Election Results: ಇದು ತಾತ್ಕಾಲಿಕ ಹಿನ್ನಡೆ, ಮತ್ತೆ ಹಂತ ಹಂತವಾಗಿ ಮೇಲೆ ಬರ್ತೀವಿ: ಸತೀಶ್ ಜಾರಕಿಹೊಳಿ

ಬಿಜೆಪಿಯವರು ಅಧಿಕಾರಕ್ಕೆ ಬರಲು‌ ನೂರು ವರ್ಷ ತೆಗೆದುಕೊಂಡರು. ಹಂತ ಹಂತವಾಗಿ ಮೇಲೆ ಬಂದ್ರು, ನಾವು ಹಂತ ಹಂತವಾಗಿ ಕೆಳಗೆ ಹೋಗಿದ್ದೀವಿ. ನಾವು ಮತ್ತೆ ಹಂತ ಹಂತವಾಗಿ ಮೇಲೆ ಬರ್ತಿವಿ. ಕಾಂಗ್ರೆಸ್ ನವರಿಗೆ ಇದೊಂದು ಪಾಠ, ಸಂಘಟನೆ ಮಾಡಲು ಒಂದು ಪಾಠ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಕಾಂಗ್ರೆಸ್ ನಲ್ಲಿ (Congress) ನಾಯಕತ್ವದ (Leadership) ಕೊರತೆ ಇಲ್ಲ. ನಮ್ಮದು ಪಕ್ಷ‌ ಆಧಾರಿತ ಚುನಾವಣೆ, ಪಕ್ಷದ ಮೇಲೆ ಚುನಾವಣೆ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (KPCC Secretary Satish Jarkiholi) ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ನಾಯಕತ್ವದಿಂದ  ಹಿನ್ನೆಡೆ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ನಮಗೆ ಟೆಂಪರವರಿ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಅವರ ನೇತೃತ್ವದಲ್ಲೇ  ಮುನ್ನಡೆಯುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಅವರು  ಧರ್ಮದ ಆಧಾರದ ಮೇಲೆ, ಗಲಭೆಗಳ ಮೇಲೆ ಚುನಾವಣೆ ಮಾಡ್ತಾರೆ. ಮೊನ್ನೆ 10 ಕೇಸರಿ ಟವೆಲ್ ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತು. ಕರ್ನಾಟಕದಲ್ಲಿ ನಾವು ಗಟ್ಟಿಯಾಗಿದ್ದೇವೆ. ಬೇರೆ ರಾಜ್ಯಕ್ಕೆ ಕರ್ನಾಟಕಕ್ಕೆ ಹೋಲಿಕೆ ಮಾಡಬಾರದು ಎಂದರು.

130 ಸೀಟು ಗೆಲ್ತೀವಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವತ್ತಿಗೆ ಅವರು 70-80 ಸೀಟನಲ್ಲಿದ್ದಾರೆ. ಮುಂದೆ ನೋಡೋಣ.  ಒಳಜಗಳ ಎಲ್ಲಾ ಕಡೆನು ಇರುತ್ತೆ, ಬೇರೆ ರಾಜ್ಯದಲ್ಲೂ ಇದೆ. ಈಗಾಗಲೇ ನಾವು ಪ್ರಿಪೇರ್ ಆಗಿದೀವಿ. ಬಿಜೆಪಿಯವರು ಅಧಿಕಾರಕ್ಕೆ ಬರಲು‌ ನೂರು ವರ್ಷ ತೆಗೆದುಕೊಂಡರು. ಹಂತ ಹಂತವಾಗಿ ಮೇಲೆ ಬಂದ್ರು, ನಾವು ಹಂತ ಹಂತವಾಗಿ ಕೆಳಗೆ ಹೋಗಿದ್ದೀವಿ. ನಾವು ಮತ್ತೆ ಹಂತ ಹಂತವಾಗಿ ಮೇಲೆ ಬರ್ತಿವಿ. ಕಾಂಗ್ರೆಸ್ ನವರಿಗೆ ಇದೊಂದು ಪಾಠ, ಸಂಘಟನೆ ಮಾಡಲು ಒಂದು ಪಾಠ ಎಂದು ಹೇಳಿದರು.

ಇದನ್ನೂ ಓದಿ:  Sumalatha Ambareesh ಕಾಂಗ್ರೆಸ್ ನಾಯಕರ ಜೊತೆಯಲ್ಲಿ ಬಂದಿದ್ಯಾಕೆ? ಸಾ.ರಾ.ಮಹೇಶ್ ಪ್ರಶ್ನೆ

ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು: ಡಿಕೆ ಸುರೇಶ್ ಪ್ರತಿಕ್ರಿಯೆ

ದೇಶದ ಜನ ಕಾಂಗ್ರೆಸ್ ಮೇಲಿನ ವಿಶ್ವಾಸ ಕಡಿಮೆ ಮಾಡಿದ್ದಾರೆ. ಇದರ ಬಗ್ಗೆ ಪಕ್ಷದ ನಾಯಕರು ಚರ್ಚೆ ಮಾಡ್ತಾರೆ. ಚುನಾವಣೆಯಲ್ಲಿ ಸೋಲು - ಗೆಲುವು ಸಾಧ್ಯ. ಎಲ್ಲಾ ಚುನಾವಣೆಗಳು ಒಂದೇ ರೀತಿ ಇರುವುದಿಲ್ಲ. ಪಂಜಾಬ್ ನಲ್ಲಿ ನಮ್ಮ ಪಕ್ಷದಲ್ಲಿ ಗೊಂದಲ ಉಂಟಾಯಿತು. ಸಿಎಂ ಆಗಿದ್ದವರು ಬಿಜೆಪಿಗೆ ಹೋದ್ರು, ಇದೆಲ್ಲವೂ ಸಮಸ್ಯೆ ಆಯ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಕುಗ್ಗಿದೆ ಅನ್ನೋದು ಸುಳ್ಳು ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ನಮ್ಮಲ್ಲಿ ಬಿಜೆಪಿ ಗೆಲವು ಪರಿಣಾಮ ಬೀರಲ್ಲ. ಮತ್ತೆ ಎದ್ದು ಬರುವ ಸಾಮರ್ಥ್ಯ ನಮಗಿದೆ, ಯಾರಿಗೂ ಆತಂಕ ಬೇಡ. ಜನ ಬಿಜೆಪಿ ವಿರುದ್ಧ ಬೇಸತ್ತಿದ್ದಾರೆ, ಮಾಧ್ಯಮಗಳು ವಸ್ತುಸ್ಥಿತಿಯನ್ನ ತೋರಿಸಬೇಕು. ಐಟಿ, ಈಡಿ, ಸಿಬಿಐ ವಿಚಾರಗಳ ಫಲಿತಾಂಶ ಇದಾಗಿದ್ದು, ಎಲ್ಲದಕ್ಕೂ ಅಂತ್ಯ ಇದೇ, ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಚಂದ್ರ ಹುಟ್ಟುತ್ತಾನೆ, ಮುಳುಗುತ್ತಾನೆ ಎಂದು ಹೇಳಿದರು.ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ ಇದ್ದರೆ ನೀವೆ ತೋರಿಸುತ್ತೀರಿ, ನೋಡೋಣ. ಒಂದು, ಎರಡು ಸೀಟ್ ಗೆದ್ದವರು ಇವತ್ತು ದೇಶ ಆಳ್ತಿದ್ದಾರೆ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ನುಡಿದರು.

ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್

ಇದೇ ವೇಳೆ ಈಗಲ್ ಟನ್ ರೆಸಾರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸಿದ್ದರಾಮಯ್ಯ - ಕುಮಾರಸ್ವಾಮಿ ವಾಗ್ವಾದ ವಿಚಾರಕ್ಕೆ ಡಿಕೆ ಸುರೇಶ್ ಪ್ರತಿಕ್ರಿಯಿಸಿದರು. ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೆ ಏನು ತೊಂದರೆ ಆಗಿದೆ. ಅವರೇ 27 ಎಕರೆ ಸರ್ಕಾರಿ ಜಾಗವನ್ನ ಸರ್ಕಾರಕ್ಕೆ ಬರೆಸಿಕೊಟ್ಟರೆ ಸಂತೋಷ. ರೈತರು ಕಷ್ಟದಲ್ಲಿರುವ ಬಗ್ಗೆ ಮಾತನಾಡಿದ್ದರೆ ಉತ್ತರ ಕೊಡ್ತಿದ್ದೆ. ಅವರ ಬಣ್ಣ ಬಯಲಾಗಿರುವ ಸಂದರ್ಭದಲ್ಲಿ ನಾನೇಕೆ ಮಾತನಾಡಲಿ

ಇದನ್ನೂ ಓದಿ:  Karnataka Assembly: ನಿಮ್ಮ ಬಗ್ಗೆ ದುಃಖದ ಸಂಗತಿ ಏನ್​ ಗೊತ್ತಾ ಸಿದ್ರಾಮಣ್ಣ? ಕಾಂಗ್ರೆಸ್ ಧೂಳೀಪಟ ಫಿಕ್ಸ್​- ಬಿಎಸ್​ವೈ ಟಾಂಗ್​ ​

ಕಾನೂನಿನ ಪ್ರಕಾರವಾಗಿ ದಂಡ ವಿಧಿಸಿದ್ದಾರೆ. ಜಿಲ್ಲಾಧಿಕಾರಿ - ಸರ್ಕಾರ ತೀರ್ಮಾನ ಮಾಡಿದೆ. ರೆಸಾರ್ಟ್ ನವರು ಯಾವ ರೇಟ್ ಗೆ ಸೈಟ್ ಮಾಡಿದ್ದರು. ಅದರ ಆಧಾರದ ಮೇಲೆ ದಂಡ ವಿಧಿಸಿದ್ದಾರೆ.  ಇದರಲ್ಲಿ ಪಕ್ಷ - ನಾಯಕರ ಪಾತ್ರ ಏನು ಇಲ್ಲ. ಮುಖ್ಯಮಂತ್ರಿ ಗೆ ಹೇಳಿ ಬರೆಸಿಕೊಡಲಿ, ನಮ್ಮ ತಕರಾರಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
Published by:Mahmadrafik K
First published: