ಬೆಳಗಾವಿ: ಉಪ ಮುಖ್ಯಮಂತ್ರಿ (DCM) ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲ, ಅದಕ್ಕೆ ಎಕ್ಸ್‌ಟ್ರಾ ಪವರ್ ಏನೂ ಇಲ್ಲ. ಸಮಧಾನ ಪಡಿಸಲು ಮತ್ತು ಗೌರವ ನೀಡಲು ಎರಡೂ ಇರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸೋದು ಅಥವಾ ಬಿಡೋದು ಡಿಕೆ ಶಿವಕುಮಾರ್‌ಗೆ (DK Shivakumar) ಬಿಟ್ಟ ವಿಚಾರ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಡಿಸಿಎಂ ಹುದ್ದೆಯನ್ನು ಪಡೆಯಲಿಲ್ಲ ಅಂದ್ರೆ ಮಂತ್ರಿಯಾಗಿ ಇರ್ತಾರೆ ಎಂದ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಅವರದ್ದೂ ಪಾತ್ರವಿದೆ. ಹೀಗಾಗಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸೋದು ಅಥವಾ ಬಿಡೋದು ಡಿಕೆ ಶಿವಕುಮಾರ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಮಂತ್ರಿಗಳು ಯಾರಾಗ್ತಾರೆ ಗೊತ್ತಿಲ್ಲ
ಇನ್ನು ನನಗೆ ಮಂತ್ರಿಗಳು ಯಾರಾಗ್ತಾರೆ ಎಂಬುದು ಗೊತ್ತಿಲ್ಲ ಎಂದ ಸತೀಶ್ ಜಾರಕಿಹೊಳಿ, ನನಗೆ ಜನಪರವಾದ ಮತ್ತು ಜನರ ಬಳಿ ಹೋಗುವಂತಹ ಖಾತೆ ಕೊಟ್ಟರೆ ಒಳ್ಳೆಯದು. ಇದರಿಂದ ನಮ್ಮ ಪಕ್ಷಕ್ಕೂ ಅನುಕೂಲ, ನನ್ನ ಅನುಭವಕ್ಕೂ ಗೌರವ ಸಿಗಲಿದೆ. ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದೆ. ನಮ್ಮ ಜಿಲ್ಲೆಯಿಂದ ಹನ್ನೊಂದು ಜನ ಗೆದ್ದಿದ್ದೀವಿ, ಹೀಗಾಗಿ ಬೆಳಗಾವಿ ಜಿಲ್ಲೆಗೆ ಮೂರು ಮಂತ್ರಿ ಸ್ಥಾನ ನೀಡುವಂತೆ ಡಿಮ್ಯಾಂಡ್ ಮಾಡ್ತೀವಿ ಎಂದು ಹೇಳಿದರು.
ಇದನ್ನೂ ಓದಿ: AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!
ಒಂದೇ ಕಾರ್‌ನಲ್ಲಿ ಹೊರಟ ಸಿದ್ದರಾಮಯ್ಯ- ಡಿಕೆ ಶಿವಕುಮಾರ್
ಇನ್ನು ನಿನ್ನೆ ರಾತ್ರಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆ ಶಿವಕುಮಾರ್‌ರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಕೊನೆಗೂ ಡಿಸಿಎಂ ಸ್ಥಾನಕ್ಕೆ ಡಿಕೆಶಿ ಒಪ್ಪಿದ್ದಾರೆ. ಈ ಹಿನ್ನೆಲ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಬೆಳಗಿನ ಉಪಹಾರ ಆಯೋಜಿಸಲಾಯಿತು.
ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಬ್ಬರು ನಾಯಕರಲ್ಲೂ ಮಾತಾಡಿದ ಎಐಸಿಸಿ ಅಧ್ಯಕ್ಷರು ಒಗ್ಗಟ್ಟಿನಿಂದ ಮುಂದುವರಿಯುವಂತೆ ಸೂಚಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ಮಾತನಾಡಿದ ಬಳಿಕ ಇಬ್ಬರ ಕೈಯನ್ನು ಮೇಲಕ್ಕೆತ್ತಿ ಒಗ್ಗಟ್ಟಿನ ಸಂದೇಶವನ್ನು ಖರ್ಗೆ ರವಾನಿಸಿದರು. ಆ ಬಳಿಕ ಅಲ್ಲಿಂದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ಕಾರ್‌ನಲ್ಲಿ ಪ್ರಯಾಣಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