• Home
 • »
 • News
 • »
 • state
 • »
 • Karnataka Politics: ಯಡಿಯೂರಪ್ಪನವರಿಗೆ ಅವರದೇ ಆದ ಸ್ಥಾನಮಾನವಿದೆ, ಅವರು ಹೀಗೆ ಮಾತನಾಡಬಾರದು: ಜಾರಕಿಹೊಳಿ

Karnataka Politics: ಯಡಿಯೂರಪ್ಪನವರಿಗೆ ಅವರದೇ ಆದ ಸ್ಥಾನಮಾನವಿದೆ, ಅವರು ಹೀಗೆ ಮಾತನಾಡಬಾರದು: ಜಾರಕಿಹೊಳಿ

ಬಿ. ಎಸ್.ಯಡಿಯೂರಪ್ಪ

ಬಿ. ಎಸ್.ಯಡಿಯೂರಪ್ಪ

ಮೀಸಲಾತಿ ಕುರಿತು ವಾಲ್ಮೀಕಿ ಸ್ವಾಮೀಜಿ ಧರಣಿ ಇನ್ನೂ ಮುಂದುವರೆದಿದೆ, ಸರ್ಕಾರ ಮೊದಲು ಅದಕ್ಕೆ ಉತ್ತರ ಕೊಡಲಿ, ಬಿಜೆಪಿಯವರು ಸಿಹಿ ಹಂಚಲು ನಂಬರ್ ಒನ್. ಕಷ್ಟ, ಸುಖದಲ್ಲೂ ಹಾಗೆ ಮಾಡುತ್ತದೆ. ಸ್ವಾಮೀಜಿಯವರ 240 ದಿವಸಗಳ ಧರಣಿಯ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾಕಷ್ಟು ಸಲ ಸದನದಲ್ಲಿ ಒತ್ತಾಯ ಮಾಡಿದ್ರೂ ಸರ್ಕಾರ ಉತ್ತರ ಕೊಟ್ಟಿರಲಿಲ್ಲ. ಆದರೆ ಈಗ ವಾಲ್ಮೀಕಿ ಜಯಂತಿ ಬಹಿಷ್ಕಾರಕ್ಕೆ ಹೆದರಿ ತರಾತುರಿ ಘೋಷಣೆ ಮಾಡಿದೆ

ಮುಂದೆ ಓದಿ ...
 • News18 Kannada
 • Last Updated :
 • Chitradurga, India
 • Share this:

  ಚಿತ್ರದುರ್ಗ(ಅ.14): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Shivakumar), ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Frmer Chief Minister Siddaramaiah) ಅವರದು ಇಂಟರ್ನಲ್ ಸಮಸ್ಯೆ, ಯಾವ ಪಕ್ಷದಲ್ಲಿ ಬಿರುಕಿಲ್ಲ, ಹೇಳಿ ನೋಡೋಣ, ಯಡಿಯೂರಪ್ಪನವರನ್ನು (BS Yediyurappa) ಬಿಜೆಪಿ ಏಕೆ ತೆಗೆಯಿತು?, ಇಂಟರ್ನಲ್ ಸಮಸ್ಯೆ, ಬಗೆಹರಿಸಿಕೊಳ್ಳಲು ಸಮಯವಿದೆ, ಎಲ್ಲಾ ಪಕ್ಷದಲ್ಲಿ ಸಮಸ್ಯೆ ಇದ್ದೇ ಇರುತ್ತದೆ, ಸಂದರ್ಭಕ್ಕನುಗುಣವಾಗಿ ಸರಿ ಹೋಗುತ್ತೆ ಎಂದು ಮಾಜಿ ಸಚಿವ, KPCC ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ - ಸಿದ್ದರಾಮಯ್ಯ ನಡುವೆ ಬಿರುಕಿದೆ ಎಂಬ ಮಾತಿಗೆ ಪುಷ್ಟಿ ನೀಡಿದ್ದಾರೆ.


