• Home
  • »
  • News
  • »
  • state
  • »
  • Satish Jarkiholi: ಸಂಭಾಜಿಗೆ ಸತೀಶ್ ಜಾರಕಿಹೊಳಿ ಅವಮಾನ; ಮತ್ತೆ ವಿವಾದದ ಸುಳಿಯಲ್ಲಿ ಕೈ ನಾಯಕ!

Satish Jarkiholi: ಸಂಭಾಜಿಗೆ ಸತೀಶ್ ಜಾರಕಿಹೊಳಿ ಅವಮಾನ; ಮತ್ತೆ ವಿವಾದದ ಸುಳಿಯಲ್ಲಿ ಕೈ ನಾಯಕ!

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಮಹಾರಾಜ್ ಕುರಿತು ಸತೀಶ್ ಜಾರಕಿಹೊಳಿ ಮಾಡಿದ್ದ ಭಾಷಣಕ್ಕೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಸತೀಶ್ ಜಾರಕಿಹೊಳಿ (Satish Jarkiholi) ಭಾಷಣದ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ (Tweet) ಮಾಡಿದ್ದಾರೆ. ಶಿವಾಜಿ ಮಹಾರಾಜರ (Shivaji Maharaja) ಊಟದಲ್ಲಿ ಸಂಭಾಜಿ ವಿಷ ಹಾಕಿದ್ದರು. ಹೀಗಾಗಿ ಸಂಭಾಜಿಯವ್ರನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಲಾಯ್ತು. ಆದ್ರೂ ಧರ್ಮವೀರ ಸಂಭಾಜಿ ಎಂಬ ಹೆಸರಿಟ್ಟು ಇತಿಹಾಸ ಬರೆದಿದ್ದಾರೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ರು. ಅದೇ ವಿಚಾರಕ್ಕೆ ಫಡ್ನವೀಸ್ ಕಿಡಿಕಾರಿದ್ದಾರೆ. 


ಮತ್ತೆ ವಿವಾದ ಸುಳಿಯಲ್ಲಿ ಸತೀಶ್ ಜಾರಕಿಹೊಳಿ


ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಸುದ್ದಿಯಾಗಿದ್ದ ಸತೀಶ್ ಜಾರಕಿಹೊಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಕಾಂಗ್ರೆಸ್​ ನಾಯಕರ ಒತ್ತಡಕ್ಕೆ ಮಣಿದು ಸತೀಶ್ ಜಾರಕಿಹೊಳಿ ಹೇಳಿಕೆ ಹಿಂಪಡೆದಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.


satish jarkiholi given clarification his controversial statement mrq
ಶಾಸಕ ಸತೀಶ್ ಜಾರಕಿಹೊಳಿ


ಟ್ವೀಟ್​ ಮೂಲಕ ದೇವೇಂದ್ರ ಫಡ್ನವೀಸ್ ಕಿಡಿ


ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಮಹಾರಾಜ್ ಕುರಿತು ಸತೀಶ್ ಜಾರಕಿಹೊಳಿ ಮಾಡಿದ್ದ ಭಾಷಣಕ್ಕೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸತೀಶ್ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಫಡ್ನವೀಸ್ ಅವರು ಜಾರಕಿಹೊಳಿ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.ನವೆಂಬರ್ 6 ರಂದು ಬೆಳಗಾವಿಯ ನಿಪ್ಪಾಣಿಯಲ್ಲಿನ ಮಾನವ ಬಂಧುತ್ವ ವೇದಿಕೆಯಲ್ಲಿ ಸತೀಶ್ ಜಾರಕಿಹೊಳಿ ಮಾಡಿದ್ದ ಭಾಷಣದ ಮುಂದುವರಿದ ಮಾತುಗಳ ತುಣುಕನ್ನು ಫಡ್ನವೀಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಜಾರಕಿಹೊಳಿ ಅವರು ಧರ್ಮವೀರ ಸಂಭಾಜಿ ಮಹಾರಾಜ್ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಸತೀಶ್ ಜಾರಕಿಹೊಳಿ ಹೇಳಿದ್ದೇನು?


ಬ್ರಿಟಿಷರು ಸಂಭಾಜಿ ಮಹಾರಾಜ್ ಅವರನ್ನು ಬಂಧಿಸಿ, ಹತ್ಯೆ ಮಾಡಿದ್ದರು. ಏಕೆ ಹತ್ಯೆ ಮಾಡಿದರು? ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಬೆರೆಸಲಾಗಿತ್ತು. ಸಂಭಾಜಿ ಅವರನ್ನು ಹಿಡಿದು ಶಿಕ್ಷೆ ಕೊಟ್ಟಿದ್ದರು. ಈ ಕೋಪದಿಂದಾಗಿ ಅವರನ್ನು ಹಿಡಿದುಕೊಡಲಾಯಿತು. ಕೊನೆಗೆ ಅವರಿಗೆ ಧರ್ಮವೀರ ಸಂಭಾಜಿ ಎಂಬ ನಾಮಕರಣ ಮಾಡಿ ಇತಿಹಾಸ ಬರೆಯಲಾಗಿದೆ. ಈ ದೇಶದಲ್ಲಿ ಚರಿತ್ರೆ ಬರೆಯುವುದು ಬಹಳ ವಿಚಿತ್ರವಾಗಿದೆ. ಇಂತಹ ಇತಿಹಾಸ ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು ಎನ್ನಲಾಗಿದೆ.


ರಾಹುಲ್ ಗಾಂಧಿ ಅವರಿಗೂ ಟ್ಯಾಗ್


ಈ ವಿಡಿಯೋವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಿಸ್ಟರ್ ರಾಹುಲ್ ಗಾಂಧಿ, ಮಹಾನ್ ಛತ್ರಪತಿ ಸಂಭಾಜಿ ಮಹಾರಾಜ್ ಬಗ್ಗೆ ನಿಮ್ಮ ಪಕ್ಷದ ಶಾಸಕ ಕಾರಿಕೊಂಡಿರುವ ಶುದ್ಧ ಅಸಂಬದ್ಧ, ತಪ್ಪುದಾರಿಗೆ ಎಳೆಯುವ, ಅವಮಾನಕರ ಸುಳ್ಳನ್ನು ನೀವು ಒಪ್ಪುತ್ತೀರಾ? ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯೇ? ಮಹಾರಾಷ್ಟ್ರ ಇದನ್ನು ಸಹಿಸುವುದಿಲ್ಲ! ಎಂದು ಹೇಳಿ ಪೋಸ್ಟ್​ ಅನ್ನು ರಾಹುಲ್ ಗಾಂಧಿ ಅವರಿಗೂ ಟ್ಯಾಗ್ ಮಾಡಿದ್ದಾರೆ.


ಇದನ್ನೂ ಓದಿ: Camera Theft: ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕಿಳಿದ ಸ್ಟೂಡೆಂಟ್! ಮದುವೆ ಮನೆಯಲ್ಲಿ ಕ್ಯಾಮೆರಾ ಕದ್ದ ಖರ್ತನಾಕ್!


ಮಹಾರಾಷ್ಟ್ರದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಅನುಮೋದಿಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಆಗ್ರಹಿಸಿದ್ದಾರೆ.

Published by:ಪಾವನ ಎಚ್ ಎಸ್
First published: