ನೈತಿಕತೆಯ ಹಂತ ಮುಗಿದಿದೆ. ಇನ್ನೇನಿದ್ದರೂ ಕಾನೂನು ಹೋರಾಟ; ಸತೀಶ್ ಜಾರಕಿಹೊಳಿ

ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ಕೊಟ್ಟಿದ್ದಾರೆ . ಈ ಮೂಲಕ  ನೈತಿಕತೆಯ ಒಂದು ಹಂತ ಮುಗಿದಿದೆ.  ಇನ್ನೇನಿದ್ದರೂ ಕಾನೂನು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.  ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ  ವಿಚಾರಣೆ ಮಾಡಬೇಕು

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಚಿಕ್ಕೋಡಿ (ಮಾ. 4): ಸಿಡಿ ಪ್ರಕರಣದಲ್ಲಿ ನೈತಿಕಹೊಣೆ ಹೊತ್ತು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರ ಕುರಿತು ಮೌನ ತಾಳಿದ್ದ ಕಾಂಗ್ರೆಸ್​ ನಾಯಕ ಸತೀಶ್​ ಜಾರಕಿಹೊಳಿ ಕಡೆಗೂ ಮೌನ ಮುರಿದಿದ್ದಾರೆ. ಈ ಕುರಿತು ಕೊಂಚ ಬೇಸರದಲ್ಲಿಯೇ  ಮಾತನಾಡಿರುವ ಅವರು,  ಈಗಾಗಲೇ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ಕೊಟ್ಟಿದ್ದಾರೆ . ಈ ಮೂಲಕ  ನೈತಿಕತೆಯ ಒಂದು ಹಂತ ಮುಗಿದಿದೆ.  ಇನ್ನೇನಿದ್ದರೂ ಕಾನೂನು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.  ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ  ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದರು. ರಮೇಶ್ ಜಾರಕಿಹೊಳಿ‌ ಆರೋಪ ಕೇಳಿ ಬಂದ ತಕ್ಷಣವೇ ರಾಜೀನಾಮೆ ನೀಡಬೇಕಾಗಿತ್ತು ಒಂದು ದಿನ ಕಾಯಬಾರದಾಗಿತ್ತು. ಕೂಡಲೆ ರಾಜೀನಾಮೆ ಕೊಟ್ಟಿದ್ದರೇ ಒಳ್ಳೆಯದಿತ್ತು.  ಆದಷ್ಟು ಬೇಗ ಪೊಲೀಸರು ತನಿಖೆ ಮಾಡಿ ಸತ್ಯಾಂಶ ಹೊರ ತಗೆಯಬೇಕು ಎಂದು ತಮ್ಮನ ಪರ ಪರೋಕ್ಷವಾಗಿ ಮಾತನಾಡಿದ್ದಾರೆ.

ಇನ್ನು ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇಎನ್ನುವ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಜಾರಕಿಹೊಳಿ ಕುಟುಂಬ ಎಂದು ಹೇಳಲು ಸಾಧ್ಯವಿಲ್ಲ. ಇದು ರಮೇಶ್ ಜಾರಕಿಹೊಳಿ ಯವರ ವೈಯಕ್ತಿಕ ವಿಚಾರ. ಇಲ್ಲಿ ಜಾರಕಿಹೊಳಿ‌ ಕುಟುಂಬ ಬೆರೆಸುವುದು ಅವಶ್ಯಕತೆ ಇಲ್ಲ. ಇದನ್ನ ವೈಯಕ್ತಿಕವಾಗಿಯೆ ಎಲ್ಲರೂ ನೋಡಬೇಕು ಎಲ್ಲದಕ್ಕೂ ಕುಟುಂಬ ಎಂದು ಮಾತನಾಡುವುದು ಸರಿಯಲ್ಲ. ನಾವು ಎಲ್ಲರೂ ಬೇರೆ ಬೇರೆ ಪಕ್ಷದಲ್ಲಿದ್ದೀವಿ. ಜಾರಕಿಹೊಳಿ‌ ಕುಟುಂಬಕ್ಕೆ ಹೋಲಿಸುವುದು ಸರಿಯಲ್ಲ. ನಮ್ಮ ಅಭಿಪ್ರಾಯ ಬೇರೆ, ಅವರ ಅಭಿಪ್ರಾಯ ಬೇರೆ ಎಂದಿದ್ದಾರೆ.

ಇದನ್ನು ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಸರಳ ಶಿವರಾತ್ರಿ ಜಾತ್ರೆ: ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ

ತಮ್ಮನಿಗೆ ಸಲಹೆ ನೀಡಿದ ಅಣ್ಣ

ರಮೇಶ್​ ಜಾರಕಿಹೊಳಿ ರಾಜಕೀಯವಾಗಿ ವಿರೋಧವಿದ್ದರೂ, ಒಂದೇ ಕುಟುಂಬದ ಹಿನ್ನಲೆ ಬೇಸರ ವ್ಯಕ್ತಪಡಿಸಿ ಅವರಿಗೆ ಸಲಹೆಯನ್ನು ಅವರು ಇದೇ ವೇಳೆ ತಿಳಿಸಿದ್ದಾರೆ.  ರಮೇಶ್  ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಬೇಕು. ಅವರ ಪಕ್ಷದಲ್ಲಿಯೂ ಅವರಿಗೆ ಆಗದೇ ಇರುವವರು ಇರುತ್ತಾರೆ ಎಂದು ಎಚ್ಚರಿಕೆಯಿಂದ ಇರಬೇಕಾಗಿತ್ತು. ಅವರು ಎಡವಿದ್ದಾಗ ಸಾಕಷ್ಟು ಬಾರಿ ನಾನು ಸಹ ಬುದ್ದಿ ಹೇಳಿದ್ದೆ. ನನ್ನ ಮಾತು ಕೇಳಲಿಲ್ಲ. ಯಾರ ಮಾತು ಕೇಳುವುದಿಲ್ಲ. ಅವರು ಇನ್ನು ಮುಂದೆ ಆದರೂ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ಇನ್ನು ಬಾಲಚಂದ್ರ ಜಾರಕಿಹೊಳಿ‌ ಸಿಎಂ ಭೇಟಿ ವೇಳೆ ನಮ್ಮ ಅಣ್ಣನ ರಾಜೀನಾಮೆ ಕೇಳಿದರೆ ಮುಖ್ಯಮಂತ್ರಿ ಸಿಡಿ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನನಗೆ ಐಡಿಯಾ ಇಲ್ಲ ಅವರನ್ನೆ ಕೇಳಬೇಕು ಎಂದರು.
Published by:Seema R
First published: