿಗೊಳಿಸಿದ್ದ ರಾಜ್ಯ ಕಾಂಗ್ರೆಸ್​ ನಾಯಕರು ಬಳಿಕ ತಮ್ಮೆಲ್ಲ ಶಾಸಕರನ್ನೂ ಈಗಲ್ಟನ್​ ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದರು. ವಿಪ್​ ಜಾರಿಯಾಗಿದ್ದರೂ ಅಂದಿನ ಸಭೆಯಲ್ಲಿ ನಾಲ್ವರು ಶಾಸಕರು ಪಾಲ್ಗೊಂಡಿರಲಿಲ್ಲ. ಬಳಿಕ,  ಶನಿವಾರ ಈಗಲ್ಟನ್​ ರೆಸಾರ್ಟ್​ನಲ್ಲಿಯೇ ಸಿಎಲ್​ಪಿ ಸಭೆಯನ್ನು ಕರೆಯಲಾಗಿತ್ತು. ಅಂದಿನ ಸಭೆಗೂ ಆಗಮಿಸದ ಶಾಸಕರಾದ ರಮೇಶ್​ ಜಾರಕಿಹೊಳಿ ಮತ್ತು ಮಹೇಶ್​ ಕುಮಟಳ್ಳಿ ಅವರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು.

ಇಂದು ಬೆಳಗ್ಗೆ 11 ಗಂಟೆಗೆ ಈಗಲ್ಟನ್​ ರೆಸಾರ್ಟ್​ನಲ್ಲಿಯೇ ಕಾಂಗ್ರೆಸ್​ ಶಾಸಕಾಂಗ ಸಭೆ ನಡೆಯಲಿದೆ. ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಸಿಎಲ್​ಪಿ ಸಭೆ ಕರೆದಿರುವ ಸಿದ್ದರಾಮಯ್ಯನವರ ನಡೆಯ ಬಗ್ಗೆ ಕುತೂಹಲ ಮೂಡಿದೆ. ಇಂದಿನ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕಾಂಗ ಸಭೆ; ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕಮಟಳ್ಳಿಗೆ ನೋಟಿಸ್​​!ಕಡಿಮೆಯಾಗಿಲ್ಲ ಟೆನ್ಷನ್:

ಬಿಜೆಪಿ ಶಾಸಕರು ಗುರುಗ್ರಾಮದಿಂದ ವಾಪಾಸ್ ಬಂದಿದ್ದರೂ ಕಾಂಗ್ರೆಸ್​ ನಾಯಕರಿಗೆ ಆಪರೇಷನ್​ ಕಮಲದ ತಲೆಬಿಸಿ ಕಡಿಮೆಯಾಗಿಲ್ಲ. ಅದೇ ಕಾರಣಕ್ಕೆ ತಮ್ಮ ಶಾಸಕರನ್ನು ಈಗಲ್ಟನ್​ ರೆಸಾರ್ಟ್​ನಲ್ಲಿ ಇರಿಸಿರುವ ಕೈ ನಾಯಕರು ಇತ್ತ ಜನರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ತಮ್ಮ ಕ್ಷೇತ್ರದ ಶಾಸಕರನ್ನು ರೆಸಾರ್ಟ್​ನಲ್ಲಿಟ್ಟುಕೊಳ್ಳುವುದಕ್ಕೆ ನಾವು ಆರಿಸಿ ಕಳುಹಿಸಿದ್ದಾ? ಎಂದು ಜನರು ಮಾಧ್ಯಮಗಳಲ್ಲಿ ಆಕ್ರೋಶದ ನುಡಿಗಳನ್ನಾಡುತ್ತಿದ್ದಾರೆ. ಇದನ್ನು ನೋಡಿದ ರಾಜ್ಯ ಕಾಂಗ್ರೆಸ್​ ನಾಯಕರು ಶಾಸಕರನ್ನು ಅವರವರ ಕ್ಷೇತ್ರಗಳಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಭೆಗೆ ಗೈರಾದವರಿಗೆ ಶೀಘ್ರದಲ್ಲೇ ನೋಟೀಸ್; ಈಗಲ್ಟನ್ ರೆಸಾರ್ಟ್​ಗೆ ಕೈ ಪಾಳಯದ ಶಾಸಕರು

ಆದರೆ, ರೆಸಾರ್ಟ್​ನಲ್ಲಿರುವ ಶಾಸಕರನ್ನು ಹೊರಗೆ ಕಳುಹಿಸಿಕೊಟ್ಟರೆ ಮತ್ತೆ ಅವರನ್ನು ಬಿಜೆಪಿ ತನ್ನತ್ತ ಸೆಳೆಯಬಹುದು ಎಂದು ಆತಂಕವೂ ಕಾಡುತ್ತಿದೆ. ಹೀಗಾಗಿ, ಶಾಸಕರನ್ನು ಈಗ ಹೊರಗೆ ಕಳುಹಿಸೋದಾ ಅಥವಾ ಬೇಡವಾ ಎಂಬ ಚಿಂತೆ ಕಾಂಗ್ರೆಸ್​ ನಾಯಕರಿಗೆ ಎದುರಾಗಿದೆ. ಕಳೆದ ರಾತ್ರಿ ಸಭೆ ನಡೆಸಿದರೂ ಶಾಸಕರನ್ನು ಹೊರಗೆ ಕಳುಹಿಸುವ ಬಗ್ಗೆ ಕಾಂಗ್ರೆಸ್​ ನಾಯಕರು  ಏನೂ ತೀರ್ಮಾನ ಮಾಡಿಲ್ಲ. ಇಂದು ಸಿಎಲ್​ಪಿ ಸಭೆಯಲ್ಲಿ ಆ ಬಗ್ಗೆ ಚರ್ಚಿಸಿ ಶಾಸಕರನ್ನು ರೆಸಾರ್ಟ್​ನಿಂದ ಹೊರಗೆ ಕಳುಹಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

First published: January 21, 2019, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading