• Home
  • »
  • News
  • »
  • state
  • »
  • Satish Jarkoholi: ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿ ವಿಸಿ; ಸತೀಶ್​ ಜಾರಕಿಹೊಳಿ ವ್ಯಂಗ್ಯ

Satish Jarkoholi: ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿ ವಿಸಿ; ಸತೀಶ್​ ಜಾರಕಿಹೊಳಿ ವ್ಯಂಗ್ಯ

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಚಕ್ರವರ್ತಿ ಸೂಲಿಬೆಲೆ ಹೇಳಿದರಲ್ಲಿ ಒಂದೇ ಯಾವುದಾದರೂ ಹೇಳಿದ್ರ ಅವರ ಜೊತೆಗೆ ಚರ್ಚೆಗೆ ಇಳಿತೀವಿ. ಅಂತಾ ವ್ಯಕ್ತಿ ಜೊತೆ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಳಗಾವಿ (ನ.19): ಹಿಂದೂ (Hindu) ಪದದ ಅರ್ಥದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ (Satish Jarkoholi) ನೀಡಿದ್ದ ಹೇಳಿಕೆ ಸಾಕಷ್ಟು ಟೀಕೆಗೆ ಕುರಿಯಾಗಿತ್ತು. ಬಳಿಕ ಸತೀಶ ಜಾರಕಿಹೊಳಿ ಪ್ರತಿನಿಧಿಸೋ ಕ್ಷೇತ್ರದಲ್ಲಿ ಚಕ್ರವರ್ತಿ ಸೂಲೆಬೆಲೆ (Chakravarthi Sulibele) ನೇತೃತ್ವದಲ್ಲಿ ನಾನು ಹಿಂದೂ ಎನ್ನುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಹಿರಂಗ ಚರ್ಚೆಗೆ (Discussion) ಬನ್ನಿ ಎಂದು ಚಕ್ರವರ್ತಿ ಸೂಲಿಬೆಲೆ ಸವಾಲ್ ಹಾಕಿದ್ದರು.  ಸತೀಶ್​ ಜಾರಕಿಹೊಳಿ ಸೂಲಿಬೆಲೆ ಹೇಳಿಕೆಗೆ ವ್ಯಂಗ್ಯ ಮಾಡಿದ್ದಾರೆ.


ಯಾವುದನ್ನು ಫುಲ್‌ಫಿಲ್ ಮಾಡಿದ್ದಾರೆ?


ನಾವು ಚರ್ಚೆಗೆ ತಯಾರಿದೀವಿ ಆದ್ರೆ ಅವರು 10 ವರ್ಷದಲ್ಲಿ ಏನು ಹೇಳಿದ್ದಾರೆ ಅದನ್ನ ಚೆಕ್ ಮಾಡುತ್ತಿದ್ದೇವೆ. ಯಾವುದನ್ನು ಫುಲ್‌ಫಿಲ್ ಮಾಡಿದ್ದಾರೆ? ಚಿನ್ನದ ರಸ್ತೆ ಎಲ್ಲಿದೆ? ನಾವು ಹುಡುಕಬೇಕಾಗಿದೆ. ಮಂಗಳೂರಿಂದ ಬೆಂಗಳೂರಿಗೆ ಹೋಗಿ ಬೆಳಗ್ಗೆ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಮತ್ತೆ ಮಂಗಳೂರಿಗೆ ಬರಬೇಕು. ಅದನ್ನ ಹುಡುಕುತ್ತಿದ್ದೇವೆ ಎಲ್ಲಿದೆ ಅಂತಾ? ಡಾಲರ್ ಬಗ್ಗೆ ಹುಡುಕ್ತಿದ್ದೀವಿ. ಆಸ್ಪತ್ರೆಗಳನ್ನು ಲ್ಯಾಪ್‌ಟಾಪ್​ದಲ್ಲಿ ನೋಡಿ ರೋಗಿಗಳ ಕಂಡೀಷನ್ ನೋಡುವಂತದ್ದು ಎಲ್ಲಿ ಮಾಡಿದಾರೆ. ಇನ್ನೂ ಬಹಳ ಹೇಳಿದ್ದಾರೆ ಅವುಗಳನ್ನು ಸರ್ಚ್ ಮಾಡುತ್ತಿದ್ದೇವೆ.


villagers emptied water tank because a dalit woman drank the water in chamarajanagar
ಸತೀಶ್​ ಜಾರಕಿಹೊಳಿ


ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿಯ ವಿಸಿ


ಚಕ್ರವರ್ತಿ ಸೂಲಿಬೆಲೆ ಹೇಳಿದರಲ್ಲಿ ಒಂದೇ ಯಾವುದಾದರೂ ಹೇಳಿದ್ರ ಅವರ ಜೊತೆಗೆ ಚರ್ಚೆಗೆ ಇಳಿತೀವಿ. ಅಂತಾ ವ್ಯಕ್ತಿ ಜೊತೆ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ ಅಂತಾ ನನ್ನ ಹಾಗೂ ಕಾರ್ಯಕರ್ತರ ಅಭಿಪ್ರಾಯ. ನಮ್ಮ ಲೆಕ್ಕದಲ್ಲಿ ರಾಜ್ಯದಲ್ಲಿರುವ ಸುಳ್ಳಿನ ಯೂನಿವರ್ಸಿಟಿಯ ವಿಸಿ ಅವನು. ಅವನ ಜೊತೆ ನಾವು ಏನು ಚರ್ಚೆ ಮಾಡೋದು ಅಂತಾ ಪ್ರಶ್ನೆ ಬಂದಿದೆ. ಆ್ಯಟ್‌ಲಿಸ್ಟ್ ಐವತ್ತು ಪರ್ಸೆಂಟ್ ಸುಳ್ಳು ಹೇಳೋಂವ ಇದ್ರು ನಾವು ಒಪ್ತೀವಿ. 50 ಪರ್ಸೆಂಟ್ ಸುಳ್ಳು ಹೇಳುವನಿದ್ರೂ ಆತನ ಜೊತೆ ಚರ್ಚೆ ಮಾಡ್ತೀವಿ.


ಈ ಗಿರಾಕಿ ನೂರಕ್ಕೆ ಸಾವಿರ ಪಟ್ಟು ಸುಳ್ಳು ಹೇಳೋದು. ಇವರ ಜೊತೆ ನಾವ್ಯಾಕೆ ಟೈಮ್ ಪಾಸ್ ಮಾಡಬೇಕು ಅಂತ ಈ ನಿರ್ಧಾರಕ್ಕೆ ಬಂದಿದ್ದೀವಿ. ಅವನ ಬಿಟ್ಟು ಬೇರೆ ಯಾರಾದರೂ ಒಳ್ಳೆಯವರು ಬರಲಿ. ಚಿನ್ನದ ರಸ್ತೆ ಸೂಲಿಬೆಲೆ ಎಲ್ಲಿ ಮಾಡಿದಾರೆ ಅಂತಾ ಹುಡುಕುತ್ತಿದ್ದೇವೆ. ಅವರ ನೇಟಿವ್ ಮಂಗಳೂರಲ್ಲಿ ಎಲ್ಲಿ ಮಾಡಿದಾರೆ ಚೆಕ್ ಮಾಡ್ತಿದೀವಿ. ಅದು ಒಂದೇ ಕಂಡು ಬಂದ್ರೆ ಚರ್ಚೆ ಮಾಡ್ತೀವಿ ಇಲ್ಲಂದ್ರೆ ಮಾಡಲ್ಲ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ರು.


ಬೇರೆ ವೇದಿಕೆಯಲ್ಲಿ ಯತ್ನಾಳ ಟೀಕೆಗೆ ಉತ್ತರ- ಜಾರಕಿಹೊಳಿ!


ಗೋಕಾಕ್ ಪಂಚಮಸಾಲಿ ಸಮಾಜದ ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸತೀಶ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಇನ್ನೊಂದು ವೇದಿಕೆಯಲ್ಲಿ ನಾನು ಉತ್ತರ ಕೊಡ್ತಿನಿ, ಇದಕ್ಕೆ ಸಮಯ ಬೇಕಿದೆ. ಸಮಾಜದ ವೇದಿಕೆಯಲ್ಲಿ ಸ್ವಪಕ್ಷೀಯರ ಟೀಕೆ ಬಗ್ಗೆ ಟಿಪ್ಪಣಿ ಇಲ್ಲ. ಗೋಕಾಕ್ ಬಿಹಾರ್ ಆಗಿದೆ ಎಂಬುದು ಅನೇಕರು ಹೇಳಿದ್ದಾರೆ.


ಇದನ್ನೂ ಓದಿ: Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!​


ಸಾಕಷ್ಟು ವೇದಿಕೆಗಳು ಉತ್ತರ ನೀಡಬಹುದು. ಎಲ್ಲಿ ಬೈದ್ರು ಒಂದೇ ನಿಮಿಷದಲ್ಲಿ ಮುಟ್ಟುತ್ತದೆ. ಗೋಕಾಕ್, ವಿಜಯಪುರದಲ್ಲಿ ಬೈಯಬೇಕು ಅಂತ ಏನಿಲ್ಲ ಎಂದು ಮುಂದೆ ಉತ್ತರ ಕೊಡುವ ಬಗ್ಗೆ ಹೇಳಿದ್ರು.

Published by:ಪಾವನ ಎಚ್ ಎಸ್
First published: