ಕೊರೋನಾ ರೋಗಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ; ಸಿದ್ದರಾಮಯ್ಯ ಮನವಿ

ಕೊರೋನಾ ವಿರುದ್ಧ ದೇಶವಿಡೀ ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ- ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Sushma Chakre | news18-kannada
Updated:April 1, 2020, 12:45 PM IST
ಕೊರೋನಾ ರೋಗಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ; ಸಿದ್ದರಾಮಯ್ಯ ಮನವಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
  • Share this:
ಬೆಂಗಳೂರು (ಏ. 1): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಒಂದೇ ಧರ್ಮದವರು ಹೆಚ್ಚಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಅದರಲ್ಲೂ ದೆಹಲಿಯ ನಿಜಾಮುದ್ದೀನ್​ನ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಿಂದ 10 ಜನ ಸಾವನ್ನಪ್ಪಿ, ನೂರಾರು ಜನರಿಗೆ ಸೋಂಕು ಖಚಿತವಾಗಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸಿ, 4 ಸಾವಿರ ಜನರನ್ನು ಸೇರಿಸಿ, ಸಭೆ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ, ದೆಹಲಿ ಅಧಿಕಾರಿಗಳು ಆ ಕಾರ್ಯಕ್ರಮ ನಿಯೋಜನೆಗೆ ಪರವಾನಗಿ ಏಕೆ ನೀಡಿದರೆಂಬ ವಾದ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, 'ಯಾವುದೇ ರೋಗಕ್ಕೆ ಜಾತಿ- ಧರ್ಮಗಳು ಇರುವುದಿಲ್ಲ. ಕೊರೋನಾ ವೈರಸ್ ಅನ್ನು ಕೂಡ ಜಾತಿ- ಧರ್ಮದ ಪೂರ್ವಗ್ರಹಗಳಿಲ್ಲದೆ ಎದುರಿಸಬೇಕು. ಕೊರೋನಾ ವಿರುದ್ಧ ದೇಶವಿಡೀ ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ- ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿರೋಣ' ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಈ ಟ್ವೀಟ್​ಗೆ ಟ್ವಿಟ್ಟರ್​ನಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ನಿಜಾಮುದ್ದೀನ್​ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಒಟ್ಟು 300 ಮಂದಿ ಪಾಲ್ಗೊಂಡಿದ್ದರು. ಆರೋಗ್ಯ ಇಲಾಖೆ ಈ 300 ಜನರ ಮಾಹಿತಿ ಪಡೆದಿದೆ. ಇವರಲ್ಲಿ 40 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್​ ಮಾಡಲಾಗುತ್ತಿದೆ. ಸದ್ಯ ಈ 40 ಜನರ ಪೈಕಿ 12 ಮಂದಿಯ ವರದಿಯಲ್ಲಿ ನೆಗೆಟಿವ್ ಇರುವುದು ದೃಢಪಟ್ಟಿದೆ

ಇದನ್ನೂ ಓದಿ: ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ 12 ಜನರ ವರದಿ ನೆಗೆಟಿವ್
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading