news18-kannada Updated:January 27, 2021, 7:20 PM IST
ಮಾಜಿ ಸಚಿವ ಸತೀಶ್ ಜಾರಕಿಹೊಳಿ
ಯಾದಗಿರಿ (ಜ. 27): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ರಾಜ್ಯದಲ್ಲಿ ಯಾವುದೇ ಜನಪರ ಕಾಳಜಿ ತೊರಿ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಸಿಎಂ ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಚಿವರ ಓಲೈಕೆ ಮಾಡಲು ಖಾತೆ ಬದಲಾವಣೆ ಸರ್ಕಸ್ ನಡೆಸುತ್ತಿದ್ದಾರೆ. ಅವರಿಗೆ ಜನರ ಬಗ್ಗೆಯಾಗಲಿ, ಸರ್ಕಾರದ ಬಗ್ಗೆಯಾಗಲಿ ಕಾಳಜಿ ಇಲ್ಲ. ಅವರ ಕಾಳಜಿ ಏನಿದ್ದರೂ ಸಚಿವರ ಬಗ್ಗೆ. ಬಿಎಸ್ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಶಹಾಪುರದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಶಾಸಕರು ಅಸಮಾಧಾನ ಗೊಂಡಿದ್ದಾರೆ. ಸಚಿವರು ಖಾತೆ ಹಂಚಿಕೆ ವಿಚಾರದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದು, ಸರಕಾರದಲ್ಲಿ ಯಾವುದೇ ಹೀಡಿತವಿಲ್ಲ. ಮಂತ್ರಿ ಮಂಡಲ ರಚನೆ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಆಗುತ್ತಿಲ್ಲ.ಬಿಜೆಪಿ ಸರಕಾರದಲ್ಲಿ ಭ್ರಷ್ಟಚಾರದ ಮಿತಿ ಮಿರಿದೆ. ಇದೊಂದು ವೈಫಲ್ಯದ ಸರಕಾರ ಆಗಿದೆ ಎಂದು ಆರೋಪಿಸಿದ್ದಾರೆ.
ಬಿಸಿ ಪಾಟೀಲಗೆ ಟಾಂಗ್ ...!ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಹರಿಹಾಯ್ದ ಅವರು, ಭಯೋತ್ಪಾದಕರಿಗೆ ಹಾಗೂ ರೈತರಿಗೆ ಏನು ಸಂಬಂಧ ಜವಾಬ್ದಾರಿ ಕೃಷಿ ಸಚಿವರಾಗಿ ಆ ರೀತಿ ಹೇಳಿಕೆ ನೀಡಬಾರದು. ಕಾಂಗ್ರೆಸ್ ಪಕ್ಷವು ಯಾವಾಗಲೂ ದೇಶದ ರೈತರ, ಬಡವರ, ಕಾರ್ಮಿಕರ ಪರವಾಗಿ ಇದೆ. ಈ ವಿಚಾರದಲ್ಲಿ ರೈತರಿಗೆ ಸದಾ ಬೆಂಬಲವಾಗಿ ಕಾಂಗ್ರೆಸ್ ನಿಲ್ಲುತ್ತದೆ .ನಿನ್ನೆ ದೆಹಲಿಯಲ್ಲಿ ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರುದ್ಧ ರೈತರು ಹೋರಾಟ ನಡೆಸಿ ಕೇಂದ್ರ ವಿರುದ್ಧ ರಾಷ್ಟ್ರಮಟ್ಟದ ಬೃಹತ್ ಟ್ರಾಕ್ಟರ್ ಪರೇಡ್ ನಡೆಸಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಆದರೆ, ಹಿಂಸಾಚಾರ ನಡೆಸಿದವರೇ ಪ್ರತಿಭಟನೆ ನಡೆಸಿದ ರೈತರು ಬೇರೆಯಾಗಿದ್ದಾರೆ. ನಿಜವಾದ ರೈತರು ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆಂದರು .ಕೇಂದ್ರ ಸರಕಾರ ರೈತರ ವಿರೋಧಿ ಧೋರಣೆ ತಾಳಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತ ಪರ ಕಾಳಜಿ ತೊರದೆ ಕಾರ್ಪೊರೇಟ್ ಪರ ನಿಲುವು ತಾಳಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ರೈತ ಪರ ಕಾಳಜಿ ತೊರಬೇಕಿದೆ ಎಂದರು.
ಟಿಕೆಟ್ ಆಕಾಂಕ್ಷಿ...!
ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ನಿಧನ ನಂತರ ತೆರವಾದ ಅವರ ಸ್ಥಾನದ ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಲೋಕಸಭಾ ಚುನಾವಣೆ ನಿಗದಿಯಾದರೆ, ನಾನು ಕೂಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿ. ಈಗಾಗಲೇ ಕಾಂಗ್ರೆಸ್ ಪಕ್ಷದ ಪಟ್ಟಿಯಲ್ಲಿ ನನ್ನ ಹೆಸರಿನ ಇದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿರುತ್ತೆನೆಂದರು.
Published by:
Seema R
First published:
January 27, 2021, 7:20 PM IST