  ಚಿತ್ರದುರ್ಗ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.  ಇದಾದ ಬಳಿಕ ಬಳಿಕ ಸಚಿವ ಬಿ. ಶ್ರೀರಾಮುಲು ಮಾತನಾಡಿ ರಾಹುಲ್ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಮಟಾಶ್ ಆಗುತ್ತದೆ ಎಂಬ  ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸತೀಶ್​ ಜಾರಕಿಹೊಳಿ ​​ ಶ್ರೀರಾಮುಲು ಅವರದು ಇತಿಹಾಸ ಏನು? ಮೋದಿ ಹೋದಲ್ಲೆಲ್ಲಾ ಗೆಲ್ಲಲಿಕ್ಕಾಗುತ್ತಾ?,  ಬಿಜೆಪಿಯವರು ಮೋದಿ, ಯಡಿಯೂರಪ್ಪ ಹೋದಲ್ಲೆಲ್ಲಾ ಗೆದ್ದಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.


  ಇದನ್ನೂ ಓದಿ: DK Shivakumar: ಡಿಕೆಶಿ ಮನವಿಯನ್ನು ತಿರಸ್ಕರಿಸಿ ಶಾಕ್ ಕೊಟ್ಟ ED


  224 ಶಾಸಕ ಸ್ಥಾನವನ್ನು ಯಾರೂ ಗೆದ್ದಿಲ್ಲ


  ಅಲ್ಲದೇ ಗೆಲುವು-ಸೋಲು ಇದ್ಧದ್ದೇ. ಹೋದಲ್ಲೆಲ್ಲಾ ಗೆಲ್ಲಲು ಆಗುವುದಿಲ್ಲ. ರಾಜ್ಯದಲ್ಲಿರುವ 224 ಶಾಸಕ ಸ್ಥಾನವನ್ನು ಇದುವರೆಗೆ ಯಾರೂ ಕೂಡ ಗೆದ್ದಿಲ್ಲ, ಎಲ್ಲರೂ 120 ರಿಂದ 25 ಸ್ಥಾನಗಳನ್ನ ಮಾತ್ರ ಗೆದ್ದಿದಾರೆ ಎಂದು ಜಾರಕಿಹೊಳಿ ಟಾಂಗ್ ನೀಡಿದ್ರು.


  ಸ್ವಾಮೀಜಿಯವರ 240 ದಿವಸಗಳ ಧರಣಿಯ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ


  ಇದೇ ವೇಳೆ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ 7.5 ಮೀಸಲಾತಿ ಹೋರಾಟದ ವಿಚಾರ ಕುರಿತು ಸಚಿವ ಶ್ರೀರಾಮುಲು ಹೇಳಿಕೆ ಕುರಿತು ಮಾತನಾಡಿದ ಸತೀಶ್​​ ಜಾರಕಿಹೊಳಿ ಮೀಸಲಾತಿ ಕುರಿತು ವಾಲ್ಮೀಕಿ ಸ್ವಾಮೀಜಿ ಧರಣಿ ಇನ್ನೂ ಮುಂದುವರೆದಿದೆ, ಸರ್ಕಾರ ಮೊದಲು ಅದಕ್ಕೆ ಉತ್ತರ ಕೊಡಲಿ, ಬಿಜೆಪಿಯವರು ಸಿಹಿ ಹಂಚಲು ನಂಬರ್ ಒನ್. ಕಷ್ಟ, ಸುಖದಲ್ಲೂ ಹಾಗೆ ಮಾಡುತ್ತದೆ. ಸ್ವಾಮೀಜಿಯವರ 240 ದಿವಸಗಳ ಧರಣಿಯ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾಕಷ್ಟು ಸಲ ಸದನದಲ್ಲಿ ಒತ್ತಾಯ ಮಾಡಿದ್ರೂ ಸರ್ಕಾರ ಉತ್ತರ ಕೊಟ್ಟಿರಲಿಲ್ಲ. ಆದರೆ ಈಗ ವಾಲ್ಮೀಕಿ ಜಯಂತಿ ಬಹಿಷ್ಕಾರಕ್ಕೆ ಹೆದರಿ ತರಾತುರಿ ಘೋಷಣೆ ಮಾಡಿದೆ ಎಂದಿದ್ದಾರೆ.


  ಇದೇ ವೇಳೆ ಕಾನೂನು ತೊಡಕಿನ ಬಗ್ಗೆಯೂ ಮಾತನಾಡಿದ ಸತೀಶ್​ ಜಾರಕಿಹೊಳಿ ಇನ್ನೂ ಬಹಳಷ್ಟು ಕಾನೂನು ತೊಡಕಿದೆ. ಅದನ್ನು ಅವರು ಮಾಡಿಕೊಡಲಿ, ಇದು ಅವರೊಬ್ಬರೇ ಮಾಡಿದ್ದು ಎನ್ನುವುದನ್ನು ನಾವು ಒಪ್ಪಲು ತಯಾರಿಲ್ಲ. ಸ್ವಾಮೀಜಿಯವರ ದೀರ್ಘ ಹೋರಾಟದಿಂದ ನ್ಯಾಯ ಸಿಕ್ಕಿದೆ ಎಂದಿದ್ದಾರೆ.


  Bharat Jodo yatra update, Bharat Jodo yatra enter karnataka, Kannada news, Congress flex War, Karnataka news, ಭಾರತ್ ಜೋಡೋ ಯಾತ್ರೆ ಅಪ್​ಡೇಟ್​, ಕಾಂಗ್ರೆಸ್​ ಫ್ಲೆಕ್ಸ್​​ಗಳಿಗೆ ಬ್ಲೇಡ್, Jana Sankalpa Yatre Plan, BJP Jana Sankalpa Yatre, BJP Jana Sankalpa Yatre details, Bharat Jodo Yatre details,ಬಿಜೆಪಿ ಜನಸಂಕಲ್ಪ ಯಾತ್ರೆ ವಿವರ, ಜನಸಂಕಲ್ಪ ಯಾತ್ರೆಯ ದಿನಾಂಕ


  ಯಡಿಯೂರಪ್ಪ ತಮ್ಮ ವಯಸ್ಸಿಗೆ ತಕ್ಕಂತೆ ಹೇಳುವ ಮಾತಲ್ಲ
  ಇದೇ ವೇಳೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ಕಾಲಿನ ಬಳಿ ಕೂರಲು ಯೋಗ್ಯತೆ ಇಲ್ಲ ಎಂಬ ಮಾಜಿ ಸಿಎಂ  ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಯಡಿಯೂರಪ್ಪ ತಮ್ಮ ವಯಸ್ಸಿಗೆ ತಕ್ಕಂತೆ ಹೇಳುವ ಮಾತಲ್ಲ. ಯಡಿಯೂರಪ್ಪನವರಿಗೆ ಅವರದೇ ಆದ ಸ್ಥಾನಮಾನವಿದೆ, ಇಂತಹ ಶಬ್ದಗಳು ಅವರಿಂದ ಬರಬಾರದು ಎಂದಿದ್ದಾರೆ.


  ಇದನ್ನೂ ಓದಿ: Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ


  ಯಾವ ಪಕ್ಷದಲ್ಲಿ ಬಿರುಕಿಲ್ಲ?


  ಡಿಕೆ ಶಿವಕುಮಾರ್  ಹಾಗೂ ಸಿದ್ದರಾಮಯ್ಯ ಕುರಿತಾಗಿ ಶ್ರೀರಾಮುಲು ನೀಡಿದ ಹೇಳಿಕೆಯನ್ನೂ ವಿರೋಧಿಸಿದ ಅವರು ಇದು ಅವರ ಇಂಟರ್ನಲ್ ಸಮಸ್ಯೆ, ಇದನ್ನು ಬಹರಿಸಿಕೊಳ್ಳಲು ಸಮಯವಿದೆ. ಯಾವ ಪಕ್ಷದಲ್ಲಿ ಬಿರುಕಿಲ್ಲ, ಹೇಳಿ ನೋಡೋಣ. ಯಡಿಯೂರಪ್ಪನವರನ್ನು ಬಿಜೆಪಿ ಏಕೆ ತೆಗೆಯಿತು? ಎಲ್ಲ ಪಕ್ಷದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಸಂದರ್ಭಕ್ಕನುಗುಣವಾಗಿ ಸರಿ ಹೋಗುತ್ತೆ ಎಂದು ಹೇಳಿದ್ದಾರೆ.


  ವರದಿ : ವಿನಾಯಕ ತೊಡರನಾಳ್

  Published by:Precilla Olivia Dias
  First published: