HOME » NEWS » State » CONGRESS LEADER SIDDARAMAIAH ANGRY ON CM BS YEDIYURAPPA GOVERNMENT IN BANGALORE SCT

ಸಂಪತ್ ರಾಜ್ ಎಲ್ಲಿ ಅಡಗಿದ್ದಾರೆಂದು ನಾವು​ ಹುಡುಕಬೇಕಾ?; ಸರ್ಕಾರಕ್ಕೆ ಸಿದ್ದರಾಮಯ್ಯ ಲೇವಡಿ

ಸಂಪತ್ ರಾಜ್ ಎಲ್ಲೋ ಬಚ್ಚಿಟ್ಟುಕೊಂಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ, ಪೊಲೀಸರು ಇರೋದು ಯಾಕೆ? ಸರ್ಕಾರ ಇರೋದು ಯಾಕೆ? ಅವರ ಕೆಲಸವನ್ನು ಪ್ರತಿಪಕ್ಷದ ನಾಯಕರು, ಕಾಂಗ್ರೆಸ್​ನವರು ಮಾಡಬೇಕಾ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

news18-kannada
Updated:November 12, 2020, 3:34 PM IST
ಸಂಪತ್ ರಾಜ್ ಎಲ್ಲಿ ಅಡಗಿದ್ದಾರೆಂದು ನಾವು​ ಹುಡುಕಬೇಕಾ?; ಸರ್ಕಾರಕ್ಕೆ ಸಿದ್ದರಾಮಯ್ಯ ಲೇವಡಿ
ಸಿದ್ದರಾಮಯ್ಯ
  • Share this:
ಬೆಂಗಳೂರು (ನ. 12): ಬೆಂಗಳೂರಿನ ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆಯ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರೇ ಹುಡುಕಬೇಕು. ಅವರ ಕೆಲಸವನ್ನು ನಾನಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಮಾಡಲು ಸಾಧ್ಯವೇ? ಪೊಲೀಸರು ಯಾವುದೋ ನೆಪ ಹೇಳಿ ಸುಮ್ಮನೆ ತಪ್ಪಿಸಿಕೊಳ್ಳುತ್ತಿದ್ದಾರೆ. ಸಂಪತ್ ರಾಜ್ ಎಲ್ಲಿ ಅಡಗಿದ್ದಾರೆಂಬುದನ್ನು ಸರ್ಕಾರ ಪತ್ತೆ ಹಚ್ಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಅವರನ್ನು ಹುಡುಕಲು ತಿಂಗಳುಗಳಿಂದ ಪೊಲೀಸರು ಪ್ರಯತ್ನಿಸುತ್ತಿದ್ದರೂ ಇನ್ನೂ ಅವರ ಸುಳಿವು ಸಿಕ್ಕಿಲ್ಲ. ಅವರನ್ನು ಪತ್ತೆಹಚ್ಚಲು ಪೊಲೀಸ್ ತಂಡವನ್ನು ಕೂಡ ರಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸಂಪತ್ ರಾಜ್ ಎಲ್ಲೋ ಬಚ್ಚಿಟ್ಟುಕೊಂಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ, ಪೊಲೀಸರು ಇರೋದು ಯಾಕೆ? ಸರ್ಕಾರ ಇರೋದು ಯಾಕೆ? ಪೊಲೀಸರು ಎಲ್ಲಿದ್ದಾರೆ? ಪೊಲೀಸರು ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳೋದು ಸರಿಯಲ್ಲ. ಸಂಪತ್ ರಾಜ್ ಎಲ್ಲಿದ್ದಾರೆ ಅಂತ ಪೊಲೀಸರು ಹುಡುಕಬೇಕು, ಅವರನ್ನು ಪತ್ತೆ ಹಚ್ಚಬೇಕು. ಆ ಕೆಲಸವನ್ನು ಪ್ರತಿಪಕ್ಷದ ನಾಯಕರು, ಕಾಂಗ್ರೆಸ್​ನವರು ಮಾಡಬೇಕಾ? ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆಯಲ್ಲಿ ಈ ವರ್ಷ ಹೊಸ ವರ್ಷಾಚರಣೆ ನಿಷೇಧ

ಉಪಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲಿನ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಈ ಹಿಂದೆ ನಾವು ಉಪಚುನಾವಣೆಯಲ್ಲಿ ಗೆದ್ದಿದ್ದೆವಲ್ಲ. ಆಗ ಬಿಜೆಪಿ ಏನಾದರೂ ಮುಳುಗಿ ಹೋಗಿತ್ತಾ? ಯಾವಾಗಲು ಅಧಿಕಾರ ಇದ್ದ ಪಕ್ಷವೇ ಉಪಚುನಾವಣೆಯಲ್ಲಿ ಗೆಲ್ಲುತ್ತದೆ. ಪ್ರಚಾರಕ್ಕೆ ಹೋದಾಗ ನಮಗೆ ಯಶವಂತಪುರದಲ್ಲಿ ರೌಡಿಗಳು ಅಡ್ಡ ಹಾಕಲಿಲ್ವಾ? ಆಗ ಪೊಲೀಸರು ಸುಮ್ಮನೆ ನೋಡುತ್ತಾ ಇರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ತೇರದಾಳ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯೆಯನ್ನು ಎಳೆದಾಡಿದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಒಬ್ಬ ಶಾಸಕನಾಗಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದು ಸರಿಯೇ? ಮಹಿಳೆಯರ ಮೇಲಿನ ದೌರ್ಜನ್ಯ ಮಾಡುವುದು ಅಪರಾಧ. ನೀವೆಲ್ಲರೂ ವಿಡಿಯೋ ಕ್ಲಿಪ್ಪಿಂಗ್ಸ್ ನೋಡಿದ್ದೀರಿ. ಶಾಸಕನೇ ಮಹಿಳೆಯನ್ನು ಹಿಡಿದುಕೊಂಡು ಎಳೆದಿದ್ದಾನೆ. ಹೆಣ್ಣುಮಕ್ಕಳ ಮೇಲೆ ಇಂತಹ ದೌರ್ಜನ್ಯ ಮಾಡುವುದನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವೇ? ನಾವು ಸುಸಂಸ್ಕೃತರು ಅಂತ ಬಿಜೆಪಿಯವರು ಹೇಳ್ತಾರೆ. ಇದೇನಾ ಬಿಜೆಪಿಯವರ ಸಂಸ್ಕೃತಿ? ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಪಕ್ಷ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದಿದ್ದಾರೆ.
Published by: Sushma Chakre
First published: November 12, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading