'ರಮೇಶ್​ ಯಡಿಯೂರಪ್ಪರನ್ನು ಬ್ಲ್ಯಾಕ್ ಮೇಲ್ ಮಾಡೋದು ಶತಸಿದ್ಧ'; ಸತೀಶ್​ ಜಾರಕಿಹೊಳಿ

ನೀರಾವರಿ ಮಂತ್ರಿ ಕೊಡಬೇಕು, ಡಿಸಿಎಂ ಕೊಡಬೇಕು ಅಂತಾ ಈಗ ಸಿದ್ದರಾಮಯ್ಯ ಬಳಿ ಹೋಗಿದ್ದಾನೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ.  ಸಂತೆಯಲ್ಲಿ ಕುರಿ ಆಡು ಖರೀದಿ ಮಾಡಿದಂತೆ ವ್ಯಾಪಾರ ಮಾಡ್ತಿದಾರೆ.  ಮೋಸ ಮಾಡೋಕೆ ಇವರು ರಾಜಕಾರಣ ಮಾಡೋಕೆ ಬಂದಿದ್ದಾರೆ. ನಮ್ಮ ಗೋಕಾಕ್‌ನಲ್ಲಿ ಇಂದಿಗೂ ಒಂದು  ಸರ್ಕಾರಿ ಪದವಿ ಕಾಲೇಜು ಇಲ್ಲ ಎಂದರು.

ರಮೇಶ್​​ ಜಾರಕಿಹೊಳಿ-ಸತೀಶ್​ ಜಾರಕಿಹೊಳಿ

ರಮೇಶ್​​ ಜಾರಕಿಹೊಳಿ-ಸತೀಶ್​ ಜಾರಕಿಹೊಳಿ

  • Share this:
ಬೆಳಗಾವಿ(ಡಿ.15): ರಾಜಕೀಯವಾಗಿ ಜಾರಕಿಹೊಳಿ‌ ಬ್ರದರ್ಸ್​​ ಒಂದಲ್ಲ ಎಂಬುದನ್ನು ಸಾಬೀತು ಮಾಡಿದ್ದೇವೆ. ರಮೇಶ್ ಮತ್ತು ಅವರ ಅಳಿಯಂದಿರ ವಿರುದ್ಧ ಹೋರಾಟ ನಿರಂತರ ಎಂದು ಮಾಜಿ ಸಚಿವ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಸದನದಲ್ಲಿ ಅಟ್ಯಾಕ್ ಮಾಡಬಾರದು ಸಾಫ್ಟ್ ಆಗಿರಬೇಕು ಅಂತಾ ರಮೇಶ್ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ. ನಾನು ಹೇಳಿದ್ದು ಕೇಳದಿದ್ರೆ ಮತ್ತೆ ನಾನು ಕಾಂಗ್ರೆಸ್ ಹೋಗ್ತೀನಿ ಅಂತಾ ಬಿಜೆಪಿಗೆ ಸಂದೇಶ ನೀಡಲು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಹಂಡ್ರೆಡ್ ಪರ್ಸೆಂಟ್ ರಮೇಶ್ ಜಾರಕಿಹೊಳಿ‌ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡ್ತಾರೆ. ಬಿಜೆಪಿಯಲ್ಲಿ ಇರುವ ಅಸಮಾಧಾನಿತರು, ಇವರೊಂದು 15 ಜನ ಸೇರಿ ಮತ್ತೆ ಸರ್ಕಾರ ಅಲ್ಲಾಡಿಸುತ್ತಾರೆ.  ಮೂರುವರೆ ವರ್ಷ ಮತ್ತೆ ತಮ್ಮ ಹಳೆಯ ಸ್ಥಿತಿ ಮುಂದುವರಿಸುತ್ತಾರೆ.  ದುಡ್ಡು ಮಾಡಬೇಕು ಅಧಿಕಾರ ಮಜಾ ಮಾಡಬೇಕು ಅಷ್ಟೇ ಇವರ ಉದ್ದೇಶ. ಈಗಾಗಲೇ ರಮೇಶ್ ಜಾರಕಿಹೊಳಿ‌ ಬ್ಲ್ಯಾಕ್‌ಮೇಲ್ ರಾಜಕಾರಣ ಆರಂಭವಾಗಿದೆ" ಎಂದು ಹೇಳಿದ್ದಾರೆ.

ನೀರಾವರಿ ಮಂತ್ರಿ ಕೊಡಬೇಕು, ಡಿಸಿಎಂ ಕೊಡಬೇಕು ಅಂತಾ ಈಗ ಸಿದ್ದರಾಮಯ್ಯ ಬಳಿ ಹೋಗಿದ್ದಾನೆ. ಈಗ ರಮೇಶ್ ಜಾರಕಿಹೊಳಿಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ.  ಸಂತೆಯಲ್ಲಿ ಕುರಿ ಆಡು ಖರೀದಿ ಮಾಡಿದಂತೆ ವ್ಯಾಪಾರ ಮಾಡ್ತಿದಾರೆ.  ಮೋಸ ಮಾಡೋಕೆ ಇವರು ರಾಜಕಾರಣ ಮಾಡೋಕೆ ಬಂದಿದ್ದಾರೆ. ನಮ್ಮ ಗೋಕಾಕ್‌ನಲ್ಲಿ ಇಂದಿಗೂ ಒಂದು  ಸರ್ಕಾರಿ ಪದವಿ ಕಾಲೇಜು ಇಲ್ಲ ಎಂದರು.

ಯಡಿಯೂರಪ್ಪರನ್ನು ರಮೇಶ್ ಬ್ಲ್ಯಾಕ್ ಮೇಲ್ ಮಾಡೋದು ಶತಸಿದ್ಧ. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಆಗ ಯಡಿಯೂರಪ್ಪ, ಬಾಲಚಂದ್ರ ಪಡೆಯೂ ಬರಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ. ಇನ್ನೂ ಮೂರು ವರ್ಷ ಬಳಿಕವೇ ರಮೇಶ್ ಹಳ್ಳಿಗೆ ಬರೋದು. ಬೈಎಲೆಕ್ಷನ್ ನಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದರು. ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ಇನ್ನೂ ಮೂರು ವರ್ಷಕ್ಕೆ ಹಳೆಯದಾಗಿ ಹೋಗಿರುತ್ತೆ ಈ ಗಿರಾಕಿ ಎಂದು ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಜಾರಕಿಹೊಳಿ‌ ವ್ಯಂಗ್ಯ ಮಾಡಿದರು.

ಕೊನೆಯ ಘಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ‌ ಆಫೀಸ್ ಒತ್ತಡದಿಂದ ಮತಗಳು ಕಡಿಮೆ ಬಂದವು. ಅಂಬಿರಾವ್‌ಗೆ ಸೋಲುತ್ತೇವೆಂದು ಗೊತ್ತಾಗುತ್ತಿದ್ದಂತೆ ಲಕ್ಷಗಟ್ಟಲೆ ಹಣಹಂಚಿಕೆ ಮಾಡಿದರು. ನಮ್ಮ ಜನರನ್ನು ಹೆದರಿಸದೇ ಹೋಗಿದ್ದರೆ ನಾವೇ ಗೆಲ್ಲುತ್ತಿದ್ದೆವು. ಗೊಡಚನಮಲ್ಕಿ ಒಂದೇ ಊರಲ್ಲಿ ಎಂಎಲ್‌ಎ ಆಫೀಸ್‌ನವರು 240 ಜನ ಬಳಿ ಹಣ ಪಡೆದಿದ್ದರು. ಮನೆ ಕಟ್ಟಿಸಿಕೊಡ್ತೇವೆ ಅಂತಾ 240 ಜನರಿಂದ ತಲಾ 30 ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ರು. ವೋಟ್ ಹಾಕಲಿಲ್ಲ ಅಂದ್ರೆ ಆ ಹಣ ಕೊಡಲ್ಲ ಅಂತಾ ಬೆದರಿಕೆ ಒಡ್ಡಿದ್ರು ಅಂತಾ ಗೊತ್ತಾಯ್ತು. ಈ ರೀತಿ ಬ್ಲ್ಯಾಕ್ ಮೇಲ್ ಮಾಡಿ ರಮೇಶ್ ಜಾರಕಿಹೊಳಿ‌ ಚುನಾವಣೆ ಗೆದ್ದಿದ್ದಾರೆ ಎಂದು ರಮೇಶ ಜಾರಕಿಹೊಳಿ‌ ವಿರುದ್ಧ ಸತೀಶ್ ಜಾರಕಿಹೊಳಿ‌ ಗಂಭೀರ ಆರೋಪ ಮಾಡಿದರು.

ಗೋಕಾಕ್ ಕ್ಷೇತ್ರದಲ್ಲಿ ಭ್ರಷ್ಟಾಚಾರ ಬಗ್ಗೆ 37 ಆರೋಪಗಳನ್ನು ಮಾಡಿದ್ದೇವೆ. ಗೋಕಾಕ್ ಫಾಲ್ಸ್‌ನಲ್ಲಿ 30 - 40 ವರ್ಷಗಳಿಂದ ಕೆಲ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಮೊನ್ನೆ ನಾವು ಸುಮಾರು 200 ಮನೆಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಿದ್ದೇವೆ. ನಾವು ಕರೆಂಟ್ ನೀಡಲ್ಲ ಅಂತಾ ಹೇಳಿದ್ದ ರಮೇಶ್ ಗೆ ಮತ ಹಾಕಿದ್ದಾರೆ. ಯಡಿಯೂರಪ್ಪ ‌ನೋಡಿ, ಬಿಜೆಪಿ ನೋಡಿ ರಮೇಶ್ ಗೆ ಜನ ಮತ ಹಾಕಿದ್ರು. ಚುನಾವಣೆ ವೇಳೆ ನಿಮಗೆ ಕೊಟ್ಟ ಮಾತುಗಳನ್ನೆಲ್ಲಾ ಈಡೇರಿಸುತ್ತೇವೆ. ಜನರ ಬಳಿ ಹೋಗಿ ಸಮಸ್ಯೆ ಆಲಿಸುವಂತೆ ವೇದಿಕೆ ಮೇಲಿಂದಲೇ ಲಖನ್ ಗೆ ಸತೀಶ್ ಸಲಹೆ ನೀಡಿದರು.

ಬುದ್ಧ, ಬಸವಣ್ಣ, ಅಂಬೇಡ್ಕರ್ ಪರ ಯಾರಿದ್ದಾರೆ? ಅಂಥವರು ನಮಗೆ ವೋಟ್ ಹಾಕಿದ್ದಾರೆ. ದೇಶದಿಂದ ಓಡಿಸಿದಂತವರಿಂದ ಬಿಜೆಪಿಗೆ ವೋಟ್ ಬಿದ್ದಿವೆ. ಯಡಿಯೂರಪ್ಪ ಬರದಿದ್ದರೆ ರಮೇಶ್ 3ನೇ ಸ್ಥಾನದಲ್ಲಿರುತ್ತಿದ್ದ. ಯಡಿಯೂರಪ್ಪ, ಬಾಲಚಂದ್ರ ಬಂದಿದ್ದಕ್ಕೆ ರಮೇಶ್​ ಗೆದ್ದ. ಲಕ್ಷಗಟ್ಟಲೆ ಹಣ ಹಂಚಿ ರಮೇಶ್​​ ಗೆದ್ದಿದ್ದಾನೆ ಎಂದು ಆರೋಪ ಮಾಡಿದರು.

ಕಾನೂನು ಬದ್ಧವಾಗಿ ನೀವು ಇದ್ದರೆ ನಿಮ್ಮ ಜೊತೆ ನಾವಿರ್ತೀವಿ. ಗೆಲ್ಲಲು ಎಲ್ಲಾ ಅವಕಾಶ ನಮ್ಮ ಬಳಿ ಇದ್ದವು. ಬೆದರಿಕೆಯೊಡ್ಡಿ, ಹಣ ಹಂಚಿ ಕೊನೆ ಎರಡು ದಿವಸಗಳಲ್ಲಿ ಮತ ಕೈತಪ್ಪಿದ್ದವು. ಮುಂದಿನ ದಿನಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಮತಗಳನ್ನು ನಾವು ಪಡೆಯಬೇಕು. ಲಖನ್ ಜಾರಕಿಹೊಳಿ‌ ಮೇಲೆ ಹೆಚ್ಚಿನ ಜವಾವ್ದಾರಿ ಇದೆ. ಜನರ ಸಮಸ್ಯೆ ಇದ್ದಾಗ ಅವರ ಬಳಿ ಹೋದ್ರೆ ಜನರು ನಿಮ್ಮ ಜೊತೆಗಿರ್ತಾರೆ. ಕೆಲಸ ಮಾಡಿದರೆ ಟಿಕೆಟ್ ಬಾಗಿಲಿಗೆ ತಂದು‌ ಕೊಡೋ ಹಾಗೇ ಜನರೇ‌ ಮಾಡ್ತಾರೆ. ಟಿಕೆಟ್ ಸಿಗೋದು ಬಿಡೋದು ನಂತರದ ಕೆಲಸ, ಮೊದಲು ಸಂಘಟನೆ. ಏನೇ ಆದರೂ ಒಳ್ಳೆಯದಕ್ಕೆ ಅಂತಾರೆ. ರಮೇಶ್ ಜಾರಕಿಹೊಳಿ‌ ಏನು ಕೆಲಸ ಮಾಡ್ತಾರೆ ನೋಡೋಣ ಎಂದರು.
Published by:Latha CG
First published: