• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಪಾಪದ ಹಣದಲ್ಲಿ ಆಪರೇಷನ್​ ಕಮಲ; ಜೆಡಿಎಸ್​ಗೆ ನನ್ನನ್ನು ಕಂಡ್ರೆ ಭಯ- ಸಿದ್ದರಾಮಯ್ಯ

Siddaramaiah: ಪಾಪದ ಹಣದಲ್ಲಿ ಆಪರೇಷನ್​ ಕಮಲ; ಜೆಡಿಎಸ್​ಗೆ ನನ್ನನ್ನು ಕಂಡ್ರೆ ಭಯ- ಸಿದ್ದರಾಮಯ್ಯ

ಮಾಜಿ  ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಆಪರೇಷನ್ ಕಮಲ ಶುರು ಮಾಡಿದವರೇ ಅವರು. ಆಪರೇಷನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡ್ತಾರೆ. ಬಿಜೆಪಿ ಅವರು ಲೂಟಿ ಮಾಡಿರೋ ಹಣವನ್ನು ಈಗ ಬಳಸುತ್ತಿದ್ದಾರೆ. 25 ರಿಂದ 30 ಕೋಟಿ ಹಣ ಒಬ್ಬ ಶಾಸಕರಿಗೆ ಕೊಡ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

  • Share this:

ಕೊಪ್ಪಳ (ಜೂ 27): ಆಪರೇಷನ್ ಕಮಲ (Operation Kamala) ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ರು. ಇವರೆಲ್ಲಾ ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಾತಾಡ್ತಾರೆ. ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಇರೋ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಆಪರೇಷನ್ ಕಮಲವೇ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು, ಇಂದಿರಾ ಗಾಂಧಿ (Indira Gandhi) ತುರ್ತು ಪರಿಸ್ಥಿತಿ ತಂದಿರೋದು ಪ್ರಜಾಪ್ರಭುತ್ವಕ್ಕೆ ಮಾರಕ ಅಂತಾರೆ. ಹಾಗಾದ್ರೆ ಇವರೇನು ಮಾಡ್ತಿರೋದು. ಮಧ್ಯಪ್ರದೇಶ ಸರ್ಕಾರವನ್ನು ಕಿತ್ತು ಹಾಕಿದವರು ಯಾರು? ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಿದವರು ಯಾರು? ಆಪರೇಷನ್ ಕಮಲ ಶುರು ಮಾಡಿದವರು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.


ಆಪರೇಷನ್ ಕಮಲ ಶುರು ಮಾಡಿದವರೇ ಅವ್ರು


ರಾಜ್ಯದಲ್ಲಿ ಆಪರೇಷನ್ ಕಮಲ ಶುರು ಮಾಡಿದವರೇ ಅವರು. ಆಪರೇಷನ್ ಕಮಲಕ್ಕೆ ಪಾಪದ ಹಣ ಖರ್ಚು ಮಾಡ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿಜೆಪಿ ಅವರು ಲೂಟಿ ಮಾಡಿರೋ ಹಣವನ್ನು ಬಳಸುತ್ತಿದ್ದಾರೆ. 25 ರಿಂದ 30 ಕೋಟಿ ಹಣ ಒಬ್ಬ ಶಾಸಕರಿಗೆ ಕೊಡ್ತಾರೆ, ಇದೆಲ್ಲಾ ಲೂಟಿ ಮಾಡಿದ ಹಣ, ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್​ ಆರೋಪ ಮಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ಬಿಜೆಪಿ ಬಳಿ ದುಡ್ಡಿದೆ, ಅಧಿಕಾರ ಇದೆ


ಎಲ್ಲಾ ಇಲಾಖೆಯಲ್ಲೂ ಅಕ್ರಮ ನಡೆಯುತ್ತಿದೆ. ಶಿವಸೇನೆಯವರು ಹೊರಗಡೆ ಹೋಗಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇಲ್ಲೂ ನಮ್ಮವರೇ ಹೋಗಿದ್ರು, ಅದಕ್ಕೆ ಬಿಜೆಪಿಯವರು ಕಾರಣ ಅಲ್ವಾ ಎಂದು ಸಿದ್ದು ಪ್ರಶ್ನೆ ಮಾಡಿದ್ರು. ಬಿಜೆಪಿ ಬಳಿ ದುಡ್ಡಿದೆ, ಅಧಿಕಾರ ಇದೆ ಹಾಗಾಗಿ ಅವರು ಎಲ್ಲಾ ಕಡೆ ಆಪರೇಷನ್ ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಇದನ್ನೂ ಓದಿ: Selfie Suicide: ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! ಸೆಲ್ಫಿ ವಿಡಿಯೋ ಮಾಡಿ ಸೂಸೈಡ್‌


ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ


ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತೀನಿ ಎಂದು ಹೇಳಿಕೆ ನೀಡಿರೋ ವಿಚಾರಕ್ಕೆ ಸಂಬಂಧಿಸಿದ ಸಿದ್ದರಾಮಯ್ಯ, ಸಿಎಂ ಸ್ಥಾನ ನಿರ್ಧರಿಸೋದು ಜನ, ಜನರೇ ಆಶೀರ್ವಾದ ಮಾಡೋದು, ನಾನೇ ಸಿಎಂ ಆಗ್ತಿನಿ ಎಂದು ಕೂರೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ರು. ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನಕ್ಕೆ ಹೋಗಿದೆ. ಅಂತಹ ಪಾರ್ಟಿ ಅಧಿಕಾರಕ್ಕೆ ಬರುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ನನ್ನ ಕಂಡ್ರೆ RSS ನವರಿಗೆ ಭಯ ಎಂದ ಸಿದ್ದರಾಮಯ್ಯ


ಇನ್ನು ನನ್ನ ಕಂಡ್ರೆ RSS ನವರಿಗೆ ಭಯ ಎಂದು ಮತ್ತೆ ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ  JDS ನವರಿಗೂ ನನ್ನ ಕಂಡ್ರೆ ಭಯ ಹಾಗಾಗಿ ಅವರು ನನ್ನ ಟಾರ್ಗೆಟ್ ಮಾಡ್ತಾರೆ ಎಂದ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.


ಮಹಾರಾಷ್ಟ್ರದಲ್ಲಿ ಅಪರೇಷನ್​ ಕಮಲ ನಡೆದಿಲ್ಲ


ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಆಪರೇಷನ್ ಕಮಲ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಮುರುಗೇಶ ನಿರಾಣಿ, ಮೊದಲು ಅವರು ಸರ್ಕಾರ ಮಾಡಿದ್ದೇ ತಪ್ಪಾಗಿದೆ ಎಂದಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಎನ್ ಸಿ ಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ಮಾಡಿದಾಗಲೇ ಗೊತ್ತಾಗಿತ್ತು, ಇದು ಕೋಮಾದಲ್ಲಿರುವ ಸರ್ಕಾರ, ಬಹಳ‌ ದಿನ ನಡೆಯೋದಿಲ್ಲ‌ ಎಂದು. ಆ ಸರ್ಕಾರ ಇಲ್ಲಿಯವರೆಗೂ ನಡೆದಿದ್ದೇ ದೊಡ್ಡ ವಿಷಯ ಎಂದರು.


ಮಹಾರಾಷ್ಟ್ರದಲ್ಲಿ ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿದೆ. ಮೂರು ಪಕ್ಷಗಳು ಚುನಾವಣೆಗೆ ಹೋಗಿದ್ದ ವೇಳೆ ಅವರ ಸಿದ್ಧಾಂತಗಳು, ಪ್ರಣಾಳಿಕೆಗಳು ಬೇರೆ ಬೇರೆ ಆಗಿದ್ದವು. ಹಾಗಾಗಿ, ಅವರೆಲ್ಲ ಸೇರಿ ಸರ್ಕಾರ ನಡೆಸಿದ್ದೇ ತಪ್ಪಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ: IKEA Bengaluru: ಐಕಿಯ ಫರ್ನಿಚರ್ ಸ್ಟೋರ್​ಗೆ ಹರಿದು ಬರ್ತಿದೆ ಜನಸಾಗರ; ನಾಗಸಂದ್ರ ಬಳಿ ಫುಲ್ ಟ್ರಾಫಿಕ್, ಸ್ಥಳೀಯರಿಗೆ ಕಿರಿಕಿರಿ


ತಮ್ಮ ತಮ್ಮಲ್ಲಿನ ಒಡಕಿನಿಂದ ಅವರು ಹೊರಗಡೆ ಹೋಗ್ತಿದ್ದಾರೆ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲ. ಬಿಜೆಪಿಯಿಂದ ಆಪರೇಷನ್ ಕಮಲ ಮಾಡಿಲ್ಲ. ಐವತ್ತರಷ್ಟು ಜನ್ರಿಗೆ ಆಪರೇಷನ್ ಕಮಲ ಮಾಡೋಕೆ ಸಾಧ್ಯವಿಲ್ಲ. ಹೇಗೆ ಸಾಧ್ಯ?. ತಮ್ಮಲ್ಲೇ ಒಪ್ಪಿಗೆ ಇಲ್ಲದಕ್ಕೆ ಅವರು ಹೊರಗಡೆ ಬಂದಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದು ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು